ADVERTISEMENT

ICC Women's WC: ಭಾರತ ಮೂರನೇ ಸಲ ಫೈನಲ್ ಸಾಧನೆ; ಚೊಚ್ಚಲ ಪ್ರಶಸ್ತಿ ಕನಸು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಅಕ್ಟೋಬರ್ 2025, 5:59 IST
Last Updated 31 ಅಕ್ಟೋಬರ್ 2025, 5:59 IST
<div class="paragraphs"><p>ಭಾರತೀಯ ಆಟಗಾರ್ತಿಯರ ಸಂಭ್ರಮ</p></div>

ಭಾರತೀಯ ಆಟಗಾರ್ತಿಯರ ಸಂಭ್ರಮ

   

(ಚಿತ್ರ ಕೃಪೆ: X@BCCIWomen)

ನವಿ ಮುಂಬೈ: ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಚೊಚ್ಚಲ ಕಿರೀಟದ ಹುಡುಕಾಟದಲ್ಲಿರುವ ಭಾರತ, ಭಾನುವಾರ ಇಲ್ಲಿ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಸವಾಲನ್ನು ಎದುರಿಸಲಿದೆ.

ADVERTISEMENT

ಗುರುವಾರ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಏಳು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಐದು ವಿಕೆಟ್‌ಗಳ ಅಂತರದ ಮಣಿಸಿದ ಭಾರತ ಫೈನಲ್‌ಗೆ ಲಗ್ಗೆ ಇಟ್ಟಿತು.

ಆ ಮೂಲಕ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಮೂರನೇ ಸಲ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿತು. ಈ ಹಿಂದೆ 2005 ಹಾಗೂ 2017ನೇ ಸಾಲಿನಲ್ಲಿ ಭಾರತ ರನ್ನರ್-ಅಪ್ ಆಗಿತ್ತು.

ಅತ್ತ ದಕ್ಷಿಣ ಆಫ್ರಿಕಾ ತಂಡವು ಸಹ ಚೊಚ್ಚಲ ಕಿರೀಟದ ನಿರೀಕ್ಷೆಯಲ್ಲಿದೆ.

ಇದೇ ಮೊದಲ ಬಾರಿಗೆ ಮಹಿಳಾ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಅಥವಾ ಇಂಗ್ಲೆಂಡ್ ಹೊರತಾದ ತಂಡಗಳು ಫೈನಲ್‌ನಲ್ಲಿ ಕಾಣಿಸಿಕೊಂಡಿವೆ. ಇದರಿಂದಾಗಿ ಹೊಸ ಚಾಂಪಿಯನ್ ತಂಡದ ಉದಯವಾಗುವುದು ಖಚಿತವೆನಿಸಿದೆ.

2013ರಲ್ಲಿ ಭಾರತ ತಂಡವು ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸಿತ್ತು. 2017ರಲ್ಲಿ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟಿದ್ದರೂ ಪ್ರಶಸ್ತಿ ಸುತ್ತಿನಲ್ಲಿ ಇಂಗ್ಲೆಂಡ್ ವಿರುದ್ಧ ಪರಾಭವಗೊಂಡಿತ್ತು. ಅಂದು ಕೇವಲ ಒಂಬತ್ತು ರನ್ ಅಂತರದಿಂದ ಮಣಿದಿದ್ದ ಭಾರತದ ಕನಸು ಭಗ್ನಗೊಂಡಿತ್ತು.

ಐಸಿಸಿ ಮಹಿಳಾ ಏಕದಿನ ವಿಶ್ವಕಪ್: ವಿಜೇತರ ಪಟ್ಟಿ

1973: ಚಾಂಪಿಯನ್ - ಇಂಗ್ಲೆಂಡ್ (ರನ್ನರ್-ಅಪ್: ಆಸ್ಟ್ರೇಲಿಯಾ)

1978: ಚಾಂಪಿಯನ್ - ಆಸ್ಟ್ರೇಲಿಯಾ (ರನ್ನರ್-ಅಪ್: ಇಂಗ್ಲೆಂಡ್)

1982: ಚಾಂಪಿಯನ್ - ಆಸ್ಟ್ರೇಲಿಯಾ (ರನ್ನರ್-ಅಪ್: ಇಂಗ್ಲೆಂಡ್)

1988: ಚಾಂಪಿಯನ್ - ಆಸ್ಟ್ರೇಲಿಯಾ (ರನ್ನರ್-ಅಪ್: ಇಂಗ್ಲೆಂಡ್)

1993: ಚಾಂಪಿಯನ್ - ಇಂಗ್ಲೆಂಡ್ (ರನ್ನರ್-ಅಪ್: ನ್ಯೂಜಿಲೆಂಡ್)

1997: ಚಾಂಪಿಯನ್ - ಆಸ್ಟ್ರೇಲಿಯಾ (ರನ್ನರ್-ಅಪ್: ನ್ಯೂಜಿಲೆಂಡ್)

2000: ಚಾಂಪಿಯನ್ - ನ್ಯೂಜಿಲೆಂಡ್ (ರನ್ನರ್-ಅಪ್: ಆಸ್ಟ್ರೇಲಿಯಾ)

2005: ಚಾಂಪಿಯನ್ - ಆಸ್ಟ್ರೇಲಿಯಾ (ರನ್ನರ್-ಅಪ್: ಭಾರತ)

2009: ಚಾಂಪಿಯನ್ - ಇಂಗ್ಲೆಂಡ್ (ರನ್ನರ್-ಅಪ್: ನ್ಯೂಜಿಲೆಂಡ್)

2013: ಚಾಂಪಿಯನ್ - ಆಸ್ಟ್ರೇಲಿಯಾ (ರನ್ನರ್-ಅಪ್: ವೆಸ್ಟ್‌ಇಂಡೀಸ್)

2017: ಚಾಂಪಿಯನ್ - ಇಂಗ್ಲೆಂಡ್ (ರನ್ನರ್-ಅಪ್: ಭಾರತ)

2022: ಚಾಂಪಿಯನ್ - ಆಸ್ಟ್ರೇಲಿಯಾ (ರನ್ನರ್-ಅಪ್: ಇಂಗ್ಲೆಂಡ್)

2025ರ ಏಕದಿನ ವಿಶ್ವಕಪ್‌ನಲ್ಲಿ ಭಾರತದ ಸಾಧನೆ:

ಲೀಗ್ ಹಂತ:

  • ಶ್ರೀಲಂಕಾ ವಿರುದ್ಧ ಡಕ್ವರ್ತ್ ಲೂಯಿಸ್ ನಿಮಯದಡಿಯಲ್ಲಿ 59 ರನ್ ಜಯ

  • ಪಾಕಿಸ್ತಾನ ವಿರುದ್ಧ 88 ರನ್ ಜಯ

  • ದಕ್ಷಿಣ ಆಫ್ರಿಕಾ ವಿರುದ್ಧ 3 ವಿಕೆಟ್ ಅಂತರದ ಸೋಲು

  • ಆಸ್ಟ್ರೇಲಿಯಾ ವಿರುದ್ಧ3 ವಿಕೆಟ್ ಅಂತರದ ಸೋಲು

  • ಇಂಗ್ಲೆಂಡ್ ವಿರುದ್ಧ 4 ರನ್ ಅಂತರದ ಸೋಲು

  • ನ್ಯೂಜಿಲೆಂಡ್ ವಿರುದ್ಧ ಡಕ್ವರ್ತ್ ಲೂಯಿಸ್ ನಿಮಯದಡಿಯಲ್ಲಿ 53 ರನ್ ಅಂತರದ ಗೆಲುವು

  • ಬಾಂಗ್ಲಾದೇಶ ವಿರುದ್ಧದ ಪಂದ್ಯ ರದ್ದು

  • ಸೆಮಿಫೈನಲ್: ಆಸ್ಟ್ರೇಲಿಯಾ ವಿರುದ್ಧ ಐದು ವಿಕೆಟ್ ಅಂತರದ ಜಯ

ಫೈನಲ್: ಭಾರತ vs ದ.ಆಫ್ರಿಕಾ (ನವಿ ಮುಂಬೈ)

*ಸಂಜೆ 3ಕ್ಕೆ ಪಂದ್ಯ ಆರಂಭ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.