ADVERTISEMENT

NZ v IND ODI: ಶಿಖರ್ –ಶ್ರೇಯಸ್ ಭರ್ಜರಿ ಬ್ಯಾಟಿಂಗ್, ಕಿವೀಸ್‌ಗೆ 307 ರನ್ ಗುರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ನವೆಂಬರ್ 2022, 5:50 IST
Last Updated 25 ನವೆಂಬರ್ 2022, 5:50 IST
ಶಿಖರ್ ಧವನ್
ಶಿಖರ್ ಧವನ್   

ಆಕ್ಲೆಂಡ್: ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಬೃಹತ್ ಮೊತ್ತ ಪೇರಿಸಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 306 ರನ್ ಗಳಿಸಿದೆ.

ಭಾರತದ ಪರ ಶ್ರೇಯಸ್ ಅಯ್ಯರ್ 80, ಶಿಖರ್ ಧವನ್ 72, ಶುಭಮನ್ ಗಿಲ್ 50, ಸಂಜು ಸ್ಯಾಮ್ಸನ್ 36, ವಾಷಿಂಗ್ಟನ್ ಸುಂದರ್ ಔಟಾಗದೆ 37 ರನ್ ಗಳಿಸಿ ತಂಡಕ್ಕೆ ಆಸರೆಯಾದರು.

ADVERTISEMENT

ಕಿವೀಸ್ ಪರ ಟಿಮ್ ಸೌಥಿ, ಲಾಕಿ ಫರ್ಗ್ಯುಸನ್ ತಲಾ ಮೂರು ಹಾಗೂ ಆ್ಯಡಂ ಮಿಲ್ನೆ ಒಂದು ವಿಕೆಟ್ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.