
ಕರಾಚಿ: 19 ವರ್ಷದೊಳಗಿನವರ ಏಕದಿನ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಭಾರತದ ಎದುರು 191 ರನ್ ಅಂತರದ ಜಯ ಸಾಧಿಸಿ ಚಾಂಪಿಯನ್ ಪಟ್ಟಕ್ಕೇರಿರುವ ಪಾಕಿಸ್ತಾನ ತಂಡದ ಪ್ರತಿ ಸದಸ್ಯರಿಗೆ ಪ್ರಧಾನಿ ಶೆಹಬಾಜ್ ಷರೀಫ್ ಅವರು ತಲಾ ಒಂದು ಕೋಟಿ ಪಾಕಿಸ್ತಾನದ ರೂಪಾಯಿ ಬಹುಮಾನವನ್ನು ಸೋಮವಾರ ಘೋಷಿಸಿದ್ದಾರೆ
ತಂಡವನ್ನು ಸತ್ಕರಿಸಿದ ಬಳಿಕ, ಭಾರಿ ಮೊತ್ತದ ಬಹುಮಾನವನ್ನು ಷರೀಫ್ ಘೋಷಿಸಿದ್ದಾರೆ.
ತಂಡದ ವ್ಯವಸ್ಥಾಪಕ ಮತ್ತು ಮಾರ್ಗದರ್ಶಕ ಸರ್ಫರಾಜ್ ಅಹಮದ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ‘ತಂಡಕ್ಕೆ ಸತ್ಕಾರ ನೀಡಿದ ಬಳಿಕ ಪ್ರಧಾನಿ ಅವರು ಪ್ರತಿಯೊಬ್ಬ ಆಟಗಾರನಿಗೆ ಒಂದು ಕೋಟಿ ಪಾಕಿಸ್ತಾನದ ರೂಪಾಯಿಯನ್ನು ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಪ್ರತಿಭಾನ್ವಿತ ಕ್ರೀಡಾಪಟುಗಳೊಂದಿಗೆ ಕೆಲಸ ಮಾಡುತ್ತಿರುವುದು ಖುಷಿ ಎನಿಸುತ್ತದೆ’ ಎಂದಿದ್ದಾರೆ.
‘ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಕಳೆದ ಜೂನ್‌ನಲ್ಲಿ ಆರಂಭವಾಗಿತ್ತು. 70 ಆಟಗಾರರಲ್ಲಿ 20 ಜನರನ್ನು ಆಯ್ಕೆ ಮಾಡಬೇಕಿತ್ತು. ಉಳಿದ ಆಟಗಾರರಲ್ಲಿ ಹೆಚ್ಚಿನವರಿಗೆ ದೇಶೀಯ ಮಟ್ಟದಲ್ಲಿ 50 ಓವರ್‌ಗಳ ಕ್ರಿಕೆಟ್ ಆಡಲು ಅವಕಾಶ ನೀಡಲಾಗಿದೆ’ ಎಂದು ಮುಖ್ಯ ಕೋಚ್ ಶಾಹಿದ್ ಅನ್ವರ್ ಹೇಳಿದ್ದಾರೆ.
ದುಬೈನಲ್ಲಿರುವ ಐಸಿಸಿ ಅಕಾಡೆಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ಪಡೆ, ಆರಂಭಿಕ ಬ್ಯಾಟರ್ ಸಮೀರ್ ಮಿನ್ಹಾಸ್ ಬಾರಿಸಿದ ಅಮೋಘ ಶತಕದ ಬಲದಿಂದ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 347 ರನ್ ಕಲೆಹಾಕಿತ್ತು.
ಬೃಹತ್ ಗುರಿ ಬೆನ್ನತ್ತಿದ ಭಾರತ, 26.2 ಓವರ್‌ಗಳಲ್ಲಿ 156 ರನ್ ಗಳಿಸುವಷ್ಟರಲ್ಲಿ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿಗೆ ಶರಣಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.