ADVERTISEMENT

IND vs NZ: ಧೋನಿ, ಪಂತ್‌ರನ್ನೇ ಮೀರಿಸಿದ ಕನ್ನಡಿಗ ರಾಹುಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಜನವರಿ 2026, 14:29 IST
Last Updated 14 ಜನವರಿ 2026, 14:29 IST
<div class="paragraphs"><p>ಕೆ.ಎಲ್. ರಾಹುಲ್</p></div>

ಕೆ.ಎಲ್. ರಾಹುಲ್

   

(ಪಿಟಿಐ ಚಿತ್ರ)

ರಾಜ್‌ಕೋಟ್: ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಕೆ.ಎಲ್. ರಾಹುಲ್, ಇಲ್ಲಿ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಅಮೋಘ ಶತಕದ ಸಾಧನೆ ಮಾಡಿದ್ದಾರೆ.

ADVERTISEMENT

ಆ ಮೂಲಕ ನ್ಯೂಜಿಲೆಂಡ್ ವಿರುದ್ಧ ಏಕದಿನದಲ್ಲಿ ಶತಕ ಗಳಿಸಿದ ಭಾರತದ ಮೊದಲ ವಿಕೆಟ್ ಬ್ಯಾಟರ್ ಎನಿಸಿದ್ದಾರೆ. ಇದರೊಂದಿಗೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ರಿಷಭ್ ಪಂತ್ ಅವರನ್ನೇ ಮೀರಿಸಿದ್ದಾರೆ.

ರಾಜ್‌ಕೋಟ್ ಮೈದಾನದಲ್ಲಿ ಶತಕ ಗಳಿಸಿದ ಭಾರತದ ಮೊದಲ ಬ್ಯಾಟರ್ ಎಂಬ ಗೌರವಕ್ಕೂ ರಾಹುಲ್ ಭಾಜನರಾಗಿದ್ದಾರೆ.

ಒಟ್ಟಾರೆಯಾಗಿ ಏಕದಿನ ಕ್ರಿಕೆಟ್‌ನಲ್ಲಿ ರಾಹುಲ್ ಎಂಟನೇ ಶತಕ ಗಳಿಸಿದ್ದಾರೆ. ಈ ಪೈಕಿ ಮೂರು ಶತಕಗಳನ್ನು ಐದು ಅಥವಾ ಅದಕ್ಕಿಂತಲೂ ಕೆಳ ಕ್ರಮಾಂಕದಲ್ಲಿ ಗಳಿಸಿದ್ದಾರೆ. ಇನ್ನು ವಿಕೆಟ್ ಕೀಪರ್ ಆಗಿ ರಾಹುಲ್ 3ನೇ ಶತಕ ಸಿಡಿಸಿದ್ದಾರೆ.

ವಿರಾಟ್ ಕೊಹ್ಲಿ ವಿಕೆಟ್ ಪತನಗೊಂಡಾಗ ಭಾರತ 118ಕ್ಕೆ ನಾಲ್ಕು ವಿಕೆಟ್ ಕಳೆದಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಈ ಹಂತದಲ್ಲಿ ಕಲಾತ್ಮಕ ಇನಿಂಗ್ಸ್ ಕಟ್ಟಿದ ರಾಹುಲ್ ಆಕರ್ಷಕ ಶತಕ ಗಳಿಸಿದ್ದರಲ್ಲದೆ ತಂಡವನ್ನು ಸವಾಲಿನ ಮೊತ್ತ ಪೇರಿಸಲು ನೆರವಾದರು.

ರಾಹುಲ್ 92 ಎಸೆತಗಳಲ್ಲಿ 11 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 112 ರನ್ ಗಳಿಸಿ ಔಟಾಗದೆ ಉಳಿದರು. ಭಾರತ ಏಳು ವಿಕೆಟ್ ನಷ್ಟಕ್ಕೆ 284 ರನ್ ಪೇರಿಸಿತು.

ಕೆ.ಎಲ್. ರಾಹುಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.