ADVERTISEMENT

ಅಭಿಮಾನಿಗಳ ಹೃದಯ ಮರಳಿ ಗೆದ್ದಿದ್ದೇನೆ: ಹಾರ್ದಿಕ್ ಪಾಂಡ್ಯ

ಪಿಟಿಐ
Published 23 ಫೆಬ್ರುವರಿ 2025, 7:21 IST
Last Updated 23 ಫೆಬ್ರುವರಿ 2025, 7:21 IST
<div class="paragraphs"><p>ಹಾರ್ದಿಕ್ ಪಾಂಡ್ಯ</p></div>

ಹಾರ್ದಿಕ್ ಪಾಂಡ್ಯ

   

(ಪಿಟಿಐ ಚಿತ್ರ)

ದುಬೈ: 'ನಾನು ಕ್ರಿಕೆಟ್ ಅಭಿಮಾನಿಗಳ ಹೃದಯ ಮರಳಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದೇನೆ' ಎಂದು ಟೀಮ್ ಇಂಡಿಯಾದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.

ADVERTISEMENT

ಕಳೆದ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್‌ಗೆ ಮರಳಿದ್ದ ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ ಅವರಿಂದ ಕಪ್ತಾನಗಿರಿ ವಹಿಸಿಕೊಂಡಿದ್ದರು.

ಮುಂಬೈ ಇಂಡಿಯನ್ಸ್ ಮ್ಯಾನೇಜ್‌ಮೆಂಟ್‌ನ ಈ ನಿರ್ಧಾರವು ಅಭಿಮಾನಿಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಹಾರ್ದಿಕ್ ಪಾಂಡ್ಯ ಅವರನ್ನು ಗುರಿ ಮಾಡಿದ್ದ ಅಭಿಮಾನಿಗಳು, ಮೈದಾನದಲ್ಲೇ ವ್ಯಾಪಕವಾಗಿ ಗೇಲಿ ಮಾಡಿದ್ದರು.

ಆದರೆ ಕಳೆದ ವರ್ಷವೇ ನಡೆದ ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಪ್ರಶಸ್ತಿ ಗೆಲುವಿನಲ್ಲಿ ಹಾರ್ದಿಕ್ ಪಾಂಡ್ಯ ಮಹತ್ವದ ಪಾತ್ರ ವಹಿಸಿದ್ದರು. ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಓವರ್‌‌ನಲ್ಲಿ ಭಾರತಕ್ಕೆ ಚಾರಿತ್ರಿಕ ಗೆಲುವು ಒದಗಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು.

ಟೂರ್ನಿಯಲ್ಲಿ 144 ರನ್ ಗಳಿಸಿದ್ದ ಪಾಂಡ್ಯ 11 ವಿಕೆಟ್‌ಗಳನ್ನು ಪಡೆದು ಭಾರತದ ನೈಜ ಆಲ್‌ರೌಂಡ್ ಆಟಗಾರ ಎನಿಸಿದ್ದರು.

'ಅಭಿಮಾನಿಗಳೇ ಹೇಳಿದಂತೆ ನನ್ನ ಪಾಲಿಗೆ ಜೀವನ ಪೂರ್ಣ ವಲಯವನ್ನು ಪರಿಭ್ರಮಿಸಿದೆ. ಇಲ್ಲಿಂದ ಹಿಂದಕ್ಕೆ ತಿರುಗಿ ನೋಡುವ ಅಗತ್ಯವಿಲ್ಲ. ಅಭಿಮಾನಿಗಳ ಹೃದಯವನ್ನು ಮರಳಿ ಗೆದ್ದಿದ್ದೇನೆ' ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.

ಹಾರ್ದಿಕ್ ಪಾಂಡ್ಯ ಹೇಳಿಕೆಯನ್ನು ಬಿಸಿಸಿಐ, ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ.

'ಹೊಸ ವರ್ಷ, ಹೊಸ ಟೂರ್ನಿ ಮತ್ತು ಹೊಸ ಸವಾಲನ್ನು ಎದುರಿಸಲು ಸಜ್ಜಾಗಿದ್ದೇನೆ. ಮತ್ತೆ ಚಾಂಪಿಯನ್ ಆಗಲು ಸಿದ್ದರಾಗಿದ್ದೇವೆ' ಎಂದು ಹೇಳಿದ್ದಾರೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಇಂದು ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ತಂಡವು ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನದ ಸವಾಲನ್ನು ಎದುರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.