ADVERTISEMENT

ICC WC: ಭಾರತ ವಿರುದ್ಧ ಪಂದ್ಯ ಆಡಲ್ಲ ಎಂದು ಹಠ ಹಿಡಿದಿದ್ದ ಪಾಕ್ ಸಾಧಿಸಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಫೆಬ್ರುವರಿ 2026, 2:49 IST
Last Updated 10 ಫೆಬ್ರುವರಿ 2026, 2:49 IST
<div class="paragraphs"><p>ಭಾರತ ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌ ಹಾಗೂ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್‌ ಆಘಾ</p></div>

ಭಾರತ ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌ ಹಾಗೂ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್‌ ಆಘಾ

   

ಮಾತುಕತೆಯ ಭಾಗವಾಗಿ 2028 ಮತ್ತು 2031ರ ನಡುವೆ ಐಸಿಸಿ ಟೂರ್ನಿಯೊಂದಕ್ಕೆ ಬಾಂಗ್ಲಾದೇಶ ಆತಿಥ್ಯವನ್ನೂ ವಹಿಸಲಿದೆ ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ. ಭದ್ರತಾ ಕಳವಳಗಳನ್ನು ವ್ಯಕ್ತಪಡಿಸಿ ಬಾಂಗ್ಲಾದೇಶವು ಟಿ20 ವಿಶ್ವಕಪ್‌ ಆಡಲು ಭಾರತಕ್ಕೆ ತನ್ನ ತಂಡವನ್ನು ಕಳುಹಿಸಲು ನಿರಾಕರಿಸಿತ್ತು. ಅದರ ಬದಲು ಸ್ಕಾಟ್ಲೆಂಡ್ ಅವಕಾಶ ಪಡೆದಿತ್ತು. ಇದಾದ ಬಳಿಕ ಪಾಕಿಸ್ತಾನವು ಭಾರತದ ವಿರುದ್ಧ ಪಂದ್ಯ ಆಡದಿರಲು ನಿರ್ಧರಿಸಿತ್ತು.

ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದಂತೆ ಐಸಿಸಿಯು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ನಿರ್ಧಾರದಿಂದ ಹಿಂದೆ ಸರಿಯುವಂತೆ ಮನವಿ ಮಾಡಿತ್ತು. ಕಳೆದ ಒಂದು ವಾರದಿಂದ ನಡೆದ ಪ್ರಹಸನಕ್ಕೆ ನಿನ್ನೆ (ಸೋಮವಾರ) ತೆರೆಬಿದ್ದಿದ್ದು, ಫೆ. 15ರಂದು ಭಾರತ ವಿರುದ್ಧ ಪಂದ್ಯವನ್ನು ಆಡುವುದಾಗಿ ತಿಳಿಸಿದೆ.

ADVERTISEMENT

ಐಸಿಸಿ ಮುಂದೆ ಪಾಕಿಸ್ತಾನದ ಬೇಡಿಕೆ ಏನು?

ಬೇಡಿಕೆ 1: ಬಾಂಗ್ಲಾದೇಶಕ್ಕೆ ಯಾವುದೇ ಆರ್ಥಿಕ ದಂಡ ವಿಧಿಸುವಂತಿಲ್ಲ

ಇದಕ್ಕೆ ಒಪ್ಪಿಗೆ ಸೂಚಿಸಿರುವ ಐಸಿಸಿ ಭಾರತದಲ್ಲಿ ಟಿ20 ವಿಶ್ವಕಪ್ ಪಂದ್ಯಗಳನ್ನು ಆಡಲು ನಿರಾಕರಿಸಿದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಮೇಲೆ ಯಾವುದೇ ನಿರ್ಬಂಧ ಅಥವಾ ದಂಡ ವಿಧಿಸುವುದಿಲ್ಲ ಎಂದು ತಿಳಿಸಿದೆ.

ಬೇಡಿಕೆ 2: ಬಾಂಗ್ಲಾದೇಶಕ್ಕೆ ಐಸಿಸಿಯಿಂದ ಪರಿಹಾರಾತ್ಮಕ ಕಾರ್ಯಕ್ರಮ

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಐಸಿಸಿ, ಮಾತುಕತೆಯ ಭಾಗವಾಗಿ 2028 ಮತ್ತು 2031ರ ನಡುವೆ ಐಸಿಸಿ ಟೂರ್ನಿಯೊಂದಕ್ಕೆ ಬಾಂಗ್ಲಾದೇಶ ಆತಿಥ್ಯ ವಹಿಸಲಿದೆ ಎಂದು ತಿಳಿಸಿದೆ.

ಬೇಡಿಕೆ 3: ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಸರಣಿ

ಇದಕ್ಕೆ ಪ್ರತಿಕ್ರಿಯೆ ನೀಡಿದ ಐಸಿಸಿ, ಪಿಸಿಬಿ ವಿನಂತಿಯನ್ನು ತಿರಸ್ಕರಿಸಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸುತ್ತು ಸೇರಿದಂತೆ ದ್ವಿಪಕ್ಷೀಯ ಸರಣಿಗಳು ತನ್ನ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದೆ.

ಬೇಡಿಕೆ 4: ಭಾರತ-ಪಾಕಿಸ್ತಾನ-ಬಾಂಗ್ಲಾದೇಶ ತ್ರಿಕೋನ ಸರಣಿ

ಇದು ನ್ಯಾಯಯುತವಲ್ಲದ ಕೋರಿಕೆ ಎಂದಿರುವ ಐಸಿಸಿ, ಪಿಸಿಬಿ ಮನವಿಯನ್ನು ತಿರಸ್ಕರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.