ADVERTISEMENT

Indian Premier League 2022: ₹15.25 ಕೋಟಿಗೆ ಮುಂಬೈ ಪಾಲಾದ ಇಶಾನ್ ಕಿಶನ್ 

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2022, 11:34 IST
Last Updated 12 ಫೆಬ್ರುವರಿ 2022, 11:34 IST
ಇಶಾನ್ ಕಿಶನ್‌
ಇಶಾನ್ ಕಿಶನ್‌    

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ –2022 (ಐಪಿಎಲ್) ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಯುವ ಆಟಗಾರ ಇಶಾನ್ ಕಿಶನ್ ಅವರನ್ನು ಮುಂಬೈ ಇಂಡಿಯನ್ಸ್ (ಎಂಐ) ₹15.25 ಕೋಟಿ ನೀಡಿ ಖರೀದಿಸಿದೆ.

ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ಆಟಗಾರರ ಹರಾಜು ಪ್ರಕ್ರಿಯೆ ನಡೆಯುತ್ತಿದೆ.

ಸದ್ಯ ಇಶಾನ್, ಮೊದಲ ದಿನದ ಹರಾಜು ಪ್ರಕ್ರಿಯೆಯಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾದ ಆಟಗಾರರೆನಿಸಿದ್ದಾರೆ.

ADVERTISEMENT

ಹರಾಜಿನಲ್ಲಿ ಇಶಾನ್ ಕಿಶನ್‌ ಅವರಿಗಾಗಿ ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್‌ ಹೈದರಾಬಾದ್‌ ತಂಡಗಳ ನಡುವೆ ಪೈಪೋಟಿ ಏರ್ಪಟಿತ್ತು. ಅಂತಿಮವಾಗಿ ಕಿಶನ್‌ರನ್ನು ಖರೀದಿಸುವಲ್ಲಿ ಮುಂಬೈ ಯಶಸ್ವಿಯಾಗಿದೆ.

ಶ್ರೇಯಸ್ ಅಯ್ಯರ್ ಅವರಿಗೆ ಕೆಕೆಆರ್ ತಂಡ ₹12.25 ಕೋಟಿ ನೀಡಿ ಖರೀದಿಸಿದೆ. ಶಿಖರ್ ಧವನ್ ಅವರಿಗೆ ಪಂಜಾಬ್ ಕಿಂಗ್ಸ್ ₹8.25 ಕೋಟಿ ನೀಡಿದೆ.

ಈ ಮೂಲಕ ಇಶಾನ್, ಐಪಿಎಲ್‌ ಇತಿಹಾಸದಲ್ಲಿ ಯುವರಾಜ್ ಸಿಂಗ್ ಬಳಿಕ ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾದ ಭಾರತೀಯ ಆಟಗಾರರೆನಿಸಿದ್ದಾರೆ.
ಓದಿ...Indian Premier League 2022: ಯಾವ ಆಟಗಾರರು ಯಾವ ತಂಡಕ್ಕೆ? ಇಲ್ಲಿದೆ ಪಟ್ಟಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.