ADVERTISEMENT

ಐಪಿಎಲ್–2020: ಆರೆಂಜ್–ಪರ್ಪಲ್ ಕ್ಯಾಪ್‌ ಯಾರಿಗೆ? ಇಲ್ಲಿದೆ ಮತ್ತಷ್ಟು ಮಾಹಿತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ನವೆಂಬರ್ 2020, 19:01 IST
Last Updated 10 ನವೆಂಬರ್ 2020, 19:01 IST
   

ದುಬೈ: ಕೋವಿಡ್–19ರ ಸಂಕಷ್ಟದ ನಡುವೆಯೂ ಯಶಸ್ವಿಯಾಗಿ ಮುಕ್ತಾಯವಾದ ಐಪಿಎಲ್‌–2020 ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ ಪಟ್ಟಕ್ಕೇರಿತು. ಇದು ಈ ತಂಡಕ್ಕೆ ಸತತ ಎರಡನೇ ಮತ್ತು ಒಟ್ಟಾರೆ ಐದನೇ ಪ್ರಶಸ್ತಿ.ಮುಂಬೈ ಈ ಹಿಂದೆ 2013, 2015, 2017, 2019 ರಲ್ಲಿ ಟ್ರೋಫಿ ಎತ್ತಿ ಹಿಡಿದಿತ್ತು. ಮುಂಬೈಗೆ ಶರಣಾದ ಡೆಲ್ಲಿ ಕ್ಯಾಪಿಟಲ್ಸ್‌ ಇದೇ ಮೊದಲ ಸಲ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದಿತ್ತು.

ಮುಂಬೈ ಹೊರತುಪಡಿಸಿ ಚೆನ್ನೈ ಸೂಪರ್‌ಕಿಂಗ್ಸ್‌ (3) ಮತ್ತು ಕೋಲ್ಕತ್ತ ನೈಟ್‌ರೈಡರ್ಸ್‌ (2) ತಂಡಗಳು ಒಂದಕ್ಕಿಂತ ಹೆಚ್ಚು ಸಲ ಚಾಂಪಿಯನ್‌ ಎನಿಸಿವೆ. ಚೆನ್ನೈ 2010,2011 ಮತ್ತು 2018ರಲ್ಲಿ ಪ್ರಶಸ್ತಿ ಗೆದ್ದಿತ್ತು. ಕೋಲ್ಕತ್ತ 2012 ಮತ್ತು 2014ರಲ್ಲಿ ಚಾಂಪಿಯನ್‌ ಆಗಿತ್ತು. ಉಳಿದಂತೆ, ರಾಜಸ್ಥಾನ ರಾಯಲ್ಸ್ (2008), ಸನ್‌ರೈಸರ್ಸ್ ಹೈದರಾಬಾದ್‌ (2016) ಹಾಗೂ ಡೆಕ್ಕನ್‌ ಚಾರ್ಜರ್ಸ್‌ (2009) ತಲಾ ಒಂದು ಸಲ ಪ್ರಶಸ್ತಿ ಗೆದ್ದಿವೆ.

ಸದ್ಯ ಮುಕ್ತಾಯವಾದ ಐಪಿಎಲ್‌–2020 ಟೂರ್ನಿಯಲ್ಲಿಹೆಚ್ಚು ರನ್‌ ಗಳಿಸಿರುವ ಆಟಗಾರರು ಯಾರು? ಹೆಚ್ಚು ವಿಕೆಟ್‌ಗಳನ್ನು ಉರುಳಿಸಿದವರು ಯಾರು? ವೇಗದ ಶತಕ ಮತ್ತು ಅರ್ಧಶತಕಗಳು ಯಾರ ಹೆಸರಲ್ಲಿವೆ? ಹೆಚ್ಚು ಸಿಕ್ಸರ್‌ ಸಿಡಿಸಿದವರು ಯಾರು? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ADVERTISEMENT

ಪಾಯಿಂಟ್ಸ್‌ ಪಟ್ಟಿ‌

ಸ್ಥಾನ ತಂಡ ಪಂದ್ಯಗಳು ಗೆಲುವು ಸೋಲು ಅಂಕ
1. ಮುಂಬೈ ಇಂಡಿಯನ್ಸ್ 14 9 5 18
2. ‌ಡೆಲ್ಲಿ ಕ್ಯಾಪಿಟಲ್ಸ್ 14 8 6 16
3. ‌‌ಸನ್‌ರೈಸರ್ಸ್‌ ಹೈದರಾಬಾದ್‌‌ 14 7 7 14
4. ರಾಯಲ್ ಚಾಲೆಂಜರ್ಸ್‌ ಬೆಂಗಳೂರು‌ 14 7 7 14
5. ಕೋಲ್ಕತ್ತ ನೈಟ್‌ರೈಡರ್ಸ್‌ 14 7 7 14
6. ಕಿಂಗ್ಸ್‌ ಇಲವೆನ್‌ ಪಂಜಾಬ್ 14 6 8 12
7. ಚೆನ್ನೈ ಸೂಪರ್‌ಕಿಂಗ್ಸ್ 14 6 8 12
8. ‌ರಾಜಸ್ಥಾನ ರಾಯಲ್ಸ್ 14 6 8 12

ಹೆಚ್ಚು ರನ್‌ ಗಳಿಸಿದ ಐವರು

ಸ್ಥಾನ ಆಟಗಾರ ತಂಡ ಆಡಿದ ಪಂದ್ಯ ರನ್‌ ಗರಿಷ್ಠ
1. ಕೆ.ಎಲ್.‌ ರಾಹುಲ್ ಕಿಂಗ್ಸ್ ಇಲವೆನ್ ಪಂಜಾಬ್ 14 670 132*
2. ಶಿಖರ್ ಧವನ್ ಡೆಲ್ಲಿ ಕ್ಯಾಪಿಟಲ್ಸ್ 17 618 106*
3. ಡೇವಿಡ್ ವಾರ್ನರ್ ಸನ್‌ರೈಸರ್ಸ್ ಹೈದರಾಬಾದ್ 16 548 85*
4. ಶ್ರೇಯಸ್‌ ಅಯ್ಯರ್‌ ಡೆಲ್ಲಿ ಕ್ಯಾಪಿಟಲ್ಸ್ 17 519 88*
5. ಇಶಾನ್ ಕಿಶನ್ ಮುಂಬೈ ಇಂಡಿಯನ್ಸ್‌ 14 516 99

ಹೆಚ್ಚು ವಿಕೆಟ್‌ ಕಬಳಿಸಿದ ಐವರು

ಸ್ಥಾನ ಆಟಗಾರ ತಂಡ ಆಡಿದ ಪಂದ್ಯ ವಿಕೆಟ್ ಗರಿಷ್ಠ
1. ಕಗಿಸೊ ರಬಾಡ ಡೆಲ್ಲಿ ಕ್ಯಾಪಿಟಲ್ಸ್‌ 17 30 4/24
2. ಜಸ್‌ಪ್ರೀತ್‌ ಬುಮ್ರಾ ಮುಂಬೈ ಇಂಡಿಯನ್ಸ್ 15 27 4/14
3. ಟ್ರೆಂಟ್‌ ಬೌಲ್ಟ್ ಮುಂಬೈ ಇಂಡಿಯನ್ಸ್ 15 25 4/18
4. ಎನ್ರಿಚ್‌ ನೋಕಿಯೆ ಡೆಲ್ಲಿ ಕ್ಯಾಪಿಟಲ್ಸ್ 16 22 3/33
5. ಯಜುವೇಂದ್ರ ಚಾಹಲ್‌ ‌ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು 14 21 3/18

ಹೆಚ್ಚು ಬೌಂಡರಿ ಬಾರಿಸಿದ ಐವರು

ಸ್ಥಾನ ಆಟಗಾರ ತಂಡ ಪಂದ್ಯ ಬೌಂಡರಿಗಳು
1. ಶಿಖರ್ ಧವನ್ ಡೆಲ್ಲಿ ಕ್ಯಾಪಿಟಲ್ಸ್ 17 67
2.

ಸೂರ್ಯಕುಮಾರ್ ಯಾದವ್

ಮುಂಬೈ ಇಂಡಿಯನ್ಸ್

16 61
3. ಕೆ.ಎಲ್‌.ರಾಹುಲ್ ‌ಕಿಂಗ್ಸ್‌ ಇಲವೆನ್‌ ಪಂಜಾಬ್‌ 14 58
4. ಡೇವಿಡ್ ವಾರ್ನರ್ ಸನ್‌ರೈಸರ್ಸ್ ಹೈದರಾಬಾದ್‌ 16 52
5. ದೇವದತ್ತ ಪಡಿಕ್ಕಲ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು 15 51

ಹೆಚ್ಚು ಸಿಕ್ಸರ್ ಸಿಡಿಸಿದ ಐವರು

ಸ್ಥಾನ ಆಟಗಾರ ತಂಡ ಪಂದ್ಯ ಸಿಕ್ಸರ್‌ಗಳು
1. ‌ಇಶಾನ್ ಕಿಶನ್ ಮುಂಬೈ ಇಂಡಿಯನ್ಸ್ 14 30
2. ಸಂಜು ಸ್ಯಾಮ್ಸನ್ ರಾಜಸ್ಥಾನ ರಾಯಲ್ಸ್ 14 26
3. ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ 14 25
4. ನಿಕೋಲಸ್ ಪೂರನ್ ಕಿಂಗ್ಸ್‌ ಇಲವೆನ್‌ ಪಂಜಾಬ್‌ 14 25
5. ಎಯಾನ್ ಮಾರ್ಗನ್ ಕೋಲ್ಕತ್ತ ನೈಟ್‌ರೈಡರ್ಸ್‌ 14 24

ಹೆಚ್ಚು ಅರ್ಧಶತಕ ಗಳಿಸಿದಐವರು

ಸ್ಥಾನ ಆಟಗಾರ ತಂಡ ಪಂದ್ಯ ಅರ್ಧಶತಕ
1. ಕೆ.ಎಲ್‌.ರಾಹುಲ್ ಕಿಂಗ್ಸ್‌ ಇಲವೆನ್‌ ಪಂಜಾಬ್ 14 5
2. ದೇವದತ್ತ ಪಡಿಕ್ಕಲ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು‌ 15 5
3. ಎಬಿ ಡಿ ವಿಲಿಯರ್ಸ್‌ ‌ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು‌ 15 5
4. ‌ಶಿಖರ್ ಧವನ್ ಡೆಲ್ಲಿ ಕ್ಯಾಪಿಟಲ್ಸ್‌ 17 4
5. ಡೇವಿಡ್ ವಾರ್ನರ್ ಸನ್‌ರೈಸರ್ಸ್‌ ಹೈದರಾಬಾದ್ 16 4

ಹೆಚ್ಚು ಶತಕ ಗಳಿಸಿದವರು

ಸ್ಥಾನ ಆಟಗಾರ ತಂಡ ಆಡಿದ ಪಂದ್ಯ ಶತಕ ಗರಿಷ್ಠ
1. ಶಿಖರ್‌ ಧವನ್ ಡೆಲ್ಲಿ ಕ್ಯಾಪಿಟಲ್ಸ್ 14 2 106*
2. ಕೆ.ಎಲ್‌. ರಾಹುಲ್‌ ಕಿಂಗ್ಸ್ ಇಲವೆನ್ ಪಂಜಾಬ್ 14 1 132
3 ‌ಮಯಂಕ್‌ ಅಗರವಾಲ್ ‌ಕಿಂಗ್ಸ್ ಇಲವೆನ್ ಪಂಜಾಬ್ 11 1 106
4 ಬೆನ್ ಸ್ಟೋಕ್ಸ್ ರಾಜಸ್ಥಾನ ರಾಯಲ್ಸ್ 8 1 107
- - - - - -

ವೇಗದ ಶತಕ

ಸ್ಥಾನ ಆಟಗಾರ ತಂಡ ಎಸೆತಗಳು ರನ್ ಎದುರಾಳಿ
1. ಮಯಂಕ್‌ ಅಗರವಾಲ್ ಕಿಂಗ್ಸ್ ಇಲವೆನ್ ಪಂಜಾಬ್ 45 106 ರಾಜಸ್ಥಾನ ರಾಯಲ್ಸ್
2. ಶಿಖರ್‌ ಧವನ್ ಡೆಲ್ಲಿ ಕ್ಯಾಪಿಟಲ್ಸ್ 57 106 ಕಿಂಗ್ಸ್ ಇಲವೆನ್ ಪಂಜಾಬ್
3 ‌ಶಿಖರ್‌ ಧವನ್ ‌ಡೆಲ್ಲಿ ಕ್ಯಾಪಿಟಲ್ಸ್ 57 101 ಚೆನ್ನೈ ಸೂಪರ್ ಕಿಂಗ್ಸ್‌
4 ಬೆನ್ ಸ್ಟೋಕ್ಸ್ ರಾಜಸ್ಥಾನ ರಾಯಲ್ಸ್ 59 107 ಮುಂಬೈ ಇಂಡಿಯನ್ಸ್‌
5 ಕೆ.ಎಲ್‌. ರಾಹುಲ್‌ ಕಿಂಗ್ಸ್ ಇಲವೆನ್ ಪಂಜಾಬ್ 62 132 ರಾಯಲ್‌ ಚಾಲೆಂಜರ್ಸ್ ಬೆಂಗಳೂರು

ವೇಗದ ಅರ್ಧಶತಕ

ಸ್ಥಾನ ಆಟಗಾರ ತಂಡ ಎಸೆತಗಳು ರನ್ ಎದುರಾಳಿ
1. ನಿಕೋಲಸ್ ಪೂರನ್ ಕಿಂಗ್ಸ್ ಇಲವೆನ್ ಪಂಜಾಬ್ 17 77 ಸನ್‌ರೈಸರ್ಸ್ ಹೈದರಾಬಾದ್‌
2. ಸಂಜು ಸ್ಯಾಮ್ಸನ್‌ ರಾಜಸ್ಥಾನ ರಾಯಲ್ಸ್‌ 19 74 ಚೆನ್ನೈ ಸೂಪರ್‌ ಕಿಂಗ್ಸ್‌
3 ‌ಕೀರನ್‌ ಪೊಲಾರ್ಡ್‌ ‌ಮುಂಬೈ ಇಂಡಿಯನ್ಸ್ 20 60 ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು
4 ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ 20 60 ರಾಜಸ್ಥಾನ ರಾಯಲ್ಸ್‌‌
5 ಮಾರ್ಕಸ್‌ ಸ್ಟೋಯಿನಸ್‌‌ ಡೆಲ್ಲಿ ಕ್ಯಾಪಿಟಲ್ಸ್ 20 53 ಕಿಂಗ್ಸ್ ಇಲವೆನ್ ಪಂಜಾಬ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.