ಮುಂಬೈ ಇಂಡಿಯನ್ಸ್ ತಂಡ
ಪಿಟಿಐ ಚಿತ್ರ
ಚೆನ್ನೈ ಸೂಪರ್ ಕಿಂಗ್ಸ್ ಎದುರು ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ 4 ವಿಕೆಟ್ ಅಂತರದ ಸೋಲು ಕಂಡ ಮುಂಬೈ ಇಂಡಿಯನ್ಸ್ ತಂಡವು, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಕ್ರಿಕೆಟ್ ಟೂರ್ನಿಯ ಮತ್ತೊಂದು ಆವೃತ್ತಿಯನ್ನು ಸೋಲಿನೊಂದಿಗೆ ಆರಂಭಿಸಿತು.
ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ, ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳನ್ನು ಕಳೆದುಕೊಂಡು 155 ರನ್ ಕಲೆಹಾಕಿತ್ತು. ಈ ಮೊತ್ತ ಬೆನ್ನತ್ತಿದ ಚೆನ್ನೈ, 19.1 ಓವರ್‌ಗಳಲ್ಲಿ 6 ವಿಕೆಟ್‌ಗೆ 158 ರನ್ ಗಳಿಸಿ ಶುಭಾರಂಭ ಮಾಡಿತು.
ಕಳೆದ ಆವೃತ್ತಿಯಲ್ಲಿ ತಂಡವು ಮೂರು ಬಾರಿ ನಿಧಾನಗತಿ ಬೌಲಿಂಗ್ ಮಾಡಿದ ಕಾರಣಕ್ಕೆ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ, ಒಂದು ಪಂದ್ಯ ನಿಷೇಧ ಶಿಕ್ಷೆಗೆ ಗುರಿಯಾಗಿದ್ದರು. ಹೀಗಾಗಿ, ಅವರ ಅನುಪಸ್ಥಿತಿಯಲ್ಲಿ ಸೂರ್ಯಕುಮಾರ್ ಯಾದವ್ ತಂಡ ಮುನ್ನಡೆಸಿದ್ದರು.
ಈ ಪಂದ್ಯದಲ್ಲಿ ಸೋಲುವ ಮುನ್ನ ಮುಂಬೈ ಪಡೆಯು ಹಿಂದಿನ 12 ಆವೃತ್ತಿಯ ಮೊದಲ ಪಂದ್ಯಗಳಲ್ಲಿಯೂ ಸೋತಿದೆ.
2012ರ ಆವೃತ್ತಿಯಲ್ಲಿ ತಾನಾಡಿದ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರು ಗೆದ್ದಿದ್ದೇ ಕೊನೆ. ಆ ನಂತರ ಒಮ್ಮೆಯೂ ಮೊದಲ ಪಂದ್ಯ ಗೆದ್ದಿಲ್ಲ.
2013ರಿಂದ ಈಚೆಗೆ ಮುಂಬೈ ತಂಡದ ಮೊದಲ ಪಂದ್ಯದ ಫಲಿತಾಂಶ ಹೀಗಿದೆ
2013: 2 ರನ್ ಸೋಲು vs ರಾಯಲ್ ಚಾಲೆಂಜರ್ಸ್ ಬೆಂಗಳೂರು
2014: 41 ರನ್ ಸೋಲು vs ಕೋಲ್ಕತ್ತ ನೈಟ್‌ರೈಡರ್ಸ್
2015: 7 ವಿಕೆಟ್ ಸೋಲು vs ಕೋಲ್ಕತ್ತ ನೈಟ್‌ರೈಡರ್ಸ್
2016: 9 ವಿಕೆಟ್ ಸೋಲು vs ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್
2017: 7 ವಿಕೆಟ್ ಸೋಲು vs ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್
2018: 1 ವಿಕೆಟ್ ಸೋಲು vs ಚೆನ್ನೈ ಸೂಪರ್ ಕಿಂಗ್ಸ್
2019: 37 ರನ್ ಸೋಲು vs ಡೆಲ್ಲಿ ಕ್ಯಾಪಿಟಲ್ಸ್
2020: 5 ವಿಕೆಟ್ ಸೋಲು vs ಚೆನ್ನೈ ಸೂಪರ್ ಕಿಂಗ್ಸ್
2021: 2 ವಿಕೆಟ್ ಸೋಲು vs ರಾಯಲ್ ಚಾಲೆಂಜರ್ಸ್ ಬೆಂಗಳೂರು
2022: 4 ವಿಕೆಟ್ ಸೋಲು vs ಡೆಲ್ಲಿ ಕ್ಯಾಪಿಟಲ್ಸ್
2023: 8 ವಿಕೆಟ್ ಸೋಲು vs ರಾಯಲ್ ಚಾಲೆಂಜರ್ಸ್ ಬೆಂಗಳೂರು
2024: 6 ರನ್ ಸೋಲು vs ಗುಜರಾತ್ ಟೈಟನ್ಸ್
2025: 4 ವಿಕೆಟ್ ಸೋಲು vs ಚೆನ್ನೈ ಸೂಪರ್ ಕಿಂಗ್ಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.