ಮೈತ್ರಿ ಸರ್ಕಾರದ ಸ್ಥಿರತೆಯೇ ಅನಿಶ್ಚಿತವಾಗಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಜೆಟ್ ಮಂಡಿಸಿದ್ದೇ ಒಂದು ಸಾಧನೆ. ಚುನಾವಣಾ ವರ್ಷದಲ್ಲಿ ಕೃಷಿಕರ ಸಂಕಷ್ಟ ಪರಿಹರಿಸುವತ್ತ ಗಮನಹರಿಸಿದ್ದಾರೆ. ಇಂಥ ಸಂದರ್ಭದಲ್ಲಿ ನಗರಾಭಿವೃದ್ಧಿ ಮತ್ತು ಮೂಲಸೌಕರ್ಯಗಳ ಬಗ್ಗೆ ಸರ್ಕಾರದಿಂದ ಸೃಜನಾತ್ಮಕ ಯೋಜನೆಗಳನ್ನು ನಿರೀಕ್ಷಿಸುವುದು ಸರಿಯೆನಿಸದು. ಹಾಗಿದ್ದರೂ ಕುಮಾರಸ್ವಾಮಿ ಸರ್ಕಾರ ಬಜೆಟ್‌ನಲ್ಲಿ ಕೆಲವು ಆಸಕ್ತಿದಾಯಕ ಪ್ರಸ್ತಾವಗಳನ್ನು ಮುಂದಿಟ್ಟಿದೆ.
ಪ್ರತಿ ಬಜೆಟ್ ಬಹಳಷ್ಟು ಕಾರ್ಯಕ್ರಮ ಮತ್ತು ಯೋಜನೆಗಳಿಗೆ ಹಣ ಹೂಡುವುದನ್ನು ಪ್ರಸ್ತಾಪಿಸುತ್ತದೆ. ಇಲ್ಲಿ ಏನಾದರೂ ಹೊಸ ವಿಷಯಗಳನ್ನು ಆಧರಿಸಿದ ಆಲೋಚನೆಗಳಿದ್ದರೆ ಅವುಗಳನ್ನು ವಿಶ್ಲೇಷಿಸುವುದು ಮುಖ್ಯ. ನಗರಾಭಿವೃದ್ಧಿ ಸಂಬಂಧಿಸಿದಂತೆ ಯಾವುದೇ ಹೊಸ ಚಿಂತನೆಗಳು ಬಜೆಟ್‌ನಲ್ಲಿ ಇಲ್ಲ. ಆದರೆ, ಸುಸ್ಥಿರ ಮತ್ತು ಸಾರ್ವಜನಿಕ ಸಾರಿಗೆಗೆ ಒಟ್ಟಾರೆ ಒತ್ತು ಕೊಟ್ಟಿರುವುದು ಸ್ವಲ್ಪ ಉತ್ಸಾಹ ಮೂಡಿಸಿದೆ.
ಸುಸ್ಥಿರ ನಗರಾಭಿವೃದ್ಧಿಯ ಚಿಂತನೆಯನ್ನು ಬಜೆಟ್‌ನಲ್ಲಿ ಸ್ಪಷ್ಟಪಡಿಸಿಲ್ಲ. ಖಾಸಗಿ ಸಾರಿಗೆ ವ್ಯವಸ್ಥೆಯನ್ನೂ ಬಳಸುವಂತೆ ಸಾರ್ವಜನಿಕರಿಗೆ ಉತ್ತೇಜಿಸಿ ತನ್ಮೂಲಕ ಸುಸ್ಥಿರತೆ ಸಾಧಿಸುವ ಗುರಿಯನ್ನು ಬಜೆಟ್ ಹೊಂದಿದೆ. ಈ ಹಿಂದೆಯೇ ಪ್ರಕಟಿಸಲಾದ ಎಲಿವೇಟೆಡ್ ಕಾರಿಡಾರ್ ಯೋಜನೆಗೆ ಈ ವರ್ಷ ಸಾವಿರ ಕೋಟಿ ಮಂಜೂರು ಮಾಡಲಾಗಿದೆ.
ಬೆಂಗಳೂರು ಮೊಬಿಲಿಟಿ ಸ್ಕೀಂ (ಬೆಂಗಳೂರು ಚಲನಶೀಲತೆಯ ಯೋಜನೆ) ಒಂದು ಹೊಸ ಪ್ರಕಟಣೆ. ಸಮಗ್ರ ಸಾರಿಗೆ ಕಾರ್ಯಕ್ರಮ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ. ಬಸ್‌ಗಳ ಹೆಚ್ಚಳ, ಪಾದಚಾರಿ ಕೇಂದ್ರಿತ ರಸ್ತೆಗಳ ನಿರ್ಮಾಣ ಈ ಯೋಜನೆ ಅಡಿ ಆಗಲಿವೆ. ಪಾರ್ಕಿಂಗ್ ನಿಯಮಗಳು ಮತ್ತು ಅನುಷ್ಠಾನ ನೀತಿಯನ್ನು ಮೊದಲು ಬೆಂಗಳೂರು ಮತ್ತು ಎರಡನೇ ಹಂತದ ನಗರಗಳಲ್ಲಿ ಜಾರಿಗೊಳಿಸಲು ಪ್ರಸ್ತಾವ ಇಟ್ಟಿರುವುದು ಒಳ್ಳೆಯ ಬೆಳವಣಿಗೆ. ಬೇಕಾಬಿಟ್ಟಿ ಪಾರ್ಕಿಂಗ್ ಪ್ರವೃತ್ತಿ ಭಾರತೀಯ ಮನಸ್ಥಿತಿಯ ಮೂಲದಲ್ಲೇ ಉಳಿದುಬಿಟ್ಟಿದೆ. ಪಾರ್ಕಿಂಗ್ ಮಾಡುವುದು ಕಾರು ಮಾಲೀಕನ ಜನ್ಮಸಿದ್ಧ ಹಕ್ಕು ಎಂಬಂತಾಗಿದೆ. ಪಾರ್ಕಿಂಗ್ ಸ್ಥಳಾವಕಾಶ ನೀಡುವುದು ಕಾರು ಮಾಲೀಕರಿಗೆ ನೀಡುವ ‘ನೆರವು’ ಎಂಬುದನ್ನು ಯಾರೂ ಅರ್ಥ ಮಾಡಿಕೊಂಡಿಲ್ಲ.
ಬಹಳ ಕಾಲದ ಬೇಡಿಕೆಯಾಗಿದ್ದ ಬೆಂಗಳೂರು ಉಪನಗರ ರೈಲು ಯೋಜನೆಯನ್ನು ಅನುಷ್ಠಾನಕ್ಕೆ ತರುವಲ್ಲಿ ವಿಶೇಷ ಉದ್ದೇಶದ ಘಟಕವನ್ನು ರಚಿಸುವ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾವ ಮಾಡಲಾಗಿದೆ. ಆದರೆ, ಹಿಂದೆಯೂ ಈ ಯೋಜನೆಗೆ ಹಲವು ಬಾರಿ ಹುಸಿ ಚಾಲನೆ ನೀಡಲಾಗಿತ್ತು. ಆದ್ದರಿಂದ ಇಲ್ಲಿ ಪ್ರಸ್ತಾಪಿಸಿದ ಮಾತ್ರಕ್ಕೆ ನಾವು ಸಂಭ್ರಮಿಸಬೇಕಿಲ್ಲ. ಕೆಲಕಾಲ ಕಾಯುವುದು ಉತ್ತಮ.
ನಗರಾಭಿವೃದ್ಧಿ ಸಂಬಂಧಿಸಿದಂತೆ ಈ ಬಜೆಟ್ ಹಿಂದಿನ ಆವೃತ್ತಿಗಳಂತೆಯೇ ಬೆಂಗಳೂರಿನ ಮೇಲೆಯೇ ಕೇಂದ್ರೀಕೃತವಾಗಿದೆ. ಹಾಗಿದ್ದರೂ ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ ಹೆಸರಿನಲ್ಲಿ ಕಲಬುರ್ಗಿ, ಮೈಸೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಬಳ್ಳಾರಿ, ತುಮಕೂರು, ಶಿವಮೊಗ್ಗ, ಮಂಗಳೂರು, ದಾವಣಗೆರೆ, ವಿಜಯಪುರಗಳ ಅಭಿವೃದ್ಧಿಗೆ ಸರಾಸರಿ 125ರಿಂದ 150 ಕೋಟಿ ಅನುದಾನ ಸಿಗಲಿದೆ. ಸಣ್ಣ ನಗರಗಳಿಗೆ ಸಂಬಂಧಿಸಿದಂತೆ ಯಾವುದೇ ಪ್ರಮುಖ ಘೋಷಣೆಗಳು ಇಲ್ಲ.
ಒಟ್ಟಿನಲ್ಲಿ ಬಜೆಟ್ ಸಮಸ್ಯಾತ್ಮಕ ಬೆಂಗಳೂರಿನ ಪಕ್ಷಪಾತಿಯಾಗಿದ್ದರೂ, ಬೃಹತ್ ರಸ್ತೆ ಯೋಜನೆಗಳಿಗೆ ವಿರೋಧವಿದ್ದರೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡಿರುವುದು ಶ್ಲಾಘನೀಯ.
* ಇವನ್ನೂ ಓದಿ...
*ಸಣ್ಣ ನೀರಾವರಿ, ಅಂತರ್ಜಲ ವೃದ್ಧಿಗೆ ಆದ್ಯತೆ
* ‘ಉಕ್ಕುವ ಹಾಲಿಗೆ ನೀರು ಚಿಮುಕಿಸಿದಂತೆ’
*ಅನ್ನದಾತನಿಗೆ ಹತ್ತಾರು ಯೋಜನೆ, ರಾಜ್ಯದಲ್ಲಿ ಪ್ರತ್ಯೇಕ ಬೆಳೆ ವಿಮೆ ಯೋಜನೆ
*ಬಜೆಟ್: ಯಾರು ಏನಂತಾರೆ?
*ಉದ್ಯಮ ವಲಯಕ್ಕೆ ಉತ್ತೇಜಕ ಬುತ್ತಿ
*ಬಜೆಟ್: ಪರಿಶಿಷ್ಟ ವರ್ಗಕ್ಕೆ ಭರ್ಜರಿ ಕೊಡುಗೆ
*ಸರ್ಕಾರ ಜನರ ಕಣ್ಣಿಗೆ ಮಣ್ಣೆರಚಿದೆ: ಯಡಿಯೂರಪ್ಪ
*ಸಾಲ ಮನ್ನಾಕ್ಕೆ ಇನ್ನೂ ಹಣ ಕೊಡುವೆ: ಕುಮಾರಸ್ವಾಮಿ
*ಬೆಂಗಳೂರೇ ಮೊದಲು; ಉಳಿದವು ನಂತರ...
*ಪ್ರತಿಭಟನೆ ಮಧ್ಯೆಯೇ ಬಜೆಟ್ ಭಾಷಣ
*ಬಜೆಟ್‌ನಲ್ಲಿ ಜಿಲ್ಲಾವಾರು ಹಂಚಿಕೆ; ಸಮತೋಲನದ ಸರ್ಕಸ್
*ಬರ ಪರಿಸ್ಥಿತಿ: ಆರ್ಥಿಕ ವೃದ್ಧಿ ದರ ಕುಸಿತ
*ಮತ ಫಸಲಿಗಾಗಿ ಕುಮಾರ ಬಿತ್ತನೆ
*ವಿಶ್ವವಿಖ್ಯಾತ ತಾಣವಾಗಿ ಬಾದಾಮಿ ಅಭಿವೃದ್ಧಿ
*ಸಹಸ್ರ ಶಾಲೆಗಳ ಸ್ಥಾಪನೆ
*ಸ್ವಾಮೀಜಿ ಊರುಗಳಲ್ಲಿ ಸಾಂಸ್ಕೃತಿಕ ಕೇಂದ್ರಗಳು
*ಹೊಸ ಕ್ರೀಡಾ ವಸತಿ ನಿಲಯಗಳ ಘೋಷಣೆ
*ಆರೋಗ್ಯ ಮತ್ತು ಕುಟುಂಬ ಕಲ್ಯಾಣಕ್ಕೆ ಆದ್ಯತೆ
*‘ಮಾತೃಶ್ರೀ’ ಯೋಜನೆ ಸಹಾಯಧನ ಹೆಚ್ಚಳ
*ಆನ್‌ಲೈನ್ ಮೂಲಕ ಸಿಇಟಿ, ವಿದ್ಯಾರ್ಥಿಗಳಿಗೆ ಡಿಜಿಟಲ್ ಅಂಕಪಟ್ಟಿ
*ಬಜೆಟ್‌ನಲ್ಲಿ ಮಠಮಾನ್ಯಗಳ ತೃಪ್ತಿಪಡಿಸುವ ಯತ್ನ
*ಬಜೆಟ್: ಯಾರು ಏನಂತಾರೆ?
*ಚಲನಶೀಲ ಬೆಂಗಳೂರಿಗೆ ‘ಮತ್ತೊಂದು ಕಾವೇರಿ’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.