ADVERTISEMENT

ಬೌಲಿಂಗ್‌ ಶೈಲಿ: ಪಾಕ್ ಸ್ಪಿನ್ನರ್ ಉಸ್ಮಾನ್ ತಾರಿಕ್‌‌ಗೆ ಅಶ್ವಿನ್ ಬೆಂಬಲ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 0:11 IST
Last Updated 12 ಫೆಬ್ರುವರಿ 2026, 0:11 IST
<div class="paragraphs"><p>ಆರ್‌. ಅಶ್ವಿನ್‌</p></div>

ಆರ್‌. ಅಶ್ವಿನ್‌

   

ಕೊಲಂಬೊ (ಪಿಟಿಐ): ಅಮೆರಿಕ ವಿರುದ್ಧದ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಮೂರು ವಿಕೆಟ್‌ ಕಬಳಿಸಿ ಗಮನ ಸೆಳೆದ ಪಾಕಿಸ್ತಾನದ ಆಫ್ ಸ್ಪಿನ್ನರ್ ಉಸ್ಮಾನ್ ತಾರಿಕ್ ಅವರ ಬೌಲಿಂಗ್‌ ಶೈಲಿಯ ಬಗ್ಗೆ ಚರ್ಚೆ ಆರಂಭವಾಗಿದೆ. 

ತಾರಿಕ್ ಅವರು ನಾಲ್ಕು ಟಿ20 ಪಂದ್ಯಗಳನ್ನು ಆಡಿ 11 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈಗ ಅವರ ವಿಭಿನ್ನ ಬೌಲಿಂಗ್‌ ಶೈಲಿಯ ಬಗ್ಗೆ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗಿವೆ. ಆದರೆ, ಭಾರತದ ಸ್ಪಿನ್‌ ದಿಗ್ಗಜ ಆರ್‌. ಅಶ್ವಿನ್‌ ಅವರು ತಾರಿಕ್ ಬೆಂಬಲಕ್ಕೆ ನಿಂತಿದ್ದಾರೆ. 

ADVERTISEMENT

‘ನಾನು ಒಂದು ವಿಷಯವನ್ನು ಸ್ಪಷ್ಟ ಪಡಿಸಲು ಬಯಸುತ್ತೇನೆ; ತಾರಿಕ್‌ ಅವರ ಬೌಲಿಂಗ್‌ ಶೈಲಿ ಕಾನೂನುಬದ್ಧವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಐಸಿಸಿ ಬೌಲಿಂಗ್ ಶೈಲಿ ಪರೀಕ್ಷಾ ಕೇಂದ್ರದಲ್ಲಿ ಮಾತ್ರ ಪರೀಕ್ಷಿಸಬಹುದು. ಕ್ರಿಕೆಟ್‌ನಲ್ಲಿ 15 ಡಿಗ್ರಿ ನಿಯಮವಿದ್ದು, ಬೌಲರ್ ತನ್ನ ಮೊಣಕೈಯನ್ನು ಅಷ್ಟು ಮಾತ್ರ ಬಾಗಿಸಬೇಕು. ಆ ನಿಮಯ ಉಲ್ಲಂಘಿಸಿದ್ದಾನೆಯೇ ಎಂಬುದನ್ನು ಫೀಲ್ಡ್ ಅಂಪೈರ್ ನಿರ್ಣಯಿಸುವುದು ಅಸಾಧ್ಯ’ ಎಂದು ಎಕ್ಸ್‌ನಲ್ಲಿ ಅಶ್ವಿನ್‌ ಬರೆದುಕೊಂಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.