
ನವದೆಹಲಿ: ದುಲೀಪ್ ಟ್ರೋಫಿಯಲ್ಲಿ ಆಡಿರುವುದು ಏಷ್ಯಾ ಕಪ್‌ನಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಲು ಸಹಕಾರಿಯಾಯಿತು ಎಂದು ಟೀಂ ಇಂಡಿಯಾದ ಸ್ಪಿನ್ನರ್ ಕುಲದೀಪ್ ಯಾದವ್ ಹೇಳಿಕೊಂಡಿದ್ದಾರೆ.
ಭಾನುವಾರ ಮುಕ್ತಾಯಗೊಂಡ ಏಷ್ಯಾ ಕಪ್‌ನಲ್ಲಿ ಟೀಂ ಇಂಡಿಯಾ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಕುಲದೀಪ್ ಯಾದವ್ ಅವರ ಬೌಲಿಂಗ್. ಅವರು ಟೂರ್ನಿಯಲ್ಲಿ 9.29 ಸರಾಸರಿಯಲ್ಲಿ 17 ವಿಕೆಟ್ ಪಡೆಯುವ ಮೂಲಕ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಫೈನಲ್ ಪಂದ್ಯದಲ್ಲಿ ಅವರು 30 ರನ್ ನೀಡಿ 4 ವಿಕೆಟ್ ಪಡೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಈ ಕುರಿತು ರಿಂಕು ಸಿಂಗ್ ಜೊತೆಗಿನ ಸಂಭಾಷಣೆಯಲ್ಲಿ ಮಾತನಾಡಿದ ಕುಲದೀಪ್ ಯಾದವ್, 'ದೀರ್ಘಕಾಲದಿಂದ ಕ್ರಿಕೆಟ್ ಆಡದಿದ್ದಾಗ ಲಯಕ್ಕೆ ಮರಳುವುದು ಮುಖ್ಯ. ದುಲೀಪ್ ಟ್ರೋಫಿ ಆಡಿದ್ದು ನನಗೆ ಲಯಕ್ಕೆ ಮರಳಲು ಸಹಾಯ ಮಾಡಿತು ಎಂದು ಅವರು ಹೇಳಿದರು.
ದುಲೀಪ್ ಟ್ರೋಫಿ ಆಡಿ ಏಷ್ಯಾಕಪ್‌ಗೆ ಬಂದಿದ್ದರಿಂದ ನನ್ನ ಬೌಲಿಂಗ್ ಹಿಡಿತದಲ್ಲಿತ್ತು ಎಂದು ಕುಲದೀಪ್ ತಂಡದ ಸಹ ಆಟಗಾರ ರಿಂಕು ಸಿಂಗ್ ಅವರೊಂದಿಗಿನ ಸಂಭಾಷಣೆಯಲ್ಲಿ ಹೇಳಿಕೊಂಡಿದ್ದಾರೆ. ಅವರ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಹಂಚಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.