ADVERTISEMENT

ವಿಶ್ವ ರಸ್ತೆ ಸುರಕ್ಷತಾ ಟಿ20 ಕ್ರಿಕೆಟ್ ಸರಣಿ: ಭಾರತಕ್ಕೆ ಬಾಂಗ್ಲಾ ಮೊದಲ ಎದುರಾಳಿ

ವಿಶ್ವ ರಸ್ತೆ ಸುರಕ್ಷತಾ ಟಿ20 ಕ್ರಿಕೆಟ್ ಸರಣಿ

ಪಿಟಿಐ
Published 24 ಫೆಬ್ರುವರಿ 2021, 8:17 IST
Last Updated 24 ಫೆಬ್ರುವರಿ 2021, 8:17 IST
ವೀರೇಂದ್ರ ಸೆಹ್ವಾಗ್‌, ಸಚಿನ್ ತೆಂಡೂಲ್ಕರ್‌, ಬ್ರಯಾನ್ ಲಾರಾ ಮತ್ತು ತಿಲಕರತ್ನೆ ದಿಲ್‌ಶಾನ್‌–ಪಿಟಿಐ ಚಿತ್ರ
ವೀರೇಂದ್ರ ಸೆಹ್ವಾಗ್‌, ಸಚಿನ್ ತೆಂಡೂಲ್ಕರ್‌, ಬ್ರಯಾನ್ ಲಾರಾ ಮತ್ತು ತಿಲಕರತ್ನೆ ದಿಲ್‌ಶಾನ್‌–ಪಿಟಿಐ ಚಿತ್ರ   

ಮುಂಬೈ: ವಿಶ್ವ ಕ್ರಿಕೆಟ್‌ನ ದಿಗ್ಗಜರು ಆಡಲಿರುವ ರಸ್ತೆ ಸುರಕ್ಷತಾ ವಿಶ್ವ ಟಿ20 ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡಕ್ಕೆ ಬಾಂಗ್ಲಾದೇಶದ ಸವಾಲು ಎದುರಾಗಿದೆ. ಮಾರ್ಚ್ 5ರಂದು ಛತ್ತೀಸಗಡದ ರಾಯಪುರದಲ್ಲಿ ಈ ಹಣಾಹಣಿ ನಡೆಯಲಿದೆ.

ರಾಯಪುರದ ಶಹೀದ್ ವೀರ್ ನಾರಾಯಣ ಸಿಂಗ್‌ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಂದ್ಯಗಳು ಆಯೋಜನೆಯಾಗಿದ್ದು, ಮಾರ್ಚ್‌ 7ರಂದು ನಡೆಯುವ ಸೆಣಸಾಟದಲ್ಲಿ ಇಂಗ್ಲೆಂಡ್‌–ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಲಿವೆ ಎಂದು ಮಾಧ್ಯಮ ಪ್ರಕಟಣೆ ತಿಳಿಸಿದೆ.

ಮಾರ್ಚ್ 17ರಂದು ಮೊದಲ ಸೆಮಿಫೈನಲ್‌ ನಡೆಯಲಿದೆ. ನಾಲ್ಕರ ಘಟ್ಟದಎರಡನೆಯ ಪಂದ್ಯ 19ರಂದು ಆಯೋಜನೆಯಾಗಿದೆ. ಮಾರ್ಚ್‌ 21ರಂದು ಫೈನಲ್ ಪಂದ್ಯ ನಿಗದಿಯಾಗಿದೆ.

ADVERTISEMENT

ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸಲು ಆಯೋಜಿಸಿರುವ ಈ ಟೂರ್ನಿಯಲ್ಲಿ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್‌, ಬ್ರಯಾನ್ ಲಾರಾ, ಮುತ್ತಯ್ಯ ಮುರಳೀಧರನ್‌, ತಿಲಕರತ್ನೆ ದಿಲ್‌ಶಾನ್‌, ಸೇರಿದಂತೆ ಆರು ದೇಶಗಳ (ಭಾರತ, ಬಾಂಗ್ಲಾದೇಶ, ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಹಾಗೂ ವೆಸ್ಟ್‌ ಇಂಡೀಸ್‌) ಖ್ಯಾತ ಆಟಗಾರರು ಪಾಲ್ಗೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.