ಜೋಶ್..... ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಇನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಪಡೆದ ಜೋಶ್ ಹ್ಯಾಜಲ್‌ವುಡ್ ಸಂಭ್ರಮ
-ಪಿಟಿಐ ಚಿತ್ರ
ಬ್ರಿಜ್‌ಟೌನ್ (ಬಾರ್ಬಾಡೋಸ್): ವೇಗದ ಬೌಲರ್ ಜೋಶ್ ಹ್ಯಾಜಲ್‌ವುಡ್ (43ಕ್ಕೆ5) ಅವರ ಐದು ವಿಕೆಟ್ ಗೊಂಚಲಿನ ನೆರವಿನಿಂದ ಆಸ್ಟ್ರೇಲಿಯಾ ತಂಡ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ತಂಡವನ್ನು ಮೂರೇ ದಿನಗಳ ಒಳಗೆ 159 ರನ್‌ಗಳಿಂದ ಸುಲಭವಾಗಿ ಸೋಲಿಸಿತು.
ಪಂದ್ಯದ ಮೂರನೇ ದಿನವಾದ ಶುಕ್ರವಾರ ಗೆಲ್ಲಲು 301 ರನ್‌ಗಳ ಸವಾಲು ಎದುರಿಸಿದ್ದ ವೆಸ್ಟ್ ಇಂಡೀಸ್ 33.4 ಓಔರುಗಳಲ್ಲಿ 141 ರನ್‌ಗಳಿಗೆ ಕುಸಿಯಿತು.
ಒಂದು ಹಂತದಲ್ಲಿ 88 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದ ರೋಸ್ಟನ್ ಚೇಸ್ ಬಳಗ ಕೊನೆಯಲ್ಲಿ ಪ್ರತಿರೋಧ ತೋರಿತು. ಜಸ್ಟಿನ್ ಗ್ರೀವ್ಸ್ (ಔಟಾಗದೇ 38, 53ಎ) ಮತ್ತು ಶಮರ್ ಜೋಸೆಫ್ (44, 22ಎ, 4x4, 6x4) ಒಂಬತ್ತನೇ ವಿಕೆಟ್‌ಗೆ 55 ರನ್ ಸೇರಿಸಿದ್ದರಿಂದ ಪಂದ್ಯ ಹೆಚ್ಚುವರಿ ಅವಧಿಗೆ ಬೆಳೆಯಿತು.
ಎರಡೂ ಇನಿಂಗ್ಸ್‌ಗಳಲ್ಲಿ ಅರ್ಧ ಶತಕ (59 ಮತ್ತು 61) ಬಾರಿಸಿದ ಮಧ್ಯಮ ಕ್ರಮಾಂಕದ ಬ್ಯಾಟರ್ ಟ್ರಾವಿಸ್ ಹೆಡ್ ಪಂದ್ಯದ ಆಟಗಾರ ಗೌರವಕ್ಕೆ ಪಾತ್ರರಾದರು.
ಮೂರು ಟೆಸ್ಟ್‌ಗಳ ಸರಣಿಯ ಎರಡನೇ ಪಂದ್ಯ ಗ್ರೆನಡಾದ ಸೇಂಟ್ ಜಾರ್ಜಸ್‌ನಲ್ಲಿ ಜುಲೈ 3ರಂದು ಆರಂಭವಾಗಲಿದೆ.
ಸ್ಕೋರುಗಳು: ಮೊದಲ ಇನಿಂಗ್ಸ್: ಆಸ್ಟ್ರೇಲಿಯಾ: 180; ವೆಸ್ಟ್ ಇಂಡೀಸ್: 190; ಎರಡನೇ ಇನಿಂಗ್ಸ್: ಆಸ್ಟ್ರೇಲಿಯಾ: 81.5 ಓವರುಗಳಲ್ಲಿ 310 (ಟ್ರಾವಿಸ್ ಹೆಡ್ 61, ಬ್ಯೂ ವೆಬ್‌ಸ್ಟರ್ 63, ಅಲೆಕ್ಸ್ ಕ್ಯಾರಿ 65; ಶಮರ್ ಜೋಸೆಫ್ 87ಕ್ಕೆ5); ವೆಸ್ಟ್ ಇಂಡೀಸ್: 33.4 ಓವರುಗಳಲ್ಲಿ 141 (ಜಸ್ಟಿನ್ ಗ್ರೀವ್ಸ್ ಔಟಾಗದೇ 38, ಶಮರ್ ಜೋಸೆಫ್ 44; ಜೋಶ್ ಹೇಜಲ್‌ವುಡ್ 43ಕ್ಕೆ5, ನಥಾನ್ ಲಯನ್ 20ಕ್ಕೆ2).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.