ADVERTISEMENT

ಕೋಚ್ ಹುದ್ದೆಗೆ ಶಾಸ್ತ್ರಿ ಹೆಸರು: ವಿಶ್ವಕಪ್ ನಿರೀಕ್ಷಿಸುವಂತಿಲ್ಲ ಎಂದ ನೆಟ್ಟಿಗರು

ಟೀಂ ಇಂಡಿಯಾ ಕೋಚ್‌ ಆಯ್ಕೆ ವಿಚಾರ: ಸಿಎಸಿ ಶಿಫಾರಸು

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2019, 7:29 IST
Last Updated 17 ಆಗಸ್ಟ್ 2019, 7:29 IST
   

ಬೆಂಗಳೂರು: ಕ್ರಿಕೆಟ್‌ ಸಲಹಾ ಸಮಿತಿಯು(ಸಿಎಸಿ) ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಆಗಿ ರವಿಶಾಸ್ತ್ರಿ ಅವರನ್ನು ಮರುನೇಮಕ ಮಾಡುವಂತೆ ಶಿಫಾರಸು ಮಾಡಿದೆ ಎಂದು ಬಿಸಿಸಿಐ ಪ್ರಕಟಿಸಿರುವಟ್ವೀಟ್‌ಗೆ ನೆಟ್ಟಿಗರು ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ.

1983ರಲ್ಲಿ ವಿಶ್ವಕಪ್‌ ಕ್ರಿಕೆಟ್‌ ಚಾಂಪಿಯನ್‌ ಆಗಿದ್ದ ವೇಳೆ ಭಾರತ ತಂಡದ ನಾಯಕರಾಗಿದ್ದ ಕಪಿಲ್‌ ದೇವ್‌ ಅವರ ನೇತೃತ್ವದ ಕ್ರಿಕೆಟ್‌ ಸಲಹಾ ಸಮಿತಿ ಆಗಸ್ಟ್‌ 16ರಂದು (ಶುಕ್ರವಾರ) ಆರು ಜನ ಹಿರಿಯ ಕೋಚ್‌ಗಳ ಸಂದರ್ಶನ ನಡೆಸಿತ್ತು. ಸಂದರ್ಶನ ಪ್ರಕ್ರಿಯೆ ಮುಗಿದ ನಂತರ ಸುದ್ದಿಗೋಷ್ಠಿ ನಡೆಸಿದ್ದ ಸಮಿತಿ, ಮುಖ್ಯ ಕೋಚ್‌ ಹುದ್ದೆಗೆ ರವಿಶಾಸ್ತ್ರಿ ಅವರ ಹೆಸರನ್ನು ಶಿಫಾರಸು ಮಾಡುವುದಾಗಿ ತಿಳಿಸಿತ್ತು.ಹೀಗಾಗಿ ರವಿಶಾಸ್ತ್ರಿ ಅವರು ಮುಂದುವರಿಯುವುದು ಬಹುತೇಕ ಖಚಿತವಾಗಿದೆ.

ಸಿಎಸಿ ಸುದ್ದಿಗೋಷ್ಠಿಯ ವಿಡಿಯೊವನ್ನು ಬಿಸಿಸಿಐ ತನ್ನ ಟ್ವಿಟರ್‌ ಪುಟದಲ್ಲಿ ಹಂಚಿಕೊಂಡಿದೆ. ಶಿಫಾರಸ್ಸಿನ ಬಗ್ಗೆ ಬಹುತೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಕ್ಷಮಿಸಿ ಕಪಿಲ್‌ ದೇವ್‌ ಅವರೇ ನಿಮ್ಮ ನಿರ್ಧಾರದಿಂದ ತುಂಬಾ ಬೇಸರವಾಗಿದೆ. ದಯವಿಟ್ಟು ಕೋಚ್‌ ಬದಲಿಸಿ ಸರ್. ಇದು ಅತ್ಯಂತ ಕೆಟ್ಟ ನಿರ್ಧಾರ’ ಎಂದು ಹಲವರು ಮನವಿ ಮಾಡಿದ್ದಾರೆ.

‘ಅಯ್ಯೋ, ಸೋದರ ಯಾಕ್‌ ಬೇಸರ ಮಾಡ್ಕೊತಿಯ. ರವಿಶಾಸ್ತ್ರಿ ಅವರು ಕೋಚ್‌ ಅಗುವುದು ಖಚಿತ. ಸಚಿನ್‌ ತೆಂಡೂಲ್ಕರ್‌, ಸೌರವ್‌ ಗಂಗೂಲಿ, ವಿವಿಎಸ್‌ ಲಕ್ಷ್ಮಣ್‌ ಅವರನ್ನು ಸಿಎಸಿ ಸಮಿತಿಯಿಂದ ಹೊರಹಾಕಿದ್ದು ಅದಕ್ಕಾಗಿಯೇ ಅಲ್ಲವೇ. ಕಪಿಲ್ ದೇವ್‌ ಅವರು ವಿರಾಟ್‌ ಕೊಹ್ಲಿ ಮತ್ತು ಅವರ ತಂಡದೊಂದಿಗೆ ಕೈ ಜೋಡಿಸಿದ್ದಾರೆ. ಗಂಗೂಲಿ ಮತ್ತು ಲಕ್ಷ್ಮಣ್‌ ಸಮಿತಿಯಲ್ಲಿದ್ದಿದ್ದರೆ ರವಿಶಾಸ್ತ್ರಿ ಅವರ ಮರು ನೇಮಕ ಸಾಧ್ಯವಾಗುತ್ತಿರಲಿಲ್ಲ’ ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.

‘ಇದೊಂದು ದಯನೀಯ ಆಯ್ಕೆ. ಇದಕ್ಕಾಗಿ ಸಂದರ್ಶನವನ್ನೇ ನಡೆಸಬಾರದಿತ್ತು’ ಎಂಬುದು ಇನ್ನೊಬ್ಬರ ಅಭಿಪ್ರಾಯ.

ಸಿಎಸಿ ಶಿಫಾರಸು ವಿರೋಧಿಸಿನೆಟ್ಟಿಗರು ಮಾಡಿರುವ ಪ್ರಮುಖ ಟ್ವೀಟ್‌ಗಳು ಇಲ್ಲಿವೆ.

‘ನಾವು ಟಿ20 ವಿಶ್ವಕಪ್‌ ಅನ್ನೂ ಕಳೆದುಕೊಳ್ಳಲಿದ್ದೇವೆ’

‘ನೀವು ನಿಜವಾಗಿಯೂ ತಂಡದ ಪುನಶ್ಚೇತನವನ್ನು ಬಯಸಿದ್ದರೆ, ನೀವು ಸೌರವ್ ಗಂಗೂಲಿ ಅವರನ್ನು ಮುಖ್ಯ ಕೋಚ್‌ ಆಗಿ ನೇಮಿಸಿ. ಇಲ್ಲವಾದರೆ, ಮುಂದೆ ಏನಾಗಲಿದೆ ಎಂಬುದನ್ನು ನೋಡಿ’

‘ರವಿಶಾಸ್ತ್ರಿ ಅವರು ಇಲ್ಲಿ ದೊಡ್ಡ ಚಮಚಾಗಿರಿ ಮಾಡಿದ್ದಾರೆ. ನಾನು ಕಪಿಲ್‌ ದೇವ್‌ ಅವರ ದೊಡ್ಡ ಅಭಿಮಾನಿ. ಆದರೆ, ರವಿಶಾಸ್ತ್ರಿ ಅವರನ್ನು ಅವರು ಮುಖ್ಯ ಕೋಚ್‌ ಆಗಿ ಆಯ್ಕೆ ಮಾಡುತ್ತಾರೆ ಎಂದು ಎಣಿಸಿರಲಿಲ್ಲ’

‘ಭಾರತೀಯ ಕ್ರಿಕೆಟ್‌ಗೆ ಇದು ಕಪ್ಪು ದಿನ’

‘ಹಾಗಾದರೆ 2023ರ ವಿಶ್ವಕಪ್‌ ಅನ್ನು ಮರೆತುಬಿಡಿ. ಒಬ್ಬ ಉತ್ತಮ ಕೋಚ್‌ಗಾಗಿ ನಾವು ಮತ್ತಷ್ಟು ಕಾಯಬೇಕಿದೆ’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.