ADVERTISEMENT

ಐಪಿಎಲ್‌ನಿಂದ ಅಭಿಮಾನಿಗಳಿಗೆ ಒತ್ತಡ ನಿವಾರಣೆಯಾಗಲಿದೆ: ಹಾರ್ದಿಕ್‌ ಪಾಂಡ್ಯ

ಏಜೆನ್ಸೀಸ್
Published 1 ಸೆಪ್ಟೆಂಬರ್ 2020, 11:25 IST
Last Updated 1 ಸೆಪ್ಟೆಂಬರ್ 2020, 11:25 IST
 ಹಾರ್ದಿಕ್‌ ಪಾಂಡ್ಯ
ಹಾರ್ದಿಕ್‌ ಪಾಂಡ್ಯ   

ನವದೆಹಲಿ: ಕೋವಿಡ್‌ ಪಿಡುಗಿನಿಂದ ಕ್ರಿಕೆಟ್‌ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಈ ಬಾರಿಯ ಐಪಿಎಲ್‌ ಒತ್ತಡ ನಿವಾರಿಸುವಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂದು ಮುಂಬೈ ಇಂಡಿಯನ್ಸ್‌ ತಂಡದ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಹೇಳಿರುವುದಾಗಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ನ 13ನೇ ಆವೃತ್ತಿ ಸೆಪ್ಟೆಂಬರ್ 19ರಂದು ಯುಎಇಯಲ್ಲಿ ಆರಂಭವಾಗಲಿದೆ.ಇತ್ತೀಗಷ್ಟೇ ತಂದೆಯಾದ ಖುಷಿಯಲ್ಲಿರುವ ಹಾರ್ದಿಕ್‌, ಇದೀಗ ಐಪಿಎಲ್‌ನಲ್ಲಿ ಮಿಂಚಲು ಸಜ್ಜಾಗಿದ್ದಾರೆ.

‘ಕಳೆದ ಹತ್ತು ತಿಂಗಳಿನಿಂದ ನಾನು ತರಬೇತಿ ಪಡೆಯುವುದರ ಜೊತೆಗೆ ಫಿಟ್‌ನೆಸ್‌ ವಿಚಾರವಾಗಿ ಹೆಚ್ಚು ಗಮನ ಹರಿಸಿದ್ದೇನೆ. ಅದನ್ನು ಕಾರ್ಯಗತಗೊಳಿಸಲು ನಾನು ಉತ್ಸುಕನಾಗಿದ್ದೇನೆ’ ಎಂದು ತಿಳಿಸಿದ್ದಾರೆ.

ADVERTISEMENT

ಕೋವಿಡ್‌ ಲಾಕ್‌ಡೌನ್ ಅವಧಿಯಲ್ಲಿ ಹೊರಗಡೆ ಓಡಾಡದೆ ಮನೆಯಲ್ಲೇ ಇದ್ದು ಜಿಮ್‌ ವರ್ಕೌಟ್‌ ಮಾಡಿದ್ದೇನೆ. ಎಲ್ಲಾ ಕಠಿಣ ಪರಿಶ್ರಮ, ಸಿದ್ಧತೆ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.

ಹಾರ್ದಿಕ್,‌ ಕಳೆದ ಜನವರಿಯಲ್ಲಿ ಬೆನ್ನುಹುರಿ ಗಾಯಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ನಂತರ ಯಾವುದೇ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಆಡಿರಲಿಲ್ಲ. ಇದೀಗ ಕಠಿಣ ಅಭ್ಯಾಸ ನಡೆಸಿರುವ ಅವರು ಐಪಿಎಲ್‌‌ನತ್ತ ಗಮನಹರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.