ADVERTISEMENT

ಪಂದ್ಯದ ವೇಳೆ ಹೃದಯಾಘಾತ: ಬಾಂಗ್ಲಾ ಕ್ರಿಕೆಟ್ ಆಟಗಾರ ತಮೀಮ್ ಇಕ್ಬಾಲ್‌ ಆಸ್ಪತ್ರೆಗೆ

ಏಜೆನ್ಸೀಸ್
Published 24 ಮಾರ್ಚ್ 2025, 9:38 IST
Last Updated 24 ಮಾರ್ಚ್ 2025, 9:38 IST
<div class="paragraphs"><p>ತಮೀಮ್ ಇಕ್ಬಾಲ್‌</p></div>

ತಮೀಮ್ ಇಕ್ಬಾಲ್‌

   

ಢಾಕಾ: ಪಂದ್ಯದ ವೇಳೆ ಬಾಂಗ್ಲಾದೇಶದ ಕ್ರಿಕೆಟ್‌ ಆಟಗಾರ, ಮಾಜಿ ನಾಯಕ ತಮೀಮ್ ಇಕ್ಬಾಲ್‌ ಅವರಿಗೆ ಹೃದಯಾಘಾತವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ

ಢಾಕಾ ಪ್ರೀಮಿಯರ್‌ ಲೀಗ್‌ ಪಂದ್ಯವಾಡುತ್ತಿರುವ ವೇಳೆ ಅವರಿಗೆ ಎದೆ ನೋವು ಕಾಣಸಿಕೊಂಡಿದೆ. ಮೊಹಮ್ಮದನ್ ಸ್ಪೋರ್ಟ್ಸ್ ಕ್ಲಬ್‌ ಮತ್ತು ಶಿನೆಪುಕರ್‌ ಕ್ರಿಕೆಟ್‌ ಕ್ಲಬ್ ನಡುವೆ ಪಂದ್ಯ ನಡೆಯುತ್ತಿತ್ತು.

ADVERTISEMENT

‘ಆಸ್ಪತ್ರೆಯಲ್ಲಿ ಆರಂಭಿಕ ತಪಾಸಣೆ ನಡೆಸಿದ ವೇಳೆ ತಮೀಮ್‌ ಅವರಿಗೆ ಸಣ್ಣ ಪ್ರಮಾಣದಲ್ಲಿ ಹೃದಯಾಘಾತವಾಗಿರುವುದು ಕಂಡುಬಂದಿತ್ತು. ಹೀಗಾಗಿ ಢಾಕಾಗೆ ಏರ್‌ಲಿಫ್ಟ್‌ ಮಾಡಲು ಯೋಜಿಸಲಾಗಿತ್ತು. ಆದರೆ ಹೆಲಿಪ್ಯಾಡ್‌ಗೆ ಕರೆದೊಯ್ಯುವ ವೇಳೆ ಮತ್ತೆ ತೀವ್ರವಾಗಿ ಎದೆನೋವು ಕಾಣಿಸಿಕೊಂಡಿದೆ. ಹೀಗಾಗಿ ವಾಪಸ್‌ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗುತ್ತಿದೆ. ತಮೀಮ್‌ ಅವರಿಗೆ ತೀವ್ರವಾದ ಹೃದಾಯಾಘಾತವಾಗಿದೆ. ವೈದ್ಯಕೀಯ ತಂಡ ಸಾಧ್ಯವಿರುವ ಎಲ್ಲಾ ರೀತಿಯ ಚಿಕಿತ್ಸೆ ನೀಡುತ್ತಿದೆ’ ಎಂದು ಬಾಂಗ್ಲಾದೇಶ ಕ್ರಿಕೆಟ್‌ ಬೋರ್ಡ್‌ನ ಮುಖ್ಯ ವೈದ್ಯ ಡಾ.ದೆಬಾಶಿಶ್‌ ಚೌಧರಿ ಹೇಳಿದ್ದಾರೆ.

ಬಳಿಕ ಆಸ್ಪತ್ರೆಗೆ ಭೇಟಿ ನೀಡಿದ ಬಾಂಗ್ಲಾದೇಶ ಕ್ರಿಕೆಟ್‌ ಬೋರ್ಡ್‌ ಅಧ್ಯಕ್ಷ ಫಾರುಕ್‌ ಅಹಮದ್‌, ‘ತಮೀಮ್‌ ಅವರ ಆರೋಗ್ಯ ಕೊಂಚ ಸುಧಾರಿಸಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.