ADVERTISEMENT

ಪಾಕಿಸ್ತಾನಕ್ಕೆ ಭಾರತ ಕ್ರಿಕೆಟ್ ತಂಡ ಪ್ರವಾಸ: ಕ್ರೀಡಾ ಸಚಿವ ಠಾಕೂರ್ ಹೇಳಿದ್ದೇನು?

ಪಿಟಿಐ
Published 20 ಅಕ್ಟೋಬರ್ 2022, 11:04 IST
Last Updated 20 ಅಕ್ಟೋಬರ್ 2022, 11:04 IST
ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌
ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌   

ನವದೆಹಲಿ: 2023ರ ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಯುಪಾಕಿಸ್ತಾನದಲ್ಲಿ ನಿಗದಿಯಾಗಿದೆ. ಈ ಟೂರ್ನಿಯಲ್ಲಿ ಆಡಲು ಭಾರತ ತಂಡವು ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಲಿದೆಯೇ ಎಂಬ ವಿಚಾರವಾಗಿ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಗುರುವಾರ ಹೇಳಿಕೆ ನೀಡಿದ್ದಾರೆ.

'ಭಾರತ ತಂಡದ ಪಾಕಿಸ್ತಾನ ಪ್ರವಾಸದ ಬಗ್ಗೆಕೇಂದ್ರ ಗೃಹ ಸಚಿವಾಲಯವುನಿರ್ಧಾರ ತೆಗೆದುಕೊಳ್ಳಲಿದೆ. ಆಟಗಾರರ ಭದ್ರತೆ ಮತ್ತು ಸುರಕ್ಷತೆಯು ಅತ್ಯಂತ ಮುಖ್ಯವಾದ ವಿಚಾರ' ಎಂದುಠಾಕೂರ್‌ ತಿಳಿಸಿದ್ದಾರೆ. ಆದಾಗ್ಯೂ,ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಆಡಲು ಪಾಕ್ ಪಡೆ ಭಾರತಕ್ಕೆ ಬರಲಿದೆ ಎಂದಿರುವ ಅವರು, 'ಎಲ್ಲರಿಗೂ ಸ್ವಾಗತ' ಕೋರಿದ್ದಾರೆ.

ಭಾರತ ತಂಡವು ಪಾಕಿಸ್ತಾನಕ್ಕೆ ತೆರಳುವುದಿಲ್ಲ. ಬದಲಾಗಿ ತಟಸ್ಥ ಸ್ಥಳದಲ್ಲಿ ಟೂರ್ನಿ ಆಯೋಜಿಸಲಾಗುವುದು ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್‌ ಶಾ ಮಂಗಳವಾರ ಹೇಳಿದ್ದರು.

ADVERTISEMENT

ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ, ಭಾರತದಲ್ಲಿ ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್‌ನಿಂದ ಹಿಂದೆ ಸರಿಯುವ ಬೆದರಿಕೆ ಹಾಕಿದ್ದು, ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್ (ಎಸಿಸಿ) ಸದಸ್ಯ ಸ್ಥಾನ ತ್ಯಜಿಸುವ ಚಿಂತನೆ ನಡೆಸಿದೆ ಎಂದು ವರದಿಯಾಗಿತ್ತು.

ಶಾ ಹೇಳಿಕೆಯನ್ನು ಖಂಡಿಸಿದ್ದಪಾಕಿಸ್ತಾನದ ಮಾಜಿ ನಾಯಕ ಶಾಹೀದ್ ಅಫ್ರಿದಿ, ಭಾರತದಲ್ಲಿ ಆಡಳಿತ ಅನುಭವದ ಕೊರತೆಯಿದೆ ಎಂದು ವಾಗ್ದಾಳಿ ನಡೆಸಿದ್ದರು.

ಕಳೆದ ಒಂದು ವರ್ಷದಲ್ಲಿ ಎರಡು ತಂಡಗಳ ನಡುವೆ ಉತ್ತಮ ಒಡನಾಟ ಬೆಳೆದಿದೆ. ಇದರಿಂದ ಉಭಯ ದೇಶಗಳ ನಡುವೆ ಉತ್ತಮ ಭಾವನೆ ಉಂಟಾಗಿದೆ. ಹೀಗಿರುವಾಗ ಬಿಸಿಸಿಐ ಕಾರ್ಯದರ್ಶಿ ಟಿ20 ವಿಶ್ವಕಪ್ ವೇಳೆ ಇಂತಹ ಹೇಳಿಕೆಯನ್ನಾದರೂ ಏಕೆ ನೀಡುತ್ತಾರೆ? ಇದು ಭಾರತದಲ್ಲಿ ಕ್ರಿಕೆಟ್ ಆಡಳಿತ ಅನುಭವದ ಕೊರತೆಯನ್ನು ತೋರಿಸುತ್ತದೆ ಎಂದು ಗುಡುಗಿದ್ದರು.

ಈ ಸಂಬಂಧಿಸಿದಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಠಾಕೂರ್‌,'ವಿಶ್ವಕಪ್‌ಗೆ ಅರ್ಹತೆ ಪಡೆಯುವ ಎಲ್ಲ ತಂಡಗಳಿಗೂ ಭಾರತದಲ್ಲಿ ಸ್ಪರ್ಧಿಸಲು ಆಹ್ವಾನ ನೀಡಲಾಗಿದೆ. ಪಾಕಿಸ್ತಾನ ತಂಡ ಸಾಕಷ್ಟು ಬಾರಿ ಭಾರತಕ್ಕೆ ಆಗಮಿಸಿ ಕ್ರಿಕೆಟ್‌ ಆಡಿದೆ. ಯಾರಿಂದಲಾದರೂ ನಿರ್ದೇಶನ ಪಡೆಯಬೇಕಾದ ಸ್ಥಿತಿಯಲ್ಲಿಭಾರತ ಇಲ್ಲ ಎಂದುಕೊಂಡಿದ್ದೇವೆ. ಯಾರಾದರೂ ಹಾಗೆ ಮಾಡಲು (ನಿರ್ದೇಶನ ನೀಡಲು) ಕಾರಣಗಳೂ ಇಲ್ಲ. ಎಲ್ಲ ತಂಡಗಳೂ ಭಾರತಕ್ಕೆ ಆಗಮಿಸಲಿವೆ ಮತ್ತು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ ಎಂದು ಭಾವಿಸಿದ್ದೇವೆ' ಎಂದು ಠಾಕೂರ್‌ ತಿಳಿಸಿದ್ದಾರೆ.

ಇದೇ ವೇಳೆ ಮಾತನಾಡಿದ ಠಾಕೂರ್‌, ಮಧ್ಯಪ್ರದೇಶದ ಎಂಟು ನಗರಗಳಲ್ಲಿ ಜನವರಿ 31ರಿಂದ ಫೆಬ್ರುವರಿ 11ರ ವರೆಗೆ 5ನೇ ಆವೃತ್ತಿಯ ಖೇಲೊ ಇಂಡಿಯಾ ಯೂತ್‌ ಗೇಮ್ಸ್‌ ನಡೆಯಲಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.