

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್
ಪಿಟಿಐ ಚಿತ್ರ
ಮಾಸ್ಕೊ: ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಂಡಿರುವ ಉದ್ವಿಗ್ನತೆಯನ್ನು ನಿವಾರಿಸಲು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಯತ್ನಿಸಲಿದ್ದಾರೆ ಎಂದು ಕ್ರೆಮ್ಲಿನ್ ಮಂಗಳವಾರ ತಿಳಿಸಿದೆ.
ಕೊಲ್ಲಿ ದೇಶಗಳ ತೈಲ ಘಟಕಗಳು, ಮೂಲಸೌಕರ್ಯ ಗಳನ್ನು ಗುರಿಯಾಗಿಸಿಕೊಂಡು ಇರಾನ್ ದಾಳಿ ನಡೆಸುತ್ತಿದೆ.
ಈ ದಾಳಿಗೆ ಅರಬ್ ರಾಷ್ಟ್ರಗಳ ಮುಖಂಡರು ಕಳವಳ ವ್ಯಕ್ತಪಡಿಸಿದ್ದು, ಇದನ್ನು ಇರಾನ್‌ನ ಗಮನಕ್ಕೆ ಪುಟಿನ್ ತರಲಿದ್ದಾರೆ ಎಂದೂ ಹೇಳಿದೆ.