ADVERTISEMENT

IPL: ಕೋಲ್ಕತ್ತ vs ರಾಜಸ್ಥಾನ, ಗುಜರಾತ್ vs ಡೆಲ್ಲಿ ಪಂದ್ಯಗಳ ವೇಳಾಪಟ್ಟಿ ಬದಲಾವಣೆ

ಪಿಟಿಐ
Published 2 ಏಪ್ರಿಲ್ 2024, 11:14 IST
Last Updated 2 ಏಪ್ರಿಲ್ 2024, 11:14 IST
<div class="paragraphs"><p>ಕೆಕೆಆರ್ ತಂಡ</p></div>

ಕೆಕೆಆರ್ ತಂಡ

   

(ಪಿಟಿಐ ಸಂಗ್ರಹ ಚಿತ್ರ)

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಮತ್ತು ಗುಜರಾತ್ ಟೈಟನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಿಳಿಸಿದೆ.

ADVERTISEMENT

ಈ ಎರಡು ಪಂದ್ಯಗಳ ದಿನಾಂಕ ಬದಲಾವಣೆಗೆ ಯಾವುದೇ ಕಾರಣವನ್ನು ಬಿಸಿಸಿಐ ನೀಡಿಲ್ಲ.

ಕೋಲ್ಕತ್ತದ ಈಡನ್ ಗಾರ್ಡನ್ ಮೈದಾನದಲ್ಲಿ ಏಪ್ರಿಲ್ 17ರಂದು ನಿಗದಿಯಾಗಿದ್ದ ಕೆಕೆಆರ್ ಹಾಗೂ ಆರ್‌ಆರ್ ನಡುವಣ ಪಂದ್ಯ ಒಂದು ದಿನ ಮುಂಚಿತವಾಗಿ ಏಪ್ರಿಲ್ 16ಕ್ಕೆ ನಡೆಯಲಿದೆ. ಮತ್ತೊಂದೆಡೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಏಪ್ರಿಲ್ 16ಕ್ಕೆ ನಡೆಯಬೇಕಿದ್ದ ಗುಜರಾತ್ ಹಾಗೂ ಡೆಲ್ಲಿ ನಡುವಣ ಪಂದ್ಯವನ್ನು ಏಪ್ರಿಲ್ 17ಕ್ಕೆ ಮುಂದೂಡಲಾಗಿದೆ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ.

ಮೂಲಗಳ ಪ್ರಕಾರ ರಾಮನವಮಿ ಹಬ್ಬದ ಪ್ರಯುಕ್ತ ಕೆಕೆಆರ್ ಪಂದ್ಯದ ದಿನಾಂಕದಲ್ಲಿ ಬದಲಾವಣೆ ಮಾಡಲಾಗಿದೆ. ಏಪ್ರಿಲ್ 17ರಂದು ಪಂದ್ಯಕ್ಕೆ ಸೂಕ್ತ ರೀತಿ ಭದ್ರತೆ ಒದಗಿಸಲು ಸ್ಥಳೀಯ ಪೊಲೀಸರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ ಎಂದು ಬಂಗಾಳ ಕ್ರಿಕೆಟ್‌ ಸಂಸ್ಥೆ (ಸಿಎಬಿ) ಬಿಸಿಸಿಐಗೆ ತಿಳಿಸಿದೆ. ಈ ಪಂದ್ಯವನ್ನು, ಒಂದು ದಿನ ಮೊದಲು (ಏ. 16) ಅಥವಾ ಒಂದು ದಿನ ನಂತರ (ಏಪ್ರಿಲ್ 18ಕ್ಕೆ) ನಡೆಸುವಂತೆ ಸಿಎಬಿ ಸಲಹೆ ಮಾಡಿರುವುದಾಗಿ ತಿಳಿದು ಬಂದಿದೆ.

ಲೋಕಸಭೆಗೆ ಬಂಗಾಳದಲ್ಲಿ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೊದಲ ಹಂತದ ಚುನಾವಣೆ ಏ. 19ರಂದು ನಿಗದಿಯಾಗಿದೆ. ಕೋಲ್ಕತ್ತದಲ್ಲಿ ಜೂನ್ 1ರಂದು ಮತದಾನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.