ಸುನಿಲ್ ಗವಾಸ್ಕರ್
(ಪಿಟಿಐ ಚಿತ್ರ)
ಸಿಡ್ನಿ: ಸಿಡ್ನಿ ಟೆಸ್ಟ್‌ನ ಮೂರನೇ ದಿನದಾಟಕ್ಕೆ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಅಲಭ್ಯರಾದರೆ 200 ರನ್ ಗಳಿಸಿದರೂ ಉಳಿಸಿಕೊಳ್ಳಲು ಸಾಧ್ಯವಾಗದು ಎಂದು ಕ್ರಿಕೆಟ್ ದಂಥಕತೆ ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ಎರಡನೇ ದಿನದಾಟದ ವೇಳೆ ಮೈದಾನ ತೊರೆದ ಬೂಮ್ರಾ, ಸ್ಕ್ಯಾನಿಂಗ್‌ಗೆ ಒಳಗಾಗಿದ್ದರು. ಊಟದ ವಿರಾಮದ ಬಳಿಕ ಕೇವಲ 1 ಓವರ್ ಮಾತ್ರ ಬೌಲಿಂಗ್ ಮಾಡಿದ್ದರು. ಸ್ಕ್ಯಾನಿಂಗ್ ಮುಗಿಸಿದ ಬಳಿಕ ಡ್ರೆಸಿಂಗ್ ರೂಮ್‌ಗೆ ಮರಳಿದ್ದರು. ಅವರ ಅನುಪಸ್ಥಿತಿಯಲ್ಲಿ ವಿರಾಟ್ ಕೊಹ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿದರು.
‘ಒಂದು ವೇಳೆ ಭಾರತ ಇನ್ನೂ 40 ರನ್ ಗಳಿಸಿ, 185 ರನ್ ಗುರಿ ನೀಡಿದರೆ, ಗೆಲ್ಲುವ ಸಾಧ್ಯತೆ ಇದೆ. ಆದರೆ ಇದೆಲ್ಲವೂ ಬೂಮ್ರಾ ಫಿಟ್ನೆಸ್ ಮೇಲೆ ಅವಲಂಬಿತವಾಗಿದೆ. ಬೂಮ್ರಾ ಫಿಟ್ ಆಗಿದ್ದರೆ 145–150 ರನ್ ಗಳಿಸಿದರೂ ಸಾಕು. ಒಂದು ವೇಳೆ ಬೂಮ್ರಾ ಫಿಟ್ ಇಲ್ಲದಿದ್ದರೆ 200 ರನ್ ಗಳಿಸಿದರೂ ಗೆಲುವು ಅಸಾಧ್ಯ’ ಎಂದು ಗವಾಸ್ಕರ್ ಅಭಿಪ್ರಾಯ ಪಟ್ಟಿದ್ದಾರೆ.
ದಿನದಾಟದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೌಲರ್ ಪ್ರಸಿದ್ಧ ಕೃಷ್ಣ, ಬೂಮ್ರಾಗೆ ಬೆನ್ನು ನೋವು ಕಾಣಿಸಿಕೊಂಡಿತು ಎಂದು ಹೇಳಿದ್ದಾರೆ.
ಈಗಾಗಲೇ ಬೂಮ್ರಾ ಸರಣಿಯಲ್ಲಿ 32 ವಿಕೆಟ್‌ಗಳನ್ನು ಪಡೆದಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ ಉಸ್ಮಾನ್ ಖಬಾಜ ಹಾಗೂ ಮಾರ್ನಸ್ ಲಾಬುಶೇನ್ ಅವರ ವಿಕೆಟ್ ಕಿತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.