ADVERTISEMENT

ಬೆಸ್ಟೊಗೆ ಆರಂಭಿಕ ಸ್ಥಾನ ಬಿಟ್ಟುಕೊಟ್ಟ ಮಯಂಕ್; ಕುಂಬ್ಳೆ ಶ್ಲಾಘನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಮೇ 2022, 15:27 IST
Last Updated 14 ಮೇ 2022, 15:27 IST
   

ಮುಂಬೈ: ಐಪಿಎಲ್ 2022 ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ಮಯಂಕ್ ಅಗರವಾಲ್ ಅವರು ಆರಂಭಿಕ ಸ್ಥಾನವನ್ನು ಇಂಗ್ಲೆಂಡ್ ಮೂಲದ ಜಾನಿ ಬೆಸ್ಟೊ ಅವರಿಗೆ ಬಿಟ್ಟುಕೊಟ್ಟಿದ್ದರು.

ಈ ರಣನೀತಿ ಪಂಜಾಬ್ ಪಾಲಿಗೆ ವರದಾನವಾಗಿಪರಿಣಮಿಸಿದೆ. ಶುಕ್ರವಾರ ಆರ್‌ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ ಬೆಸ್ಟೊ ಕೇವಲ 21 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ಪಂಜಾಬ್ ತಂಡದ ಕೋಚ್ ಅನಿಲ್ ಕುಂಬ್ಳೆ, ಆರಂಭಿಕ ಸ್ಥಾನ ತ್ಯಾಗ ಮಾಡಿರುವ ನಾಯಕ ಮಯಂಕ್ ಅವರನ್ನು ಶ್ಲಾಘಿಸಿದ್ದಾರೆ.

'ಬೆಸ್ಟೊ ಅಧ್ಭುತ ಆಟಗಾರ. ಆದರೆ ಆರಂಭಿಕನಾಗಿ ಅತ್ಯುತ್ತಮ ಪ್ರದರ್ಶನ ನೀಡಿರುವ ಮಯಂಕ್‌ಗೆ ತಮ್ಮ ಸ್ಥಾನ ತ್ಯಾಗ ಮಾಡುವುದು ಸುಲಭದ ವಿಚಾರ ಆಗಿರಲಿಲ್ಲ' ಎಂದು ಹೇಳಿದ್ದಾರೆ.

'ಲಿವಿಂಗ್‌ಸ್ಟೋನ್, ಜಿತೇಶ್ ಹಾಗೂ ರಿಷಿ ಧವನ್ ಜೊತೆಗೆ ಮಧ್ಯಮ ಕ್ರಮಾಂಕದಲ್ಲಿ ಅನುಭವಿ ಬ್ಯಾಟರ್ ಬೇಕು ಎಂದು ನಾವು ಭಾವಿಸಿದ್ದೆವು. ಹಾಗಾಗಿ ಬೆಸ್ಟೊ ಅವರಿಗೆ ಬಡ್ತಿ ನೀಡಲಾಯಿತು. ಅಲ್ಲದೆ ಆರಂಭಿಕನಾಗಿ ಉತ್ತಮ ನಿರ್ವಹಣೆ ನೀಡಿದ್ದಾರೆ' ಎಂದು ಹೇಳಿದರು.

'ನಮ್ಮ ಪಾಲಿಗೆ ಅವರು ಪ್ರಮುಖ ಆಟಗಾರ. ಅನುಭವಿ ಆಟಗಾರರು ಜವಾಬ್ದಾರಿ ವಹಿಸಲಿದ್ದಾರೆ ಎಂದು ನಿರ್ಧರಿಸಲಾಗಿತ್ತು. ಅಗ್ರ ಕ್ರಮಾಂಕದಲ್ಲಿ ಜಾನಿ ನಿರ್ವಹಣೆ ನಿಜಕ್ಕೂ ಸಂತಸವನ್ನುಂಟು ಮಾಡಿದೆ' ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.