ADVERTISEMENT

Washington Plane Crash | ಈ ಅವಘಡವನ್ನು ತಪ್ಪಿಸಬಹುದಿತ್ತು: ಡೊನಾಲ್ಡ್ ಟ್ರಂಪ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜನವರಿ 2025, 6:08 IST
Last Updated 30 ಜನವರಿ 2025, 6:08 IST
<div class="paragraphs"><p>ವಿಮಾನ ಪತನ, ಡೊನಾಲ್ಡ್ ಟ್ರಂಪ್</p></div>

ವಿಮಾನ ಪತನ, ಡೊನಾಲ್ಡ್ ಟ್ರಂಪ್

   

(ರಾಯಿಟರ್ಸ್ ಚಿತ್ರಗಳು)

ವಾಷಿಂಗ್ಟನ್: ರೊನಾಲ್ಡ್ ರೇಗನ್ ನ್ಯಾಷನಲ್ ವಿಮಾನ ನಿಲ್ದಾಣದಲ್ಲಿ ಅಮೆರಿಕದ ಸೇನಾ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದಿರುವ ಪ್ರಯಾಣಿಕ ಜೆಟ್ ವಿಮಾನ ನದಿಗೆ ಪತನಗೊಂಡಿದ್ದು, ಹಲವರು ಮೃತಪಟ್ಟಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ADVERTISEMENT

ವಾಷಿಂಗ್ಟನ್ ಡಿಸಿ ಸಮೀಪದಲ್ಲಿರುವ ಪೊಟೊಮ್ಯಾಕ್ ನದಿಯಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಈ ಘಟನೆಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಘಾತ ವ್ಯಕ್ತಪಡಿಸಿದ್ದು, 'ಅವಘಡವನ್ನು ತಪ್ಪಿಸಬಹುದಿತ್ತು' ಎಂದು ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮ 'ಟ್ರುತ್'ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಟ್ರಂಪ್, 'ಇಂದು ಎಂತಹ ಭಯಾನಕ ರಾತ್ರಿ, ಎಲ್ಲರನ್ನು ದೇವರು ಆಶೀರ್ವದಿಸಲಿ' ಎಂದು ಹೇಳಿದ್ದಾರೆ.

'ವಿಮಾನ ನಿಲ್ದಾಣದತ್ತ ಆಗಮಿಸುತ್ತಿದ್ದ ವಿಮಾನ ದೈನಂದಿನ ಮಾರ್ಗದಲ್ಲಿತ್ತು. ಆದರೆ ಹೆಲಿಕಾಪ್ಟರ್ ನೇರವಾಗಿ ವಿಮಾನದತ್ತ ಮುನ್ನುಗ್ಗಿತ್ತು. ಇದು ಶುಭ್ರವಾದ ರಾತ್ರಿ, ವಿಮಾನದಲ್ಲಿ ದೀಪಗಳು ಉರಿಯುತ್ತಿದ್ದವು. ಹೆಲಿಕಾಪ್ಟರ್ ಏಕೆ ಮೇಲಕ್ಕೆ ಅಥವಾ ಕೆಳಕ್ಕೆ ಹೋಗಲಿಲ್ಲ ಅಥವಾ ತಿರುವು ಪಡೆದುಕೊಂಡಿಲ್ಲ?' ಎಂದು ಹೇಳಿದ್ದಾರೆ.

'ಕಂಟ್ರೋಲ್ ಟವರ್‌ ವಿಮಾನವನ್ನು ಕಂಡಿದೆ ಎನ್ನುವ ಬದಲು ಹೆಲಿಕಾಪ್ಟರ್‌ಗೆ ಏನು ಮಾಡಬೇಕೆಂದು ಏಕೆ ಹೇಳಿಲ್ಲ. ಇದೊಂದು ಕೆಟ್ಟ ಪರಿಸ್ಥಿತಿಯಾಗಿದ್ದು, ಅವಘಡವನ್ನು ತಪ್ಪಿಸಬಹುದಿತ್ತು' ಎಂದು ಹೇಳಿದ್ದಾರೆ.

ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಸಹ ದುರ್ಘಟನೆಕ್ಕೀಡಾದವರಿಗಾಗಿ ಪ್ರಾರ್ಥಿಸುವಂತೆ ಬೇಡಿಕೊಂಡಿದ್ದಾರೆ. 'ಪರಿಸ್ಥಿತಿಯ ಅವಲೋಕನ ಮಾಡಲಾಗುತ್ತಿದೆ' ಎಂದು ಹೇಳಿದ್ದಾರೆ.

ಅವಘಡದ ಹಿಂದಿನ ನಿಖರ ಕಾರಣ ತಿಳಿದು ಬಂದಿಲ್ಲ. ಸಾವು-ನೋವಿನ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಬರಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.