ADVERTISEMENT

ಐಪಿಎಲ್‌ | ಆರ್‌ಸಿಬಿ ಆಟಗಾರರಿಗೆ ಕ್ವಾರಂಟೈನ್ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2020, 22:47 IST
Last Updated 13 ಆಗಸ್ಟ್ 2020, 22:47 IST
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ   

ಬೆಂಗಳೂರು: ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಆಟಗಾರರು ಶುಕ್ರ ವಾರದಿಂದ ಒಂದು ವಾರ ಹೋಟೆಲ್‌ ಕ್ವಾರಂಟೈನ್ ಆರಂಭಿಸಲಿದ್ದಾರೆ.

ಸೆಪ್ಟೆಂಬರ್‌ 19ರಿಂದ ಯುಎ ಇಯಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಆರ್‌ಸಿಬಿ ಆಡಲಿದೆ.

’ಆರ್‌ಸಿಬಿಯಲ್ಲಿ ಆಡುವ ಭಾರತ ತಂಡದ ಆಟಗಾರರು ಮತ್ತಿತರರು ಬೆಂಗಳೂರಿಗೆ ಬರಲಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಕೂಡ ತಂಡವನ್ನು ಸೇರಿಕೊಳ್ಳಲಿದ್ದಾರೆ. ಇದೇ 21ರಂದು ತಂಡವು ಯುಎಇಗೆ ತೆರಳಲಿದೆ‘ ಎಂದು ಆರ್‌ಸಿಬಿ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಸಂಜಯ್ ಚೂರಿವಾಲಾ ‘ಪ್ರಜಾವಾಣಿ’ ಗೆ ತಿಳಿಸಿದ್ದಾರೆ.

ADVERTISEMENT

’ಯುಎಇಗೆ ತೆರಳುವ ಮುನ್ನ ನೆಟ್ಸ್‌ ಅಭ್ಯಾಸ ಇರುವುದಿಲ್ಲ. ವಿದೇಶಿ ಆಟಗಾರರೂ ಬರುತ್ತಿಲ್ಲ. ಅವರು ನೇರವಾಗಿ ಯುಎ ಇಗೆ ಬರಲಿದ್ದಾರೆ‘ ಎಂದೂ ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್, ಡೇಲ್ ಸ್ಟೇಯ್ನ್, ಶ್ರೀಲಂಕಾದ ಇಸುರು ಉಡಾನ, ಕ್ರಿಸ್ ಮಾರಿಸ್, ಆ್ಯರನ್ ಫಿಂಚ್ ಮತ್ತು ಮೋಯಿನ್ ಅಲಿ ಅವರು ತಂಡದಲ್ಲಿದ್ಧಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.