ಏಷ್ಯಾ ಕಪ್
(ಚಿತ್ರ ಕೃಪೆ: X/@ACCMedia1)
ದುಬೈ: ಈ ಬಾರಿಯ ಏಷ್ಯಾ ಕಪ್ ಟೂರ್ನಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಆತಿಥ್ಯ ವಹಿಸಲಿದ್ದು, ಬಹುನಿರೀಕ್ಷಿತ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯವು ದುಬೈಯಲ್ಲಿ ನಡೆಯಲಿದೆ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ತಿಳಿಸಿದೆ.
ಏಷ್ಯಾ ಕಪ್ ಪುರುಷರ ಟಿ20 ಕ್ರಿಕೆಟ್ ಟೂರ್ನಿಯ ಪಂದ್ಯಗಳು ದುಬೈ ಹಾಗೂ ಅಬುಧಾಬಿ ನಗರಗಳಲ್ಲಿ ನಡೆಯಲಿದೆ. ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯ ಸೆಪ್ಟೆಂಬರ್ 14ರಂದು ದುಬೈಯಲ್ಲಿ ನಡೆಯಲಿದೆ ಎಂದು ತಿಳಿಸಿದೆ.
ಸೆಪ್ಟೆಂಬರ್ 9ರಿಂದ ಆರಂಭವಾಗಲಿರುವ ಟೂರ್ನಿಯು 28ರವರೆಗೆ ಮುಂದುವರಿಯಲಿದೆ. ದುಬೈಯಲ್ಲಿ 11 ಹಾಗೂ ಅಬುಧಾಬಿಯಲ್ಲಿ ಎಂಟು ಪಂದ್ಯಗಳು ಆಯೋಜನೆಯಾಗಲಿವೆ.
ಅಬುಧಾಬಿಯಲ್ಲಿ ಅಫಘಾನಿಸ್ತಾನ ಹಾಗೂ ಹಾಂಕಾಂಗ್ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದ್ದು, ಫೈನಲ್ ಪಂದ್ಯವು ದುಬೈಯಲ್ಲಿ ನಡೆಯಲಿದೆ.
ಗುಂಪುಗಳ ವಿಂಗಡನೆ:
ಒಟ್ಟು ಎಂಟು ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿದೆ.
ಎ ಗುಂಪು: ಭಾರತ, ಪಾಕಿಸ್ತಾನ, ಒಮಾನ್, ಯುಎಇ
ಬಿ ಗುಂಪು: ಬಾಂಗ್ಲಾದೇಶ, ಶ್ರೀಲಂಕಾ, ಅಪಘಾನಿಸ್ತಾನ, ಹಾಂಕಾಂಗ್
ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಆಡಬಾರದು ಎಂಬ ಕೂಗು ಜೋರಾಗಿ ಕೇಳಿಬರುತ್ತಿದೆ. ಈ ನಡುವೆ ಟೂರ್ನಿಯ ವೇಳಾಪಟ್ಟಿಯನ್ನು ಎಸಿಬಿ ಬಿಡುಗಡೆಗೊಳಿಸಿದೆ.
ಭಾರತದ ಪಂದ್ಯಗಳು ಇಂತಿದೆ:
ಸೆಪ್ಟೆಂಬರ್ 10: ಭಾರತ vs ಯುಎಇ, ದುಬೈ
ಸೆಪ್ಟೆಂಬರ್ 14: ಭಾರತ vs ಪಾಕಿಸ್ತಾನ, ದುಬೈ
ಸೆಪ್ಟೆಂಬರ್ 19: ಭಾರತ vs ಒಮಾನ್, ಅಬುಧಾಬಿ
ಸಂಪೂರ್ಣ ವೇಳಾಪಟ್ಟಿ ಇಂತಿದೆ:
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.