ADVERTISEMENT

ಬೆಂಗಳೂರಿನಲ್ಲಿ ಐಪಿಎಲ್‌ | ಅಧಿವೇಶನದ ಬಳಿಕ ಗೃಹ ಸಚಿವರೊಂದಿಗೆ ಚರ್ಚೆ; ಪ್ರಸಾದ್

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 10:38 IST
Last Updated 16 ಡಿಸೆಂಬರ್ 2025, 10:38 IST
ವೆಂಕಟೇಶ್ ಪ್ರಸಾದ್ 
ವೆಂಕಟೇಶ್ ಪ್ರಸಾದ್    

ಮೈಸೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಯೇ ಐಪಿಎಲ್‌ ಉದ್ಘಾಟನಾ ಪಂದ್ಯ ನಡೆಸಲು ಸರ್ಕಾರದ ಹಸಿರು ನಿಶಾನೆ ಅಗತ್ಯವಿತ್ತು. ಮೌಖಿಕ ಒಪ್ಪಿಗೆಯನ್ನು ರಾಜ್ಯ ಸರ್ಕಾರ ಈಗಾಗಲೇ ನೀಡಿದ್ದು, ಶೀಘ್ರದಲ್ಲಿಯೇ ಲಿಖಿತ ಅನುಮತಿ ದೊರೆಯಲಿದೆ’ ಎಂದು ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್‌ ಪ್ರಸಾದ್‌ ತಿಳಿಸಿದರು.

ಮಾನಸ ಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕ್ರೀಡಾಂಗಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಬೆಳಗಾವಿ ವಿಧಾನಮಂಡಲ ಅಧಿವೇಶನದ ನಂತರ ಗೃಹ ಸಚಿವ ಜಿ.ಪರಮೇಶ್ವರ ಅವರೊಂದಿಗೆ ಮಾತನಾಡಲಾಗುವುದು’ ಎಂದರು.  

‘ಆರ್‌ಸಿಬಿ ಚಾಂಪಿಯನ್‌ ಆಗಿರುವುದರಿಂದ ತವರು ನೆಲದಲ್ಲಿಯೇ ಉದ್ಘಾಟನಾ ಪಂದ್ಯ ನಡೆಯಬೇಕು. ಆರ್‌ಸಿಬಿ ಸಂಭ್ರಮಾಚರಣೆಯಲ್ಲಿ ಉಂಟಾದ ಕಾಲ್ತುಳಿತ ಪ್ರಕರಣದಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ಹಾಗೂ ಐಪಿಎಲ್‌ ಪಂದ್ಯಗಳನ್ನು ಮತ್ತೆ ಆಯೋಜಿಸುವ ವಾತಾವರಣ ನಿರ್ಮಿಸುವುದು ಸುಲಭವಿರಲಿಲ್ಲ. ರಾಜ್ಯ ಸರ್ಕಾರದ ಬೆಂಬಲ ಅಗತ್ಯವಿತ್ತು. ಈ ಬಗ್ಗೆ ಬಿಸಿಸಿಐ ಜೊತೆಯೂ ಮಾತನಾಡಲಾಗಿದೆ’ ಎಂದು ಹೇಳಿದರು.

ADVERTISEMENT

‘ವಿಜಯ್‌ ಹಜಾರೆ ಟ್ರೋಫಿ ಪಂದ್ಯಗಳಲ್ಲಿ ವಿರಾಟ್‌ ಕೊಹ್ಲಿ ಆಡಲಿದ್ದು, ಆಲೂರಿನ ಮೂರು ಕ್ರೀಡಾಂಗಣ ಹಾಗೂ ಚಿನ್ನಸ್ವಾಮಿಯಲ್ಲೂ ಪಂದ್ಯಗಳು ನಡೆಯಲಿವೆ. ಕೊಹ್ಲಿ ಎಲ್ಲಿ ಆಡಲಿದ್ದಾರೆ ಎಂಬುದು ಖಚಿತವಾಗಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.