ನವದೆಹಲಿ:ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 13ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದೆ. ಇದೇ ಮೊದಲ ಬಾರಿಗೆ ಕೋಲ್ಕತ್ತದಲ್ಲಿ ಆಯೋಜನೆಯಾಗಿರುವ ಹರಾಜು ಪ್ರಕ್ರಿಯೆಮಧ್ಯಾಹ್ನ 2.30ಕ್ಕೆ ನಡೆಯಲಿದೆ.
ಹರಾಜು ಪ್ರಕ್ರಿಯೆಗೆ ಒಟ್ಟು 997 ಆಟಗಾರರು ಹೆಸರು ನೊಂದಾಯಿಸಿಕೊಂಡಿದ್ದರು. ಆದರೆ, ಐಪಿಎಲ್‌ನಲ್ಲಿ ಆಡಲಿರುವ8 ಫ್ರಾಂಚೈಸ್‌ಗಳು ಸಲ್ಲಿಸಿದ್ದ ತಮಗೆ ಅಗತ್ಯವಿರುವ ಆಟಗಾರರ ಪಟ್ಟಿಗೆ ಅನುಗುಣವಾಗಿ 332 ಆಟಗಾರರನ್ನು ಮಾತ್ರವೇ ಅಂತಿಮ ಪಟ್ಟಿಯಲ್ಲಿ ಉಳಿಸಿಕೊಳ್ಳಲಾಗಿದೆ.
ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್, ಮಿಷೆಲ್ ಮಾರ್ಷ್, ದಕ್ಷಿಣ ಆಫ್ರಿಕಾದ ಡೇಲ್ ಸ್ಟೇಯ್ನ್ ಹಾಗೂ ಶ್ರೀಲಂಕಾದ ಏಂಜೆಲೊ ಮ್ಯಾಥ್ಯೂಸ್ ಸೇರಿ ಒಟ್ಟು ಏಳು ಆಟಗಾರರು ₹ 2 ಕೋಟಿ ಮೂಲ ಬೆಲೆ ಹೊಂದಿದ್ದಾರೆ.
ಭಾರತದ ರಾಬಿನ್ ಉತ್ತಪ್ಪ ಅವರಿಗೆ ₹ 1.5 ಕೋಟಿ ಮೂಲಬೆಲೆ ನಿಗದಿಪಡಿಸಲಾಗಿದೆ.ಆಸ್ಟ್ರೇಲಿಯಾ ತಂಡದ ನಾಯಕ ಆ್ಯರನ್ ಫಿಂಚ್ ಮತ್ತು ಕ್ರಿಸ್ ಲಿನ್, ಭಾರತದ ಪೀಯೂಷ್ ಚಾವ್ಲಾ, ಯೂಸುಫ್ ಪಠಾಣ್ ಮತ್ತು ಜಯದೇವ್ ಉನದ್ಕತ್ ಅವರು ₹1 ಕೋಟಿ ಮೂಲ ಬೆಲೆ ಹೊಂದಿದ್ದಾರೆ. ಇವರೆಲ್ಲ ಯಾವಯಾವ ತಂಡಗಳ ಪಾಲಾಗಲಿದ್ದಾರೆಎಂಬ ಕುತೂಹಲ ಗರಿಗೆದರಿದೆ.
ಈ ಬಾರಿಯ ಹರಾಜಿಗೆ ಕ್ರಮವಾಗಿ 186 ಭಾರತದ ಆಟಗಾರರು ಮತ್ತು143 ವಿದೇಶಿ ಆಟಗಾರರು ಲಭ್ಯರಿದ್ದಾರೆ.ಪ್ರಾಂಚೈಸ್‌ಗಳು ಇದರಲ್ಲಿ73ಆಟಗಾರರನ್ನು ಖರೀದಿಸಬಹುದಾಗಿದ್ದು, 29 ವಿದೇಶಿ ಆಟಗಾರರನ್ನೂ ಸೆಳೆದುಕೊಳ್ಳಬಹುದು.
ಹರಾಜು ಪಟ್ಟಿಯಲ್ಲಿರುವ 7 ಆಟಗಾರರಿಗೆ ಎರಡು ಕೋಟಿ ಮೂಲ ಬೆಲೆ ನೀಡಲಾಗಿದೆ. ₹ 1.5 ಕೋಟಿ ಮೂಲ ಬೆಲೆ ಹೊಂದಿರುವ 10, ₹ 1 ಕೋಟಿ ಮೂಲ ಬೆಲೆ ಗಳಿಸಿರುವ 23 ಆಟಗಾರರು ಇದ್ದಾರೆ.
ಇದುವರೆಗೆ ಒಂದೂ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡದ 183 ಆಟಗಾರರಿಗೆ ₹ 20 ಲಕ್ಷ ಮೂಲ ಬೆಲೆ ನಿಗದಿ ಮಾಡಲಾಗಿದೆ.ನಲವತ್ತು ಲಕ್ಷ ಮೂಲ ಬೆಲೆಯ 7 ಹಾಗೂಮೂವತ್ತು ಲಕ್ಷ ಮೂಲ ಬೆಲೆಯ ಎಂಟು ಆಟಗಾರರಿದ್ದಾರೆ.
ಯಾರ ಬಳಿ ಎಷ್ಟು ಹಣವಿದೆ?
ಕಿಂಗ್ಸ್ ಇಲೆವನ್ ಪಂಜಾಬ್: ₹42.70 ಕೋಟಿ
ಕೋಲ್ಕತ್ತ ನೈಟ್ ರೈಡರ್ಸ್: ₹35.65 ಕೋಟಿ
ರಾಜಸ್ಥಾನ ರಾಯಲ್ಸ್: ₹28.90 ಕೋಟಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು: ₹27.90 ಕೋಟಿ
ಡೆಲ್ಲಿ ಕ್ಯಾಪಿಟಲ್ಸ್: ₹27.85 ಕೋಟಿ
ಸನ್‌ರೈಸರ್ಸ್ ಹೈದರಾಬಾದ್: ₹17 ಕೋಟಿ
ಚೆನ್ನೈ ಸೂಪರ್ ಕಿಂಗ್ಸ್: ₹14.60 ಕೋಟಿ
ಮುಂಬೈ ಇಂಡಿಯನ್ಸ್: ₹13.05 ಕೋಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.