ADVERTISEMENT

ಟೆಸ್ಟ್‌ನಲ್ಲಿ 1,000 ರನ್: ಇಂಗ್ಲೆಂಡ್‌ಗೆ ಆಸರೆಯಾಗುತ್ತಲೇ 2 ದಾಖಲೆ ಬರೆದ ಸ್ಮಿತ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಜುಲೈ 2025, 13:00 IST
Last Updated 11 ಜುಲೈ 2025, 13:00 IST
<div class="paragraphs"><p>ಜೆಮೀ ಸ್ಮಿತ್‌</p></div>

ಜೆಮೀ ಸ್ಮಿತ್‌

   

ರಾಯಿಟರ್ಸ್‌ ಚಿತ್ರ

ಲಾರ್ಡ್ಸ್‌: ಭಾರತ ತಂಡದ ವಿರುದ್ಧ ನಡೆಯುತ್ತಿರುವ ಟೆಸ್ಟ್‌ ಕ್ರಿಕೆಟ್‌ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರುತ್ತಿರುವ ಇಂಗ್ಲೆಂಡ್‌ ಬ್ಯಾಟರ್‌ ಜೆಮೀ ಸ್ಮಿತ್‌, ಎರಡು ವಿಶೇಷ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ADVERTISEMENT

ಐದು ಪಂದ್ಯಗಳ ಟೆಸ್ಟ್‌ ಸರಣಿಯ ಮೂರನೇ ಪಂದ್ಯವು ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಎರಡನೇ ದಿನದಾಟದ ಆರಂಭದಲ್ಲೇ ಆಘಾತ ಅನುಭವಿಸಿದ ಆಂಗ್ಲರ ಬಳಗಕ್ಕೆ ಸ್ಮಿತ್‌ ಆಸರೆಯಾಗಿದ್ದಾರೆ. ಅವರ ಆಟದ ಬಲದಿಂದ, 2ನೇ ದಿನ ಊಟದ ವಿರಾಮದ ಹೊತ್ತಿಗೆ ತಂಡದ ಮೊತ್ತ 7 ವಿಕೆಟ್‌ಗೆ 353 ರನ್‌ ಆಗಿದೆ.

ಏಕದಿನ ಶೈಲಿಯಲ್ಲಿ ಬ್ಯಾಟ್‌ ಬೀಸುತ್ತಿರುವ ಸ್ಮಿತ್‌, 53 ಎಸೆತಗಳಲ್ಲಿ 51 ರನ್‌ ಗಳಿಸಿ ಆಡುತ್ತಿದ್ದಾರೆ. ಅವರಿಗೆ ಸಾಥ್‌ ನೀಡುತ್ತಿರುವ ಬ್ರೇಯ್ಡನ್‌ ಕೇರ್ಸ್‌, 33 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

ಮೊದಲ ದಿನದಾಟದ ಅಂತ್ಯಕ್ಕೆ 4 ವಿಕೆಟ್‌ಗೆ 251 ರನ್‌ ಗಳಿಸಿದ್ದ ಆಂಗ್ಲರು ಇಂದು ಆರಂಭದಲ್ಲೇ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿದ್ದರು.

ವೇಗವಾಗಿ 1,000 ರನ್‌
ಟೆಸ್ಟ್‌ ಕ್ರಿಕೆಟ್‌ನಲ್ಲಿ ಈವರೆಗೆ 13 ಪಂದ್ಯಗಳ 21 ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿರುವ ಸ್ಮಿತ್‌, ಇಲ್ಲಿ ಆರನೇ ಅರ್ಧಶತಕ ಪೂರೈಸಿದರು. ಇದರೊಂದಿಗೆ, ಈ ಮಾದರಿಯಲ್ಲಿ ಅತಿ ಕಡಿಮೆ ಎಸೆತಗಳಲ್ಲಿ ಮತ್ತು ಕಡಿಮೆ ಇನಿಂಗ್ಸ್‌ಗಳಲ್ಲಿ ಸಹಸ್ರ ರನ್‌ ಗಳಿಸಿದ ವಿಕೆಟ್‌ಕೀಪರ್‌ ಬ್ಯಾಟರ್‌ ಎಂಬ ಶ್ರೇಯಕ್ಕೆ ಭಾಜನರಾದರು.

ಕಡಿಮೆ ಎಸೆತಗಳಲ್ಲಿ ಸಾವಿರ ರನ್‌ ಪೂರೈಸಿದ ವಿಕೆಟ್‌ಕೀಪರ್‌ಗಳು

  • ಜೆಮೀ ಸ್ಮಿತ್ (ಇಂಗ್ಲೆಂಡ್‌): 1,303 ಎಸೆತ

  • ಸರ್ಫರಾಜ್‌ ಖಾನ್‌ (ಪಾಕಿಸ್ತಾನ): 1,311 ಎಸೆತ

  • ಆ್ಯಡಂ ಗಿಲ್‌ಕ್ರಿಸ್ಟ್‌ (ಆಸ್ಟ್ರೇಲಿಯಾ): 1,330 ಎಸೆತ

  • ನಿರೋಷಾನ್‌ ಡಿಕ್ವೆಲ್ಲಾ (ಶ್ರೀಲಂಕಾ): 1,367 ಎಸೆತ

  • ಕ್ವಿಂಟನ್‌ ಡಿ ಕಾಕ್‌ (ದಕ್ಷಿಣ ಆಫ್ರಿಕಾ): 1,375 ಎಸೆತ

ಕಡಿಮೆ ಇನಿಂಗ್ಸ್‌ಗಳಲ್ಲಿ ಸಾವಿರ ರನ್‌ ಗಳಿಸಿದ ವಿಕೆಟ್‌ಕೀಪರ್‌ಗಳು

  • 21 ಇನಿಂಗ್ಸ್‌: ಜೆಮೀ ಸ್ಮಿತ್ (ಇಂಗ್ಲೆಂಡ್‌), ಕ್ವಿಂಟನ್‌ ಡಿ ಕಾಕ್‌ (ದಕ್ಷಿಣ ಆಫ್ರಿಕಾ)

  • 22 ಇನಿಂಗ್ಸ್‌: ದಿನೇಶ್‌ ಚಾಂಡಿಮಲ್‌ (ಶ್ರೀಲಂಕಾ), ಜಾನಿ ಬೆಸ್ಟೋ (ಇಂಗ್ಲೆಂಡ್‌)

  • 23 ಇನಿಂಗ್ಸ್‌: ಕುಮಾರ ಸಂಗಕ್ಕರ (ಶ್ರೀಲಂಕಾ), ಎಬಿ ಡಿ ವಿಲಿಯರ್ಸ್‌ (ದಕ್ಷಿಣ ಆಫ್ರಿಕಾ)

  • 24 ಇನಿಂಗ್ಸ್‌: ಜೆಫ್‌ ಡುಜಾನ್‌ (ವೆಸ್ಟ್‌ ಇಂಡೀಸ್‌)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.