ADVERTISEMENT

ಪೊಲಾರ್ಡ್ 'ಟಾಪ್ 5' ಟಿ20 ಆಟಗಾರರ ಪಟ್ಟಿಯಲ್ಲಿ ವಿರಾಟ್, ರೋಹಿತ್‌ಗಿಲ್ಲ ಸ್ಥಾನ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಅಕ್ಟೋಬರ್ 2021, 14:13 IST
Last Updated 6 ಅಕ್ಟೋಬರ್ 2021, 14:13 IST
ಕೀರನ್ ಪೊಲಾರ್ಡ್
ಕೀರನ್ ಪೊಲಾರ್ಡ್   

ದುಬೈ: ವೆಸ್ಟ್‌ಇಂಡೀಸ್‌‌ನ ಟ್ವೆಂಟಿ-20 ಕ್ರಿಕೆಟ್ ತಂಡದ ನಾಯಕ ಕೀರನ್ ಪೊಲಾರ್ಡ್, ವಿಶ್ವ ಕ್ರಿಕೆಟ್‌ನ ಐವರು ಅಗ್ರ ಟ್ವೆಂಟಿ-20 ಕ್ರಿಕೆಟ್ ಆಟಗಾರರನ್ನು ಹೆಸರಿಸಿದ್ದಾರೆ.

ಆದರೆ ಅಚ್ಚರಿಯೆಂಬಂತೆ ಪೊಲಾರ್ಡ್ ಆರಿಸಿದ ಪಟ್ಟಿಯಲ್ಲಿ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಸ್ಥಾನ ಪಡೆದಿಲ್ಲ.

ಆದರೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ನಾಲ್ಕನೇ ಸ್ಥಾನ ನೀಡಿದ್ದಾರೆ.

ಪೊಲಾರ್ಡ್ ಆಯ್ಕೆ ಮಾಡಿದ 'ಟಾಪ್ 5' ಟಿ20 ಆಟಗಾರರ ಪಟ್ಟಿ ಇಂತಿದೆ:
1. ಕ್ರಿಸ್ ಗೇಲ್
2. ಲಸಿತ್ ಮಾಲಿಂಗ
3. ಸುನಿಲ್ ನಾರಾಯಣ್
4. ಮಹೇಂದ್ರ ಸಿಂಗ್ ಧೋನಿ
5. ಕೀರನ್ ಪೊಲಾರ್ಡ್

ಪಟ್ಟಿಯಲ್ಲಿ ತಮ್ಮನ್ನು ಸೇರಿದಂತೆ ವೆಸ್ಟ್‌ಇಂಡೀಸ್‌ನ ಮೂವರು ಆಟಗಾರರನ್ನು ಆರಿಸಿದ್ದಾರೆ. ಅಲ್ಲದೆ ಟಿ20 ಮಾದರಿಯ ಶ್ರೇಷ್ಠ ಆಟಗಾರನ ಪಟ್ಟವನ್ನು ಕ್ರಿಸ್ ಗೇಲ್ ಅವರಿಗೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.