ADVERTISEMENT

IPL Auction: ಮಯಾಂಕ್ ಸೇರಿ ಹರಾಜಿನಲ್ಲಿರುವ ಕನ್ನಡಿಗರ ಪಟ್ಟಿ ಇಲ್ಲಿದೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಡಿಸೆಂಬರ್ 2025, 5:51 IST
Last Updated 16 ಡಿಸೆಂಬರ್ 2025, 5:51 IST
<div class="paragraphs"><p>ಆರ್‌ಸಿಬಿಯ ಮಯಂಕ್ ಅಗರವಾಲ್ ಗುರುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದರು&nbsp; &nbsp;–</p></div>

ಆರ್‌ಸಿಬಿಯ ಮಯಂಕ್ ಅಗರವಾಲ್ ಗುರುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದರು   –

   

ಆರ್‌ಸಿಬಿ ಎಕ್ಸ್ ಚಿತ್ರ

ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಹರಾಜು ಪ್ರಕ್ರಿಯೆ ಇಂದು (ಡಿಸೆಂಬರ್ 16)ರಂದು ಅಬುಧಾಬಿಯಲ್ಲಿ ನಡೆಯಲಿದೆ. ಈ ಹರಾಜು ಪ್ರಕ್ರಿಯೆಯಲ್ಲಿ 11 ಮಂದಿ ಕರ್ನಾಟಕದ ಆಟಗಾರರು ಕೂಡ ಸ್ಥಾನ ಪಡೆದಿದ್ದಾರೆ.

ADVERTISEMENT

ಐಪಿಎಲ್ ಹರಾಜಿನಲ್ಲಿರುವ ಕನ್ನಡಿಗರು

  • ಮಯಾಂಕ್ ಅಗರವಾಲ್ ₹75 ಲಕ್ಷ

  • ಅಭಿನವ್ ಮನೋಹರ್ ₹ 30 ಲಕ್ಷ

  • ವಿದ್ಯಾಧರ ಪಾಟೀಲ್ ₹30 ಲಕ್ಷ

  • ವಿದ್ವತ್ ಕಾವೇರಪ್ಪ ₹30 ಲಕ್ಷ

  • ಕೆ.ಸಿ. ಕಾರಿಯಪ್ಪ ₹30 ಲಕ್ಷ

  • ಪ್ರವೀಣ್ ದುಬೆ ₹30 ಲಕ್ಷ

  • ಮನೋಜ್ ಭಾಂಡಗೆ ₹30 ಲಕ್ಷ

  • ಜಗದೀಶ ಸುಚಿತ್ ₹ 30 ಲಕ್ಷ

  • ಕೆ.ಎಲ್. ಶ್ರೀಜಿತ್ ₹30 ಲಕ್ಷ

  • ಅಭಿಲಾಷ್ ಶೆಟ್ಟಿ ₹ 30 ಲಕ್ಷ

  • ಶ್ರೀವತ್ಸ ಆಚಾರ್ಯ ₹30 ಲಕ್ಷ

ಕಳೆದ ಬಾರಿ ನಡೆದ ಮೆಗಾ ಹರಾಜಿನಲ್ಲಿ ಯಾವುದೇ ಫ್ರಾಂಚೈಸಿ ಕೂಡ ಮಯಾಂಕ್ ಅಗರವಾಲ್ ಅವರನ್ನು ಖರೀದಿಸಿರಲಿಲ್ಲ. ಆದರೆ, ಲೀಗ್ ಹಂತದ ಕೊನೆಯ ಪಂದ್ಯಗಳಲ್ಲಿ ಕನ್ನಡಿಗ ದೇವದತ್ತ ಪಡಿಕ್ಕಲ್ ಗಾಯಗೊಂಡು ತಂಡದಿಂದ ಹೊರಬಿದ್ದಿದ್ದರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದರು.

ಈ ಬಾರಿ ಅವರನ್ನು ಆರ್‌ಸಿಬಿ ಫ್ರಾಂಚೈಸಿ ಕೈಬಿಟ್ಟಿದ್ದು, ಮಿನಿ ಹರಾಜಿನಲ್ಲಿ ₹75 ಲಕ್ಷ ಮೂಲ ಬೆಲೆ ಹೊಂದಿರುವ ಮಯಾಂಕ್ ಅವರನ್ನು ಸಿಎಸ್‌ಕೆ ಖರೀದಿಸುವ ಸಾಧ್ಯತೆ ಇದೆ.

ಇನ್ನು ಮಧ್ಯಮ ಕ್ರಮಾಂಕದ ಸ್ಫೋಟಕ ಬ್ಯಾಟರ್ ಆಗಿರುವ ಅಭಿನವ್ ಮನೋಹರ್ ಅವರು ಕಳದ ಎರಡು ಸೀಸನ್‌ಗಳಲ್ಲಿ ಗುಜರಾತ್ ಟೈಟಾನ್ಸ್ ‍ಪರ ಆಡಿದ್ದರು. ಆದರೆ, ಈ ಬಾರಿ ಅವರನ್ನು ಕೈಬಿಟ್ಟಿರುವುದರಿಂದ ಅನೇಕ ಫ್ರಾಂಚೈಸಿಗಳು ಅವರ ಖರೀದಿಗೆ ಮುಂದಾಗುವ ಸಾಧ್ಯತೆ ಇದೆ. ಇವರ ಜೊತೆಗೆ ಮನೋಜ್ ಭಾಂಡಗೆ, ಕೆ.ಎಲ್ ಶ್ರೀಜಿತ್, ವಿದ್ಯಾಧರ ಪಾಟೀಲ್ ಅವರ ಮೇಲೂ ಫ್ರಾಂಚೈಸಿಗಳು ಕಣ್ಣಿಟ್ಟಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.