ಅಬುಧಾಬಿ:ಸತತ ಮೂರು ಸೋಲುಗಳಿಂದ ಕಂಗೆಟ್ಟಿದ್ದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಇಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಜಯದ ನಗೆ ಬೀರಿತು.ಇದರೊಂದಿಗೆ ಆಡಿರುವ11 ಪಂದ್ಯಗಳಲ್ಲಿ ಐದನೇ ಗೆಲುವು ಸಾಧಿಸಿದ ಮುಂಬೈ ತಂಡಪಾಯಿಂಟ್ಸ್ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಏರಿದೆ.
ಕಿಂಗ್ಸ್ ನೀಡಿದ ಸಾಧಾರಣ ಗುರಿ ಎದುರು ಬ್ಯಾಟಿಂಗ್ ಆರಂಭಿಸಿದ ಮುಂಬೈಗೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಮೊತ್ತ16 ರನ್ ಆಗುವಷ್ಟರಲ್ಲಿ ನಾಯಕ ರೋಹಿತ್ ಶರ್ಮಾ (8) ಮತ್ತುಭರವಸೆಯ ಆಟಗಾರಸೂರ್ಯಕುಮಾರ್ ಯಾದವ್ (0) ಪೆವಿಲಿಯನ್ ಸೇರಿಕೊಂಡರು.ಯುವ ಸ್ಪಿನ್ನರ್ ರವಿ ಬಿಷ್ಣೋಯಿ ಹಾಕಿದ ಒಂದೇ ಓವರ್‌ನಲ್ಲಿ ಇವರಿಬ್ಬರೂ ವಿಕೆಟ್ ಒಪ್ಪಿಸಿದ್ದು, ತಂಡದಆತಂಕವನ್ನು ಹೆಚ್ಚಿಸಿತ್ತು.
ಈ ವೇಳೆ ಆರಂಭಿಕ ಕ್ವಿಂಟನ್ ಡಿ ಕಾಕ್‌ಗೆ ಜೊತೆಯಾದ ಸೌರಭ್ ತಿವಾರಿ ಎರಡು ಪ್ರಮುಖ ಜೊತೆಯಾಟದಲ್ಲಿ ಭಾಗಿಯಾದರು. ಡಿ ಕಾಕ್ ಜೊತೆ ಮೂರನೇ ವಿಕೆಟ್‌ಗೆ45 ರನ್ ಮತ್ತು ಹಾರ್ದಿಕ್ ಪಾಂಡ್ಯ ಜೊತೆ 4ನೇ ವಿಕೆಟ್ ಜೊತೆಯಾಟದಲ್ಲಿ31 ರನ್ ಸೇರಿಸಿ ವಿಕೆಟ್ ಪತನಕ್ಕೆ ತಡೆಯಾದರು.
37 ಎಸೆತಗಳನ್ನು ಎದುರಿಸಿದ್ದ ತಿವಾರಿ45 ರನ್ ಗಳಿಸಿ ಔಟಾಗುವ ಮುನ್ನ ಮುಂಬೈ ತಂಡ ಗೆಲುವಿನತ್ತ ಮುಖಮಾಡಿತ್ತು. ಕೊನೆಯಲ್ಲಿ ಬಿರುಸಾಗಿ ಬ್ಯಾಟ್ ಬೀಸಿದ ಹಾರ್ದಿಕ್ ಪಾಂಡ್ಯ ಮತ್ತು ಕೀರನ್ ಪೊಲಾರ್ಡ್ ತಂಡವನ್ನು ಜಯದ ದಡ ಸೇರಿಸಿದರು.
ಕಿಂಗ್ಸ್ ಪರಬಿಷ್ಣೋಯಿ ಎರಡು ಮತ್ತು ನಾಥನ್ ಎಲ್ಲಿಸ್, ಮೊಹಮ್ಮದ್ ಶಮಿ ತಲಾ ಒಂದು ವಿಕೆಟ್ ಪಡೆದರು.
ಕಿಂಗ್ಸ್‌ಗೆಮಾರ್ಕ್ರಂ,ಹೂಡ ಆಸರೆ
ಇದಕ್ಕೂಮುನ್ನಟಾಸ್ ಗೆದ್ದ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು.ನಾಯಕನ ನಿರ್ಧಾರ ಸಮರ್ಥಿಸಿಕೊಳ್ಳುವಂತೆದಾಳಿ ಸಂಘಟಿಸಿದ ಮುಂಬೈ ಬೌಲರ್‌ಗಳು, ಕಿಂಗ್ಸ್‌ಗೆ ಆರಂಭಿಕ ಆಘಾತ ನೀಡಿದರು.
ತಂಡದ ಮೊತ್ತ 48 ರನ್‌ಆಗುವಷ್ಟರಲ್ಲಿ ಅಗ್ರ ಕ್ರಮಾಂಕದನಾಲ್ವರನ್ನು ಪೆವಿಲಿಯನ್‌ಗೆ ಅಟ್ಟಿ ಮೇಲುಗೈ ತಂದುಕೊಟ್ಟರು. ಆದರೆ ಈ ಹಂತದಲ್ಲಿ ಜೊತೆಯಾದ ಏಡನ್‌ಮಾರ್ಕ್ರಂ (38) ಮತ್ತು ದೀಪಕ್ ಹೂಡ (25) ಐದನೇ ವಿಕೆಟ್ ಜೊತೆಯಾಟದಲ್ಲಿ61 ರನ್ ಕೂಡಿಸಿಕುಸಿತ ತಪ್ಪಿಸಿದರು.
ಈ ಜೋಡಿಯನ್ನು16ನೇ ಓವರ್‌ನಲ್ಲಿ ರಾಹುಲ್ ಚಾಹರ್‌ಬೇರ್ಪಡಿಸಿದರು. 26 ಎಸೆತಗಳಲ್ಲಿ 28 ರನ್ ಬಾರಿಸಿದ್ದ ದೀಪಕ್ ಅವರೂ 19ನೇ ಓವರ್‌ನಲ್ಲಿಔಟಾದರು. ಕೊನೆಯಲ್ಲಿ ಹರ್ಪ್ರೀತ್ ಬ್ರಾರ್ ಮತ್ತು ನಾಥನ್ ಎಲ್ಲಿಸ್ ತಂಡದ ಮೊತ್ತವನ್ನು130ರ ಗಡಿ ದಾಟಿಸಿದರು.
ಮುಂಬೈ ಪರಜಸ್‌ಪ್ರಿತ್ ಬೂಮ್ರಾ ಹಾಗೂ ಕೀರನ್ ಪೊಲಾರ್ಡ್ ತಲಾ ಎರಡು ವಿಕೆಟ್ ಕಬಳಿಸಿದರೆ, ಕೃಣಾಲ್ ಪಾಂಡ್ಯ ಮತ್ತು ರಾಹುಲ್ ಚಾಹರ್ ಒಂದೊಂದು ವಿಕೆಟ್ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.