
ಗೆಟ್ಟಿ ಚಿತ್ರ
ಹೊಸ ವರ್ಷಕ್ಕೆ ಕಾಲಿಡಲು ಇನ್ನೂ ಕೆಲವೇ ಗಂಟೆಗಳು ಬಾಕಿ ಉಳಿದಿವೆ. 2025ಕ್ಕೆ ವಿದಾಯ ಹೇಳಿ, 2026ನ್ನು ಬರಮಾಡಿಕೊಳ್ಳಲು ಜಗತ್ತು ಕಾದು ಕುಳಿತಿದೆ. ಇದರ ಜೊತೆಗೆ ನಿಮ್ಮ ಪ್ರೀತಿಪಾತ್ರರಿಗೆ ಹೊಸ ವರ್ಷಕ್ಕೆ ವಿಶೇಷವಾಗಿ ಶುಭಾಶಯಗಳನ್ನು ತಿಳಿಸಬಹುದು. ಈ ಹೊಸ ವರ್ಷ ವಿಶೇಷವಾಗಿಸಲು ನಿಮ್ಮ ಸ್ನೇಹಿತರಿಗೆ, ಪೋಷಕರಿಗೆ ಹಾಗೂ ಪ್ರೀತಿಪಾತ್ರರಿಗೆ ಇನ್‌ಸ್ಟಾಗ್ರಾಂ, ವಾಟ್ಸಾಪ್, ಫೇಸ್‌ಬುಕ್ ಸೇರಿದಂತೆ ಇನ್ನಿತರ ಆಪ್‌ಗಳಲ್ಲಿ ವಿಶೇಷವಾಗಿ ಸಂದೇಶವನ್ನು ರವಾನಿಸಬಹುದು.
ಹೊಸ ವರ್ಷದ ಶುಭಾಶಯಗಳು 2026
ಕೊನೆಯಾಗುತ್ತಿರುವುದು ಕೇವಲ ಕ್ಯಾಲೆಂಡರ್ ಹೊರತು ಜೀವನವಲ್ಲ. ಈ ವರ್ಷ ನಮ್ಮನ್ನು ನಾವು ಸುಧಾರಿಸಿಕೊಳ್ಳಲು ಪ್ರಯತ್ನಿಸಿ. ಹೊಸ ವರ್ಷದ ಶುಭಾಶಯಗಳು.
2026ರ ಈ ಹೊಸ ವರ್ಷ ಭಗವಂತ ನಿಮಗೆ ಸುಖ, ಶಾಂತಿ ಹಾಗೂ ಸಂತೋಷ ನೀಡಲಿ. ನಿಮ್ಮ ಎಲ್ಲ ಕನಸುಗಳು ನನಸಾಗಲಿ ಎಂದು ಹಾರೈಸುತ್ತೇನೆ.
ಹೊಸ ವರ್ಷದ ಶುಭಾಶಯಗಳು. 2026ಕ್ಕೆ ನಿಮ್ಮ ಎಲ್ಲಾ ಕಷ್ಟದ ದಿನಗಳು ಮಾಯವಾಗಲಿ. ದೇವರು ನಿಮಗೆ ಶಕ್ತಿಯನ್ನು ಕೊಡಲಿ ಎಂದು ಪ್ರಾರ್ಥಿಸುತ್ತೇನೆ.
ನಿಮ್ಮ ಇಡೀ ಕುಟುಂಬಕ್ಕೆ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. 2026ರಲ್ಲಿ ನಿಮ್ಮ ಜೀವನ ಪ್ರಯಾಣ ಸಂತೋಷದಾಯಕವಾಗಿರಲಿ.
ಈ ವರ್ಷ ಹೆಚ್ಚು ಪ್ರೀತಿಸುವ ಜನರಿಂದ ತುಂಬಿರಲಿ. ಈ ವರ್ಷ ನಿಮಗೆ ಆರೋಗ್ಯ, ಸಂತೋಷ ಮತ್ತು ಕೃತಜ್ಞತೆಯಿಂದ ತುಂಬಿ ತುಳುಕಲಿ ಎಂದು ಹಾರೈಸುತ್ತೇನೆ.
ಕಳೆದ ವರ್ಷದ ಕಹಿ, ನೋವುಗಳನ್ನು ಮರೆತು ಹೊಸ ಜೀವನವನ್ನು ಆರಂಭಿಸಲಿರುವ ಒಂದು ಅವಕಾಶ. ಈ ಹೊಸ ವರ್ಷ ನಿಮ್ಮ ಜೀವನದಲ್ಲಿ ಹರುಷವನ್ನು ತರಲೆಂದು ಹಾರೈಸುತ್ತೇನೆ.
ಕಹಿ ನೆನಪುಗಳನ್ನು ಮರೆತು ಈ ವರ್ಷವನ್ನು ಸಂತೋಷದಿಂದ ಕಳೆಯಿರಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಹೊಸ ವರ್ಷದ ಶುಭಾಶಯಗಳು.
ಹೊಸ ವರ್ಷ ನಿಮ್ಮ ಬಾಳಲ್ಲಿ ಹೊಸ ಹರ್ಷ ತರಲಿ. ಈ ವರ್ಷ ನಿಮ್ಮ ಕನಸುಗಳೆಲ್ಲಾ ನನಸಾಗಲಿ, ಹೊಸ ವರ್ಷದ ಶುಭಾಶಯಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.