ಭಾರತದ ಎದುರು ವೆಸ್ಟ್ ಇಂಡೀಸ್ ತಂಡದ ಬ್ಯಾಟಿಂಗ್ ವೇಳೆ
ಕೃಪೆ: ಪಿಟಿಐ
ಅಹಮದಾಬಾದ್: ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಇನಿಂಗ್ಸ್ ಹಾಗೂ 140 ರನ್ ಅಂತರದ ಭಾರಿ ಜಯ ಸಾಧಿಸಿದೆ.
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾದ ಪಂದ್ಯದಲ್ಲಿ ಆತಿಥೇಯ ತಂಡ ಪಾರಮ್ಯ ಮೆರೆಯಿತು. ಹೀಗಾಗಿ, ಪಂದ್ಯ ಮೂರೇ ದಿನಗಳಲ್ಲಿ ಮುಗಿಯಿತು. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ವಿಂಡೀಸ್, ಮೊದಲ ದಿನವೇ ಆಲೌಟ್ ಆಯಿತು. 162 ರನ್‌ಗಳ ಅಲ್ಪ ಮೊತ್ತದೆದುರು ಬ್ಯಾಟಿಂಗ್ ಮಾಡಿದ ಶುಭಮನ್ ಗಿಲ್ ಪಡೆ, ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್‌ಗೆ 448 ರನ್ ಕಲೆಹಾಕಿ ಡಿಕ್ಲೇರ್ ಮಾಡಿಕೊಂಡಿತು.
286 ರನ್ ಹಿನ್ನಡೆಯೊಂದಿಗೆ ಬ್ಯಾಟಿಂಗ್ ಶುರು ಮಾಡಿದ ರೋಸ್ಟನ್ ಚೇಸ್ ಬಳಗ, ಎರಡನೇ ಇನಿಂಗ್ಸ್‌ನಲ್ಲೂ ಚೇತರಿಕೆಯ ಆಟವಾಡಲಿಲ್ಲ. 45.1 ಓವರ್‌ಗಳಲ್ಲಿ 146 ರನ್ ಕಲೆ ಹಾಕಿದ್ದಾಗಲೇ ಸರ್ವಪತನ ಕಂಡಿತು.
ಮೊದಲ ಇನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್ ಪಡೆದಿದ್ದ ಮೊಹಮ್ಮದ್ ಸಿರಾಜ್, ಈ ಬಾರಿ ಮೂರು ವಿಕೆಟ್ ಜೇಬಿಗಿಳಿಸಿಕೊಂಡರು. ಶತಕದಾರಿ ರವೀಂದ್ರ ಜಡೇಜ 4 ವಿಕೆಟ್‌ಗಳನ್ನು ಕಬಳಿಸಿದರು. ಸ್ಪಿನ್ನರ್‌ಗಳಾದ ಕುಲದೀಪ್ ಯಾದವ್ (2 ವಿಕೆಟ್), ವಾಷಿಂಗ್ಟನ್ ಸುಂದರ್ (1 ವಿಕೆಟ್) ಎರಡನೇ ಇನಿಂಗ್ಸ್‌ನಲ್ಲೂ ಮೂರು ವಿಕೆಟ್ ಹಂಚಿಕೊಂಡರು.
ಆಲ್‌ರೌಂಡ್ ಪ್ರದರ್ಶನ ತೋರಿದ ಜಡೇಜಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು.
ಸಂಕ್ಷಿಪ್ತ ಸ್ಕೋರ್
ಮೊದಲ ಇನಿಂಗ್ಸ್: ವೆಸ್ಟ್ ಇಂಡೀಸ್ – 162 ರನ್‌ಗೆ ಆಲೌಟ್ | ಭಾರತ – 5 ವಿಕೆಟ್‌ಗೆ 448 ರನ್
ಎರಡನೇ ಇನಿಂಗ್ಸ್: ವೆಸ್ಟ್ ಇಂಡೀಸ್ – 146 ರನ್‌ಗೆ ಆಲೌಟ್
ಫಲಿತಾಂಶ: ಭಾರತಕ್ಕೆ 140 ರನ್ ಜಯ
ನಂಬರ್ ಗೇಮ್
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಟೆಸ್ಟ್ ಪಂದ್ಯಗಳಲ್ಲಿ ಈವರೆಗೆ 17 ಇನಿಂಗ್ಸ್ ಜಯಗಳ ದಾಖಲಾಗಿವೆ. ಈ ಪೈಕಿ 9ರಲ್ಲಿ ವಿಂಡೀಸ್ ಗೆದ್ದಿದ್ದರೆ, ಉಳಿದ ಎಂಟು ಭಾರತಕ್ಕೆ ದಕ್ಕಿವೆ.
ವಿಶೇಷವೆಂದರೆ ವಿಂಡೀಸ್ ಪಾಲಿನ ಎಲ್ಲ ಜಯಗಳು ದಾಖಲಾಗಿರುವುದು ಕಳೆದ (20ನೇ) ಶತಮಾನದಲ್ಲೇ. 21ನೇ ಶತಮಾನದ ಎಂಟೂ ಇನಿಂಗ್ಸ್ ವಿಜಯಗಳ ಭಾರತಕ್ಕೇ ಒಲಿದಿವೆ.
15 ಇನಿಂಗ್ಸ್‌ಗಳಲ್ಲಿ ಎರಡೇ ಸಲ 200 ರನ್
ವಿಂಡೀಸ್ ತಂಡ ಟೆಸ್ಟ್ ಕ್ರಿಕೆಟ್‌ನಲ್ಲಿ ಇತ್ತೀಚೆಗೆ ಆಡಿದ ಕಳೆದ 15 ಇನಿಂಗ್ಸ್‌ಗಳಲ್ಲಿಯೂ ಆಲೌಟ್ ಆಗಿದೆ. ಈ ಪೈಕಿ ಇನ್ನೂರಕ್ಕಿಂತ ಹೆಚ್ಚು ಮೊತ್ತ ಕಲೆಹಾಕಿರುವುದು ಎರಡೇ ಸಲ. 253 ಗರಿಷ್ಠ ಮೊತ್ತ.
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಗೆದ್ದ ಖುಷಿಯಲ್ಲಿ ಭಾರತ ತಂಡ
ಬಾಂಗ್ಲಾ ವಿರುದ್ಧ ಸರಣಿ (2024ರ ನವೆಂಬರ್ – ಡಿಸೆಂಬರ್)
ಮೊದಲ ಪಂದ್ಯ
ಪ್ರಥಮ ಇನಿಂಗ್ಸ್: ವೆಸ್ಟ್ ಇಂಡೀಸ್ – 9 ವಿಕೆಟ್‌ಗೆ 450 | ಬಾಂಗ್ಲಾದೇಶ – 9 ವಿಕೆಟ್‌ಗೆ 269
ದ್ವಿತೀಯ ಇನಿಂಗ್ಸ್: ವೆಸ್ಟ್ ಇಂಡೀಸ್ – 152ಕ್ಕೆ ಆಲೌಟ್ | ಬಾಂಗ್ಲಾದೇಶ – 132ಕ್ಕೆ ಆಲೌಟ್
ಫಲಿತಾಂಶ: ವೆಸ್ಟ್ ಇಂಡೀಸ್‌ಗೆ 201ರನ್ ಜಯ
ಎರಡನೇ ಪಂದ್ಯ
ಪ್ರಥಮ ಇನಿಂಗ್ಸ್: ಬಾಂಗ್ಲಾದೇಶ – 164ಕ್ಕೆ ಆಲೌಟ್ | ವೆಸ್ಟ್ ಇಂಡೀಸ್ – 146ಕ್ಕೆ ಆಲೌಟ್
ದ್ವಿತೀಯ ಇನಿಂಗ್ಸ್: ಬಾಂಗ್ಲಾದೇಶ – 268ಕ್ಕೆ ಆಲೌಟ್ | ವೆಸ್ಟ್ ಇಂಡೀಸ್ – 185ಕ್ಕೆ ಆಲೌಟ್
ಫಲಿತಾಂಶ: ಬಾಂಗ್ಲಾದೇಶಕ್ಕೆ 101 ರನ್ ಜಯ
ಪಾಕಿಸ್ತಾನ ವಿರುದ್ಧದ ಸರಣಿ (2024ರ ಜನವರಿ)
ಮೊದಲ ಪಂದ್ಯ
ಪ್ರಥಮ ಇನಿಂಗ್ಸ್: ಪಾಕಿಸ್ತಾನ – 230ಕ್ಕೆ ಆಲೌಟ್ | ವೆಸ್ಟ್ ಇಂಡೀಸ್ – 137ಕ್ಕೆ ಆಲೌಟ್
ದ್ವಿತೀಯ ಇನಿಂಗ್ಸ್: ಪಾಕಿಸ್ತಾನ – 157ಕ್ಕೆ ಆಲೌಟ್ | ವೆಸ್ಟ್ ಇಂಡೀಸ್ – 123ಕ್ಕೆ ಆಲೌಟ್
ಫಲಿತಾಂಶ: ಪಾಕಿಸ್ತಾನಕ್ಕೆ 127 ರನ್ ಜಯ
ಎರಡನೇ ಪಂದ್ಯ
ಪ್ರಥಮ ಇನಿಂಗ್ಸ್: ವೆಸ್ಟ್ ಇಂಡೀಸ್ – 163ಕ್ಕೆ ಆಲೌಟ್ | ಪಾಕಿಸ್ತಾನ – 154ಕ್ಕೆ ಆಲೌಟ್
ದ್ವಿತೀಯ ಇನಿಂಗ್ಸ್: ವೆಸ್ಟ್ ಇಂಡೀಸ್ – 244ಕ್ಕೆ ಆಲೌಟ್ | ಪಾಕಿಸ್ತಾನ – 133ಕ್ಕೆ ಆಲೌಟ್
ಫಲಿತಾಂಶ: ವೆಸ್ಟ್ ಇಂಡೀಸ್‌ಗೆ 120ರನ್ ಜಯ
ಅಹಮದಾಬಾದ್ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಭಾರತದ ಕೆ.ಎಲ್. ರಾಹುಲ್ ವಿಕೆಟ್ ಪಡೆದ ಸಂಭ್ರಮದಲ್ಲಿ ವೆಸ್ಟ್ ಇಂಡೀಸ್ ಪಡೆ
ಆಸ್ಟ್ರೇಲಿಯಾ ವಿರುದ್ಧದ ಸರಣಿ (2024ರ ಜನವರಿ)
ಮೊದಲ ಪಂದ್ಯ
ಪ್ರಥಮ ಇನಿಂಗ್ಸ್: ಆಸ್ಟ್ರೇಲಿಯಾ – 180ಕ್ಕೆ ಆಲೌಟ್ | ವೆಸ್ಟ್ ಇಂಡೀಸ್ – 190ಕ್ಕೆ ಆಲೌಟ್
ದ್ವಿತೀಯ ಇನಿಂಗ್ಸ್: ಆಸ್ಟ್ರೇಲಿಯಾ – 310ಕ್ಕೆ ಆಲೌಟ್ | ವೆಸ್ಟ್ ಇಂಡೀಸ್ – 141ಕ್ಕೆ ಆಲೌಟ್
ಫಲಿತಾಂಶ: ಆಸ್ಟ್ರೇಲಿಯಾಗೆ 159 ರನ್ ಜಯ
ಎರಡನೇ ಪಂದ್ಯ
ಪ್ರಥಮ ಇನಿಂಗ್ಸ್: ಆಸ್ಟ್ರೇಲಿಯಾ – 286ಕ್ಕೆ ಆಲೌಟ್ | ವೆಸ್ಟ್ ಇಂಡೀಸ್ – 253ಕ್ಕೆ ಆಲೌಟ್
ದ್ವಿತೀಯ ಇನಿಂಗ್ಸ್: ಆಸ್ಟ್ರೇಲಿಯಾ – 243ಕ್ಕೆ ಆಲೌಟ್ | ವೆಸ್ಟ್ ಇಂಡೀಸ್ – 143ಕ್ಕೆ ಆಲೌಟ್
ಫಲಿತಾಂಶ: ಆಸ್ಟ್ರೇಲಿಯಾಗೆ 133 ರನ್ ಜಯ
ಮೂರನೇ ಪಂದ್ಯ
ಪ್ರಥಮ ಇನಿಂಗ್ಸ್: ಆಸ್ಟ್ರೇಲಿಯಾ – 225ಕ್ಕೆ ಆಲೌಟ್| ವೆಸ್ಟ್ ಇಂಡೀಸ್ – 143ಕ್ಕೆ ಆಲೌಟ್
ದ್ವಿತೀಯ ಇನಿಂಗ್ಸ್: ಆಸ್ಟ್ರೇಲಿಯಾ – 121ಕ್ಕೆ ಆಲೌಟ್| ವೆಸ್ಟ್ ಇಂಡೀಸ್ – 27ಕ್ಕೆ ಆಲೌಟ್
ಫಲಿತಾಂಶ: ಆಸ್ಟ್ರೇಲಿಯಾಗೆ 176 ರನ್ ಜಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.