ವಿರಾಟ್ ಕೊಹ್ಲಿ, ಆರ್. ಅಶ್ವಿನ್
(ಚಿತ್ರ ಕೃಪೆ: X@imVkohli)
ಬ್ರಿಸ್ಬೇನ್: 'ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವುದಾಗಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಿಳಿಸಿದಾಗ ಭಾವುಕನಾದೆ. 14 ವರ್ಷಗಳ ಕಾಲ ಅಶ್ವಿನ್ ಅವರೊಂದಿಗೆ ನಾನು ಕ್ರಿಕೆಟ್ ಆಡಿದ್ದೇನೆ. ಹಳೆಯ ನೆನಪುಗಳು ಮನಸ್ಸಲ್ಲಿ ಹಾದು ಹೋದವು' ಎಂದು ಕ್ರಿಕೆಟಿಗ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಸಾಗುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮಧ್ಯೆ ಅಶ್ವಿನ್ ದಿಢೀರ್ ಆಗಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
ಗಾಬಾದಲ್ಲಿ ಭಾವೋದ್ವೇಗಕ್ಕೊಳಗಾಗಿ ವಿರಾಟ್ ಕೊಹ್ಲಿ ಅವರನ್ನು ಅಶ್ವಿನ್ ತಬ್ಬಿಕೊಳ್ಳುತ್ತಿರುವ ದೃಶ್ಯವು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
'ಅಶ್ವಿನ್ ಅವರೊಂದಿಗೆ ಕ್ರಿಕೆಟ್‌ನ ಪ್ರತಿಯೊಂದು ಕ್ಷಣವನ್ನು ಆನಂದಿಸಿದ್ದೇನೆ. ನಿಮ್ಮ ಕೌಶಲ್ಯ ಮತ್ತು ಭಾರತೀಯ ಕ್ರಿಕೆಟ್‌ಗೆ ನೀವು ಸಲ್ಲಿಸಿದ ಕೊಡುಗೆಗಳಿಗೆ ಸರಿಸಾಟಿಯಿಲ್ಲ. ನೀವು ಭಾರತೀಯ ಕ್ರಿಕೆಟ್‌ನ ದಿಗ್ಗಜರಾಗಿ ಗುರುತಿಸಲ್ಪಡುವೀರಿ' ಎಂದು ವಿದಾಯ ಘೋಷಿಸಿರುವ ಸಹ ಆಟಗಾರನ ಕುರಿತು ಕೊಹ್ಲಿ ಗುಣಗಾನ ಮಾಡಿದ್ದಾರೆ.
'ಕುಟುಂಬದೊಂದಿಗಿನ ನಿಮ್ಮ ಮುಂದಿನ ಜೀವನಕ್ಕೆ ಶುಭ ಹಾರೈಸುತ್ತೇನೆ. ಎಲ್ಲದಕ್ಕೂ ಪ್ರೀತಿಯ ಧನ್ಯವಾದಗಳು ಗೆಳೆಯ' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.