ADVERTISEMENT

U19 Asia Cup Final: ಆಯುಷ್ ಪಡೆಗೆ ಪ್ರಶಸ್ತಿ ‘ದಾಖಲೆ’ ಮೇಲೆ ಕಣ್ಣು

ಯುವ ಏಕದಿನ ಏಷ್ಯಾಕಪ್: ಆಯುಷ್ ಪಡೆಗೆ ಪಾಕ್‌ ಸವಾಲು

ಪಿಟಿಐ
Published 21 ಡಿಸೆಂಬರ್ 2025, 0:30 IST
Last Updated 21 ಡಿಸೆಂಬರ್ 2025, 0:30 IST
<div class="paragraphs"><p>ಆಯುಷ್ ಮ್ಹಾತ್ರೆ</p></div>

ಆಯುಷ್ ಮ್ಹಾತ್ರೆ

   

ದುಬೈ: ದಾಖಲೆಯ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಭಾರತ 19 ವರ್ಷದೊಳಗಿನವರ ತಂಡವು ಭಾನುವಾರ ನಡೆಯಲಿರುವ ಯೂತ್ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಬದ್ಧ ಎದುರಾಳಿ ಪಾಕಿಸ್ತಾನ ಯುವ ತಂಡವನ್ನು ಎದುರಿಸಲಿದೆ. 

ಆಯುಷ್ ಮ್ಹಾತ್ರೆ ನಾಯಕತ್ವದ ಭಾರತ ತಂಡವು ಎ ಗುಂಪಿನ ಪಂದ್ಯದಲ್ಲಿಯೂ ಹೋದ ಭಾನುವಾರ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಅದರಲ್ಲಿ ಭಾರತ ಭರ್ಜರಿ ಜಯ ಸಾಧಿಸಿತ್ತು.  ಶುಕ್ರವಾರ ನಡೆದ ಸೆಮಿಫೈನಲ್‌ನಲ್ಲಿಯೂ ಆಯುಷ್ ಬಳಗವು ಹೋದ ಬಾರಿಯ ಚಾಂಪಿಯನ್ ಬಾಂಗ್ಲಾದೇಶ ವಿರುದ್ಧ ಗೆದ್ದಿತ್ತು.  

ADVERTISEMENT

ಫಿಫ್ಟಿ–50 ಮಾದರಿಯ ಈ ಟೂರ್ನಿಯಲ್ಲಿ ಇದುವರೆಗೆ ಉದಯೋನ್ಮುಖ ಆಟಗಾರರು ತಮ್ಮ ಪ್ರತಿಭೆ ಮೆರೆದಿದ್ದಾರೆ. 17 ವರ್ಷದ ವಿಕೆಟ್‌ಕೀಪರ್ ಬ್ಯಾಟರ್ ಅಭಿಗ್ಯಾನ್ ಕುಂದು, 14 ವರ್ಷದ ವೈಭವ್ ಸೂರ್ಯವಂಶಿ ಗಮನ ಸೆಳೆದಿದ್ದಾರೆ. ಅಭಿಗ್ಯಾನ್ (209; 125ಎಸೆತ) ದ್ವಿಶತಕ ಮತ್ತು ವೈಭವ್ ಶತಕಗಳು ದಾಖಲೆ ಪುಸ್ತಕ ಸೇರಿದವು.  ಫೈನಲ್‌ನಲ್ಲಿಯೂ ತಮ್ಮ ಭುಜಬಲ ಪರಾಕ್ರಮ ಮೆರೆಯುವ ಉತ್ಸಾಹದಲ್ಲಿ ಇಬ್ಬರೂ ಇದ್ದಾರೆ. ಹೈದರಾಬಾದಿನ ಆ್ಯರನ್ ಜಾರ್ಜ್ ಮೂರು ಅರ್ಧಶತಕ ಗಳಿಸಿದ್ದಾರೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ವಿಹಾನ್ ಮಲ್ಹೋತ್ರಾ ಅವರು ಅಜೇಯ 61 ರನ್ ಗಳಿಸಿದ್ದರು. ಸಮೀರ್ ಮಿನ್ಹಾಸ್ ಕೂಡ ಅಮೋಘ ಲಯದಲ್ಲಿದ್ದಾರೆ.

ಭಾರತದ ಅಗ್ರಕ್ರಮಾಂಕದ ಬ್ಯಾಟರ್‌ಗಳು ವಿಫಲರಾದಾಗಲೂ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಯಶಸ್ವಿಯಾಗಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಲೀಗ್ ಹಂತದಲ್ಲಿ ಪಾಕ್ ವಿರುದ್ಧ ಭಾರತದ ಬೌಲರ್‌ಗಳೂ ಶಿಸ್ತುಬದ್ಧ ದಾಳಿ ನಡೆಸಿದ್ದರು. ಆಲ್‌ರೌಂಡರ್ ಕನಿಷ್ಕ ಚೌಹಾಣ್ ಆ ಪಂದ್ಯದಲ್ಲಿ ಮೂರು ವಿಕೆಟ್ ಗಳಿಸಿದ್ದರು. ಭಾರತದ ದೀಪೇಶ್ ದೇವೆಂದ್ರನ್ ಮತ್ತು ಪಾಕಿಸ್ತಾನದ ಅಬ್ದುಲ್ ಸುಭಾನ್ ಅವರು ತಲಾ 11 ವಿಕೆಟ್ ಗಳಿಸಿದರು.  ದೀಪೇಶ್ ಅವರು ಮಲೇಷ್ಯಾ ಎದುರು (22ಕ್ಕೆ5) ಅಮೋಘ ಬೌಲಿಂಗ್ ಮಾಡಿದ್ದರು. 

ಪಾಕಿಸ್ತಾನ ತಂಡದಲ್ಲಿ ಎಡಗೈ ಬೌಲರ್ ನಿಕಾಬ್ ಶಫಿಕ್ ಭಾರತದ ಎದುರಿನ ಪಂದ್ಯದಲ್ಲಿ ಎರಡು ವಿಕೆಟ್ ಗಳಿಸಿದ್ದರು. ಲೆಗ್‌ಸ್ಪಿನ್ನರ್ ಅಹಮದ್ ಹುಸೇನ್ ಅವರು ಬ್ಯಾಟರ್‌ಗಳಿಗೆ ಸವಾಲೊಡ್ಡಬಲ್ಲರು. ಫರ್ಹಾನ್ ಯೂಸುಫ್ ನಾಯಕತ್ವದ ಪಾಕ್ ತಂಡವು ಕಠಿಣ ಪೈಪೊಟಿಯೊಡ್ಡುವ ಛಲದಲ್ಲಿದೆ. ಭಾರತವು ಇಲ್ಲಿಯವರೆಗೆ ಎಂಟು ಸಲ ಚಾಂಪಿಯನ್ ಆಗಿದೆ. ಪಾಕ್ ಒಂದು ಬಾರಿ ಮಾತ್ರ ಪ್ರಶಸ್ತಿ ಜಯಿಸಿತ್ತು.

ಪಂದ್ಯ ಆರಂಭ: ಬೆಳಿಗ್ಗೆ 10.30

ನೇರಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್

ವೈಭವ್ ಸೂರ್ಯವಂಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.