ADVERTISEMENT

IND vs NZ | ಗಿಲ್, ರೋಹಿತ್ ಅಜೇಯ ಅರ್ಧಶತಕ; ಬೃಹತ್ ಮೊತ್ತದತ್ತ ಭಾರತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಜನವರಿ 2023, 9:14 IST
Last Updated 24 ಜನವರಿ 2023, 9:14 IST
ರೋಹಿತ್ ಶರ್ಮಾ ಹಾಗೂ ಶುಭಮನ್‌ ಗಿಲ್‌ (ಚಿತ್ರಕೃಪೆ: Twitter / @BCCI)
ರೋಹಿತ್ ಶರ್ಮಾ ಹಾಗೂ ಶುಭಮನ್‌ ಗಿಲ್‌ (ಚಿತ್ರಕೃಪೆ: Twitter / @BCCI)   

ಇಂದೋರ್‌: ನ್ಯೂಜಿಲೆಂಡ್‌ ವಿರುದ್ಧದ ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಕ್ಲೀನ್‌ಸ್ವೀಪ್‌ ಸಾಧಿಸುವ ಲೆಕ್ಕಾಚಾರದಲ್ಲಿ ಕಣಕ್ಕಿಳಿದಿರುವ ಭಾರತ ತಂಡ, ಅಂತಿಮ ಪಂದ್ಯದಲ್ಲಿ ಉತ್ತಮ ಆರಂಭ ಕಂಡಿದೆ. ಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದಿರುವ ಟೀಂ ಇಂಡಿಯಾ ಉತ್ತಮ ಆರಂಭ ಕಂಡಿದೆ.

ಇನಿಂಗ್ಸ್‌ ಆರಂಭಿಸಿರುವ ಶುಭಮನ್‌ ಗಿಲ್‌ ಹಾಗೂ ನಾಯಕ ರೋಹಿತ್ ಶರ್ಮಾ ಬಿರುಸಿನ ಬ್ಯಾಟಿಂಗ್‌ ನಡೆಸುತ್ತಿದ್ದಾರೆ. ತಂಡದ ಮೊತ್ತ 16 ಓವರ್‌ಗಳ ಅಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೆ 140 ರನ್ ಆಗಿದೆ. ಗಿಲ್‌ ಕೇವಲ 45 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 9 ಬೌಂಡರಿ ಸಹಿತ 66 ರನ್‌ ಚಚ್ಚಿದ್ದಾರೆ. ರೋಹಿತ್‌ ಸಹ 51 ಎಸೆತಗಳಲ್ಲಿ 72 ರನ್‌ ಸಿಡಿಸಿ ಆಡುತ್ತಿದ್ದಾರೆ. ಅವರ ಬ್ಯಾಟ್‌ನಿಂದ 7 ಬೌಂಡರಿ ಮತ್ತು 5 ಸಿಕ್ಸರ್‌ ಸಿಡಿದಿವೆ.

ಅಂದಹಾಗೆ 22ನೇ ಇನಿಂಗ್ಸ್‌ನಲ್ಲಿ ಬ್ಯಾಟ್‌ ಬೀಸುತ್ತಿರುವ ಗಿಲ್‌ಗೆ ಇದು 6 ನೇ ಅರ್ಧಶತಕ. ಅದೇರೀತಿ ರೋಹಿತ್‌ 49 ಬಾರಿ ಅರ್ಧಶತಕ ಗಳಿಸಿದಂತಾಗಿದೆ.

ಭಾರತ ತಂಡ ಜನವರಿ 21 ಹಾಗೂ 22 ರಂದು ನಡೆದ ಮೊದಲೆರಡು ಪಂದ್ಯಗಳನ್ನು ಗೆದ್ದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.