ADVERTISEMENT

RCB Dream | ಐಪಿಎಲ್‌ 18ರ ಹರೆಯ, ವಿರಾಟ್ ಅದೃಷ್ಟ ಸಂಖ್ಯೆಯೂ 18; ಈ ಸಲ..?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಮೇ 2025, 4:56 IST
Last Updated 29 ಮೇ 2025, 4:56 IST
<div class="paragraphs"><p>ವಿರಾಟ್ ಕೊಹ್ಲಿ</p></div>

ವಿರಾಟ್ ಕೊಹ್ಲಿ

   

(ಪಿಟಿಐ ಚಿತ್ರ)

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಚೊಚ್ಚಲ ಕಿರೀಟದ ಹುಡುಕಾಟದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಈ ಸಲ ಟ್ರೋಫಿ ಗೆಲ್ಲುವ ನಿರೀಕ್ಷೆ ಗರಿಗೆದರಿದೆ.

ADVERTISEMENT

18 ವರ್ಷಗಳಿಂದ ಆರ್‌ಸಿಬಿ ಚೊಚ್ಚಲ ಪ್ರಶಸ್ತಿಯ ನಿರೀಕ್ಷೆಯಲ್ಲಿದೆ. ಈ ಬಾರಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸುವುದರೊಂದಿಗೆ ಪ್ಲೇ-ಆಫ್ ಹಂತಕ್ಕೆ ಲಗ್ಗೆ ಇಟ್ಟಿದೆ.

ಮೂರು ಬಾರಿ ರನ್ನರ್-ಅಪ್...

ಈ ಹಿಂದೆ ಮೂರು ಬಾರಿ ಫೈನಲ್ ಪ್ರವೇಶಿಸಿದ್ದ ಆರ್‌ಸಿಬಿಯ ಪ್ರಶಸ್ತಿಯ ಕನಸು ಸ್ವಲ್ಪದರಲ್ಲೇ ಕೈತಪ್ಪಿತ್ತು. 2009, 2011 ಹಾಗೂ 2016ನೇ ಸಾಲಿನಲ್ಲಿ ಆರ್‌ಸಿಬಿ ರನ್ನರ್-ಅಪ್ ಆಗಿತ್ತು.

2009ರಲ್ಲಿ ಅನಿಲ್ ಕುಂಬ್ಳೆ, 2011ರಲ್ಲಿ ಡೇನಿಯಲ್ ವಿಟ್ಟೋರಿ ಹಾಗೂ 2016ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಅತ್ಯುತ್ತಮ ಸಾಧನೆ ಮಾಡಿತ್ತು. ಆದರೂ ಪ್ರಶಸ್ತಿ ಗಗನ ಕುಸುಮವಾಗಿತ್ತು.

ಅಲ್ಲದೆ ಈ ವರ್ಷ ಸೇರಿದಂತೆ ಕಳೆದ ಆರು ವರ್ಷಗಳಲ್ಲಿ ಐದನೇ ಸಲ ಪ್ಲೇ-ಆಫ್‌ಗೇರಿದ ಸಾಧನೆ ಮಾಡಿದೆ.

ಐಪಿಎಲ್‌ 18ರ ಹರೆಯ, ವಿರಾಟ್ ಅದೃಷ್ಟ ಸಂಖ್ಯೆಯೂ 18...

ಐಪಿಎಲ್ ಟೂರ್ನಿಯಲ್ಲಿ ಕಪ್ ಗೆಲ್ಲುವ ಆರ್‌ಸಿಬಿ ತಂಡದ ಕನಸು ಸತತ 17ನೇ ವರ್ಷವೂ ಕಮರಿತ್ತು. ಆದರೆ 18ನೇ ವರ್ಷವಾದ ಈ ಬಾರಿ ಮಗದೊಮ್ಮೆ ನಿರೀಕ್ಷೆ ಗರಿಗೆದರಿದೆ.

ವಿರಾಟ್ ಕೊಹ್ಲಿ ಅವರ ಅದೃಷ್ಟ ಸಂಖ್ಯೆಯೂ 18 ಆಗಿದ್ದು, ಹೆಚ್ಚಿನ ರೋಚಕತೆ ಮನೆ ಮಾಡಿದೆ.

ಐಪಿಎಲ್‌ನಲ್ಲಿ ಆರ್‌ಸಿಬಿ ಸಾಧನೆ:

  • 2008: ಲೀಗ್ ಹಂತ

  • 2009: ರನ್ನರ್-ಅಪ್

  • 2010: ಪ್ಲೇ-ಆಫ್

  • 2011: ರನ್ನರ್-ಅಪ್

  • 2012: ಲೀಗ್ ಹಂತ

  • 2013: ಲೀಗ್ ಹಂತ

  • 2014: ಲೀಗ್ ಹಂತ

  • 2015: ಪ್ಲೇ-ಆಫ್

  • 2016: ರನ್ನರ್ ಅಪ್

  • 2017: ಲೀಗ್ ಹಂತ

  • 2018: ಲೀಗ್ ಹಂತ

  • 2019: ಲೀಗ್ ಹಂತ

  • 2020: ಪ್ಲೇ-ಆಫ್

  • 2021: ಪ್ಲೇ-ಆಫ್

  • 2022: ಪ್ಲೇ-ಆಫ್

  • 2023: ಲೀಗ್ ಹಂತ

  • 2024: ಪ್ಲೇ-ಆಫ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.