ADVERTISEMENT

ಆರ್‌ಸಿಬಿ, ಮುಂಬೈ ಅಲ್ಲ; ಇದುವೇ ಗೂಗಲ್‌ನಲ್ಲಿ ಹೆಚ್ಚು ಹುಡುಕಿದ ಐಪಿಎಲ್ ತಂಡ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಡಿಸೆಂಬರ್ 2025, 15:55 IST
Last Updated 5 ಡಿಸೆಂಬರ್ 2025, 15:55 IST
   

ಬೆಂಗಳೂರು: ಸರ್ಚ್ ಎಂಜಿನ್ ದೈತ್ಯ ಗೂಗಲ್‌ನಲ್ಲಿ 2025ನೇ ಸಾಲಿನಲ್ಲಿ ಅತಿ ಹೆಚ್ಚು ಹುಡುಕಾಡಿದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತಂಡ ಎಂಬ ಗೌರವಕ್ಕೆ ಪಂಜಾಬ್ ಕಿಂಗ್ಸ್ ಪಾತ್ರವಾಗಿದೆ.

ಆ ಮೂಲಕ ಐಪಿಎಲ್‌ನ ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರುನಂತಹ ಜನಪ್ರಿಯ ತಂಡಗಳನ್ನೇ ಹಿಂದಿಕ್ಕಿದೆ.

ಇನ್ನು ಹೆಜ್ಜೆ ಮುಂದೆ ಇಟ್ಟಿರುವ ಪಂಜಾಬ್ ಕಿಂಗ್ಸ್, ಜಾಗತಿಕವಾಗಿ ಅತಿ ಹೆಚ್ಚು ಶೋಧಿಸಲ್ಪಟ್ಟ 'ಸ್ಪೋರ್ಟ್ಸ್ ತಂಡ'ಗಳ ಪೈಕಿ ನಾಲ್ಕನೇ ಸ್ಥಾನ ಗಿಟ್ಟಿಸಿಕೊಂಡಿದೆ.

ADVERTISEMENT

ಪ್ಯಾರಿಸ್ ಸೈಂಟ್-ಜರ್ಮೈನ್ ಎಫ್‌ಸಿ ಮೊದಲ ಸ್ಥಾನಲ್ಲಿದ್ದು, ಎಸ್.ಎಲ್. ಬೆನ್ಫಿಕಾ ಮತ್ತು ಟೊರಂಟೊ ಬ್ಲೂ ಜೇಯ್ಸ್ ಅನುಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿದೆ.

ಪಟ್ಟಿಯಲ್ಲಿ ಐಪಿಎಲ್‌ನ ಮತ್ತೊಂದು ಫ್ರಾಂಚೈಸಿ ಆಗಿರುವ ಡೆಲ್ಲಿ ಕ್ಯಾಪಿಟಲ್ಸ್ ಐದನೇ ಸ್ಥಾನದಲ್ಲಿದ್ದು, ಗಮನಾರ್ಹ ಸಾಧನೆ ಮಾಡಿದೆ.

2025ನೇ ಸಾಲಿನ ಐಪಿಎಲ್ ಫೈನಲ್‌ನಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿದ್ದ ರಜತ್ ಪಾಟೀದಾರ್ ಮುಂದಾಳತ್ವದ ಆರ್‌ಸಿಬಿ, ಚೊಚ್ಚಲ ಕಿರೀಟ ಎತ್ತಿ ಹಿಡಿದಿತ್ತು.

ಕೃಪೆ: ಗೂಗಲ್ ಟ್ರೆಂಡ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.