ADVERTISEMENT

ಯೆಮನ್‌ಗೆ ನೂತನ ಪ್ರಧಾನಿ ನೇಮಿಸಿದ ಸೌದಿ ಬೆಂಬಲಿತ ಅಧ್ಯಕ್ಷೀಯ ನಾಯಕತ್ವ ಮಂಡಳಿ

ಏಜೆನ್ಸೀಸ್
Published 16 ಜನವರಿ 2026, 7:05 IST
Last Updated 16 ಜನವರಿ 2026, 7:05 IST
<div class="paragraphs"><p>ಯೆಮನ್</p></div>

ಯೆಮನ್

   

ಚಿತ್ರ: ಐಸ್ಟಾಕ್

ಯೆಮನ್‌ ದೇಶದ, ಸೌದಿ ಬೆಂಬಲಿತ ಅಧ್ಯಕ್ಷೀಯ ನಾಯಕತ್ವ ಮಂಡಳಿಯು ಪ್ರಧಾನಿ ಸಲೇಮ್ ಬಿನ್ ಬ್ರೀಕ್ ಅವರ ರಾಜೀನಾಮೆ ಅಂಗೀಕರಿಸಿ, ದೇಶದ ನೂತನ ಪ್ರಧಾನ ಮಂತ್ರಿಯನ್ನಾಗಿ ವಿದೇಶಾಂಗ ಸಚಿವೆ ಶಯಾ ಮೊಹ್ಸೆನ್ ಜಿಂದಾನಿ ಅವರನ್ನು ನೇಮಿಸಿದೆ ಎಂದು ವರದಿಯಾಗಿದೆ.

ADVERTISEMENT

ಜಿಂದಾನಿ ಅವರ ಹೆಸರನ್ನು ಮುಂದಿನ ಸಚಿವ ಸಂಪುಟಕ್ಕೆ ಸೂಚಿಸುವುದಕ್ಕೆ ಮುನ್ನ ಬಿನ್ ಬ್ರೇಕ್ ಅವರು ಔಪಚಾರಿಕವಾಗಿ ರಾಜೀನಾಮೆ ಸಲ್ಲಿಸಿದರು. ಇದನ್ನು ಕೌನ್ಸಿಲ್ ಅನುಮೋದಿಸಿರುವುದಾಗಿ ವರದಿಯಾಗಿದೆ.

ಇತ್ತೀಚಿನ ದಿನಗಳಲ್ಲಿ ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ನಡುವೆ ಉದ್ವಿಗ್ನತೆ ಹೆಚ್ಚಾಗಲು ಯೆಮೆನ್ ಕಾರಣವಾಗಿತ್ತು ಎಂಬುದು ಗಮನಾರ್ಹ ಸಂಗತಿಯಾಗಿದೆ.

ಯುಎಇ ಬೆಂಬಲಿತ ಪ್ರತ್ಯೇಕತಾವಾದಿಗಳ ಗುಂಪು ಡಿಸೆಂಬರ್‌ನಲ್ಲಿ ದಕ್ಷಿಣ ಮತ್ತು ಪೂರ್ವ ಯೆಮೆನ್‌ ಪ್ರದೇಶಗಳ ಮೇಲೆ ಹಿಡಿತ ಸಾಧಿಸಿತು. ಮಾತ್ರವಲ್ಲ, ಸೌದಿ ಗಡಿಯ ಸಮೀಪಕ್ಕೆ ಬಂದಿದ್ದವು. ಇದನ್ನು ಸೌದಿ ತನ್ನ ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಎಂದು ಪರಿಗಣಿಸಿ ಆ ಪ್ರದೇಶಗಳನ್ನು ಹೆಚ್ಚಾಗಿ ಆಕ್ರಮಿಸಿಕೊಳ್ಳಲು ಮುಂದಾಯಿತು.

ಭೌಗೋಳಿಕ ರಾಜಕೀಯದಿಂದ ಹಿಡಿದು, ತೈಲ ಉತ್ಪಾದನೆಯವರೆಗಿನ ಹಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಹೊಂದಿರುವ ಎರಡು ಕೊಲ್ಲಿ ರಾಷ್ಟ್ರಗಳ ನಡುವೆ ಆಗಾಗ ಘರ್ಷಣೆ ಉಂಟಾಗುತ್ತಿರುತ್ತದೆ.

ಆದರೆ, ಇರಾನ್ ಬೆಂಬಲಿತ ಹೌತಿ ಪಡೆಗಳ ವಿರುದ್ಧ ಯೆಮೆನ್‌ ನಡೆಸಿದ ಅಂತರಿಕ ಯುದ್ಧದ ಸಂದರ್ಭದಲ್ಲಿ ಸೌದಿ ಅರೇಬಿಯಾ ಮತ್ತು ಯುಎಇ ದೇಶಗಳು ಒಟ್ಟಾಗಿ ಕೆಲಸ ಮಾಡಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.