ADVERTISEMENT

ತಿಂಗಳಿಗೊಮ್ಮೆ ಬಡ್ಡಿ ಪಡೆಯಬೇಕೆ? ಹಾಗಿದ್ರೆ MIS ಯೋಜನೆಯಲ್ಲಿ ಹೂಡಿಕೆ ಮಾಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಸೆಪ್ಟೆಂಬರ್ 2025, 9:13 IST
Last Updated 9 ಸೆಪ್ಟೆಂಬರ್ 2025, 9:13 IST
<div class="paragraphs"><p>ಕಾಲ್ಪನಿಕ ಚಿತ್ರ</p></div>

ಕಾಲ್ಪನಿಕ ಚಿತ್ರ

   
ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆಯು 5 ವರ್ಷಗಳ ಅವಧಿಯನ್ನು ಹೊಂದಿದೆ. ಈ ಯೋಜನೆಯಡಿ ಎರಡು ಬಗೆಯ ಖಾತೆಗಳನ್ನು ತೆರೆಯಬಹುದು. ಏಕ ಖಾತೆಯಲ್ಲಿ ₹9 ಲಕ್ಷದ ವರೆಗೂ ಹೂಡಿಕೆ ಮಾಡಬಹುದು. ಜಂಟಿ ಖಾತೆಯಲ್ಲಿ ₹15 ಲಕ್ಷದ ವರೆಗೂ ಹೂಡಿಕೆ ಮಾಡಬಹುದು. ಹೂಡಿಕೆ ಮಾಡಿದ ಹಣಕ್ಕೆ ಶೇ 7.8 ಬಡ್ಡಿದರದಲ್ಲಿ ತಿಂಗಳಿಗೊಮ್ಮೆ ಹಣವನ್ನು ಪಡೆಯಬಹುದು.  

ಬ್ಯಾಂಕುಗಳಂತೆ ಅಂಚೆ ಕಚೇರಿಗಳಲ್ಲಿಯೂ ಹಣವನ್ನು ಉಳಿತಾಯ ಮಾಡಬಹುದು. ಅಂಚೆ ಇಲಾಖೆಯಲ್ಲಿ ನಿಗದಿತ ಅವಧಿಗೆ ಹಣವನ್ನು ಹೂಡಿಕೆ ಮಾಡುವುದರೊಂದಿಗೆ ಪ್ರತಿ ಹೂಡಿಕೆಗೆ ಆದಾಯ ತೆರಿಗೆ ವಿನಾಯಿತಿಯ ಜೊತೆಗೆ ಹೆಚ್ಚಿನ ಬಡ್ಡಿದರವನ್ನು ಪಡೆಯಬಹುದಾಗಿದೆ.

ಅಂಚೆ ಇಲಾಖೆಯ ಹಲ‌ವು ಯೋಜನೆಗಳಲ್ಲಿ ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆ (‌MIS) ಒಂದಾಗಿದೆ. ಈ ಯೋಜನೆಯಲ್ಲಿ ಒಮ್ಮೆ ಹಣವನ್ನು ಹೂಡಿಕೆ ಮಾಡಿದರೆ ಪ್ರತಿ ತಿಂ‌ಗಳು ಠೇವಣಿಯ ಮೇಲೆ ಬಡ್ಡಿಯನ್ನು ಪಡೆಯಬಹುದು. ನಾಗರಿಕರು ತಮ್ಮ ಮಾಸಿಕ ಖರ್ಚುಗಳನ್ನು ಭರಿಸಲು ಈ ಯೋಜನೆಯು ಸಹಕಾರಿಯಾಗಿದೆ. ಇಲ್ಲಿ ಹಣವನ್ನು ಹೂಡಿಕೆ ಮಾಡುವುದರಿಂದ ಶೇ 7.8 ರಷ್ಟು ಬಡ್ಡಿಯನ್ನು ಮಾಸಿಕವಾಗಿ ಪಡೆಯಬಹುದು ಎಂದು ಅಂಚೆ ಇಲಾಖೆಯು ‌ಹೇಳಿದೆ. 

ADVERTISEMENT

ಈ ಯೋಜನೆಯನ್ನು ಪಡೆಯುವುದು ಹೇಗೆ? ಹೂಡಿಕೆ ಹಾಗೂ ಹಿಂಪಡೆಯುವ ಸೌಲಭ್ಯಗಳೇನು? ಎಂಬ ಮಾಹಿತಿ ಇಲ್ಲಿದೆ. 

‌ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆಯು 5 ವರ್ಷಗಳ ಅವಧಿಯನ್ನು ಹೊಂದಿದೆ. ಈ ಯೋಜನೆಯಡಿ ಎರಡು ಬಗೆಯ ಖಾತೆಗಳನ್ನು ತೆರೆಯಬಹುದು. ಏಕ ಖಾತೆಯಲ್ಲಿ ₹9 ಲಕ್ಷದ ವರೆಗೂ ಹೂಡಿಕೆ ಮಾಡಬಹುದು. ಜಂಟಿ ಖಾತೆಯಲ್ಲಿ ₹15 ಲಕ್ಷದ ವರೆಗೂ ಹೂಡಿಕೆ ಮಾಡಬಹುದು. ಹೂಡಿಕೆ ಮಾಡಿದ ಹಣಕ್ಕೆ ಶೇ 7.8 ಬಡ್ಡಿದರದಲ್ಲಿ ತಿಂಗಳಿಗೊಮ್ಮೆ ಹಣವನ್ನು ಪಡೆಯಬಹುದು.  

ಖಾತೆ ತೆರೆಯಲು ಬೇಕಾದ ಅರ್ಹತೆಗಳೇನು?

  • ಈ ಯೋಜನೆಯಡಿ ಖಾತೆ ತೆರೆಯಲು ಭಾರತೀಯ ಪ್ರಜೆ ಆಗಿರಬೇಕು.

  • ಅನಿವಾಸಿ ಭಾರತೀಯರಿಗೆ ಖಾತೆ ತೆರೆಯಲು ಅವಕಾಶವಿಲ್ಲ. 

  • 18 ವರ್ಷ ಮೇಲ್ಪಟ್ಟ ಎಲ್ಲರೂ ಖಾತೆ ತೆರೆಯಲು ಅರ್ಹರು. 

  • 10 ವರ್ಷ ಮೇಲ್ಪಟ್ಟ ಅಪ್ರಾಪ್ತ ವಯಸ್ಕರ ಹೆಸರಿನಲ್ಲಿ ಖಾತೆಯನ್ನು ತೆರೆಯಬಹುದು. ಅಂತಹ ಖಾತೆಯನ್ನು ಪೋಷಕರು ಅಥವಾ ಪಾಲಕರು ನಿರ್ವಹಿಸಬೇಕು.   

ಹೂಡಿಕೆಯ ನಿಯಮಗಳೇನು? 

  • ಖಾತೆಯಲ್ಲಿ ₹1000 ಜಮಾ ಮಾಡುವ ಮೂಲಕ ಖಾತೆ ತೆರೆಯಬಹುದು.                             

  • ಏಕ ವ್ಯಕ್ತಿ ಖಾತೆಯಲ್ಲಿ ಗರಿಷ್ಠ ₹9 ಲಕ್ಷ ಹಾಗೂ ಜಂಟಿ ಖಾತೆಯಲ್ಲಿ ₹15 ಲಕ್ಷದ ವರೆಗೂ ಠೇವಣಿ ಇಡಬಹುದು.

ಹೂಡಿಕೆ ಹಿಂಪಡೆಯುವುದು ಯಾವಾಗ ? 

  • ಖಾತೆ ತೆರೆದ ದಿನದಿಂದ ಒಂದು ವರ್ಷದ ಅವಧಿ ಮುಗಿದ ಬಳಿಕ ಯಾವುದೇ ಸಮಯದಲ್ಲಿ ಠೇವಣಿಯನ್ನು ಹಿಂಪಡೆಯಲು ಅಥವಾ ಖಾತೆ ಮುಚ್ಚಲು ಅವಕಾಶವಿದೆ.

  • ಠೇವಣಿಗೆ ಮಾಸಿಕವಾಗಿ ಸಿಗುವ ಬಡ್ಡಿಯನ್ನು ಖಾತೆದಾರ ಆಯಾ ತಿಂಗಳು ಪಡೆಯದಿದ್ದರೇ, ಆ ಬಡ್ಡಿಗೆ ಯಾವುದೇ ಹೆಚ್ಚುವರಿ ಬಡ್ಡಿಯನ್ನು ನೀಡಲಾಗುವುದಿಲ್ಲ. 

  • ಬಡ್ಡಿಯನ್ನು ಆಟೋ ಕ್ರೆಡಿಟ್ ಸೌಲಭ್ಯದ ಮೂಲಕ ಉಳಿತಾಯ ಖಾತೆಗೆ ಅಥವಾ ಇಸಿಎಸ್ ಮೂಲಕ ಬ್ಯಾಂಕ್ ಖಾತೆಗೆ ಪಡೆಯಬಹುದು.

ಅವಧಿಪೂರ್ವ ಮುಚ್ಚುವಿಕೆಯ ನಿಯಮಗಳೇನು? 

  • ಖಾತೆ ತೆರೆದು 1 ವರ್ಷ ಪೂರ್ಣಗೊಳಿಸಿದ ನಂತರ ಖಾತೆಯನ್ನು ಮುಚ್ಚಬಹುದು.

  • 3 ವರ್ಷದ ಮೊದಲು ಖಾತೆಯನ್ನು ಮುಚ್ಚಿದರೇ, ಠೇವಣಿಯ ಹಣದಲ್ಲಿ ಶೇ 2 ರಷ್ಟು ದಂಡವನ್ನು ಕಡಿತಗೊಳಿಸಿ ಉಳಿದ ಮೊತ್ತವನ್ನು ಖಾತೆದಾರನಿಗೆ ನೀಡಲಾಗುವುದು. 

  • 3 ವರ್ಷದ ನಂತರ ಅವಧಿ ಪೂರ್ಣವಾಗುವ ಮೊದಲು ಖಾತೆ ಮುಚ್ಚಿದರೇ ಶೇ 1 ರಷ್ಟು ದಂಡವನ್ನು ಕಡಿತಗೊಳಿಸಿ ಉಳಿದ ಮೊತ್ತವನ್ನು ಖಾತೆದಾರನಿಗೆ ನೀಡಲಾಗುವುದು. 

  • ಖಾತೆದಾರ ಮೃತಪಟ್ಟರೇ ಖಾತೆ ಮುಚ್ಚಬಹುದು. ಮೃತಪಟ್ಟ ಒಂದು ತಿಂಗಳ ಹಿಂದಿನವರೆಗೆ ಮಾತ್ರ ಬಡ್ಡಿ ದೊರೆಯಲಿದೆ.

ಈ ಯೋಜನೆಯಿಂದ ದೊರೆಯುವ ಬಡ್ಡಿಯನ್ನು ಅಂಚೆ ಇಲಾಖೆಯ ಇತರೆ ಯೋಜನೆಗಳಲ್ಲಿಯೂ ಹೂಡಿಕೆ ಮಾಡುವ ಅವಕಾಶವಿದೆ. ಆದ್ದರಿಂದ ಈ ಯೋಜನೆಯು ಉತ್ತಮವಾದ ಯೋಜನೆ ಎಂದು ಅಂಚೆ ಇಲಾಖೆ ಹೇಳುತ್ತದೆ.

ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಹತ್ತಿರದ ಅಂಚೆ ಕಚೇರಿ ಅಥವಾ ಅಂಚೆ ಇಲಾಖೆಯ ಅಧಿಕೃತ ಅಂತರ್ಜಾಲ ತಾಣಕ್ಕೆ ಭೇಟಿ ನೀಡಬಹುದು.     

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.