ADVERTISEMENT

‘ಚಾಲೊಕೇಟ್’‌ ಎಂದು ಬರೆದು ಇನ್ನೊಮ್ಮೆ ಓದಿ ಎಂದ ರೋಹನ್ ಗಾವಸ್ಕರ್

ಏಜೆನ್ಸೀಸ್
Published 26 ಸೆಪ್ಟೆಂಬರ್ 2020, 12:27 IST
Last Updated 26 ಸೆಪ್ಟೆಂಬರ್ 2020, 12:27 IST
ರೋಹನ್ ಗಾವಸ್ಕರ್‌ (ಒಳಚಿತ್ರದಲ್ಲಿ ಅನುಷ್ಕಾ ಶರ್ಮಾ, ವಿರಾಟ್‌ ಕೊಹ್ಲಿ ಮತ್ತು ಸುನೀಲ್ ಗಾವಸ್ಕರ್‌)
ರೋಹನ್ ಗಾವಸ್ಕರ್‌ (ಒಳಚಿತ್ರದಲ್ಲಿ ಅನುಷ್ಕಾ ಶರ್ಮಾ, ವಿರಾಟ್‌ ಕೊಹ್ಲಿ ಮತ್ತು ಸುನೀಲ್ ಗಾವಸ್ಕರ್‌)   

ಕಿಂಗ್ಸ್‌ ಇಲವೆನ್‌ ಪಂಜಾಬ್‌ ತಂಡದ ವಿರುದ್ಧದ ಪಂದ್ಯದಲ್ಲಿ ಎರಡು ಕ್ಯಾಚ್‌ಗಳನ್ನು ಕೈಚೆಲ್ಲಿದ್ದಷ್ಟೇ ಅಲ್ಲದೆ ಬ್ಯಾಟಿಂಗ್‌ನಲ್ಲಿಯೂ ವಿಫಲರಾಗಿದ್ದ ವಿರಾಟ್‌ ಕೊಹ್ಲಿ ಅವರ ಪ್ರದರ್ಶನದ ಬಗ್ಗೆ ಮಾಜಿ ಕ್ರಿಕೆಟಿಗ ಸುನೀಲ್‌ ಗಾವಸ್ಕರ್‌ ಅವರು ಟೀಕೆಮಾಡಿದ್ದರು. ಟೀಕಿಸುವ ಭರದಲ್ಲಿ ವಿರಾಟ್‌ ಪತ್ನಿ ಅನುಶ್ಕಾ ಶರ್ಮಾ ಅವರ ಹೆಸರನ್ನೂ ಎಳೆದು ತಂದಿದ್ದರಿಂದ ಗಾವಸ್ಕರ್ ವಿವಾದ ಸೃಷ್ಟಿಸಿದ್ದರು.ಹೀಗಾಗಿ ಗರಂ ಆಗಿರುವ ಕೊಹ್ಲಿ ಮತ್ತು ಅನುಷ್ಕಾ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಗಾವಸ್ಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಸುನೀಲ್‌ ಗಾವಸ್ಕರ್ ಅವರ ಪುತ್ರ ರೋಹನ್‌ ಗಾವಸ್ಕರ್ ಮಾಡಿರುವ ಟ್ವೀಟ್‌ ವೈರಲ್‌ ಆಗಿದೆ. ರೋಹನ್‌ ತಮ್ಮ ಟ್ವೀಟ್‌ನಲ್ಲಿ, ‘ಐ ಲವ್‌ ಚಾಲೊಕೇಟ್‌. ಇದನ್ನು ಮತ್ತೊಮ್ಮೆ ಓದಿ. ನೀವು ಪರೀಕ್ಷೆಯಲ್ಲಿ ಫೇಲ್‌ ಆಗುವುದೂ ಹೀಗೆಯೇ’ ಎಂದು ತಿಳಿಸಿದ್ದಾರೆ. ಈ ಟ್ವೀಟ್‌ ಮೂಲಕ ಅವರು ತಮ್ಮ ತಂದೆಯ ಹೇಳಿಕೆಯನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ ಎನ್ನಲಾಗಿದೆ. ರೋಹನ್‌ ಟ್ವೀಟ್‌ ನೋಡಿದರೆ ಅವರು ‘ಚಾಕೊಲೇಟ್’ ಎಂದು ಬರೆದಿದ್ದಾರೆ ಎನಿಸುತ್ತದೆ. ಆದರೆ ಅವರು ಬರೆದಿರುವುದು ‘ಚಾಲೊಕೇಟ್’ ಎಂದು.

ಪಂಜಾಬ್‌ ಹಾಗೂ ಬೆಂಗಳೂರು ತಂಡಗಳುಗುರುವಾರ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿಭರ್ಜರಿ ಶತಕ ಗಳಿಸಿದ್ದ ಪಂಜಾಬ್‌ ತಂಡದ ನಾಯಕ ಕೆಎಲ್‌ ರಾಹುಲ್90 ರನ್‌ ಆಸುಪಾಸಿನಲ್ಲಿದ್ದಾಗ ನೀಡಿದ ಎರಡು ಕ್ಯಾಚ್‌ಗಳನ್ನು ವಿರಾಟ್‌ ನೆಲಕ್ಕೆ ಹಾಕಿದ್ದರು. ಬಳಿಕ ಅವರು ಅಜೇಯ 132ರನ್‌ ಸಿಡಿಸಿದ್ದರು. ಇದರ ಪರಿಣಾಮವಾಗಿ ಪಂಜಾಬ್‌ ತಂಡ 206 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿತ್ತು. ಈ ಮೊತ್ತ ಬೆನ್ನತ್ತಿದ ಆರ್‌ಸಿಬಿ ಕೇವಲ 109 ರನ್‌ಗಳಿಗೆ ಆಲೌಟ್‌ ಆಗುವ ಮೂಲಕ 107 ರನ್‌ಗಳ ಸೋಲು ಒಪ್ಪಿಕೊಂಡಿತ್ತು. ಕೊಹ್ಲಿ ಬ್ಯಾಟಿಂಗ್‌ನಲ್ಲಿಯೂ ವಿಫಲರಾಗಿದ್ದರು.

ADVERTISEMENT

ಪಂದ್ಯದ ವೀಕ್ಷಕ ವಿವರಣೆ ನೀಡುವ ವೇಳೆ ಸುನೀಲ್‌ ಗಾವಸ್ಕರ್ ಅವರು‌, ‘ಲಾಕ್‌ಡೌನ್‌ ವೇಳೆ ಕೊಹ್ಲಿ ಕೇವಲ ಅನುಷ್ಕಾ ಅವರ ಬೌಲಿಂಗ್‌ನಲ್ಲಿ ಅಭ್ಯಾಸ ಮಾಡಿದ್ದಾರೆ’ ಎಂದಿದ್ದರು. ವಿವಾದ ಸೃಷ್ಟಿಯಾದ ಬಳಿಕ ಸ್ಪಷ್ಟನೆ ನೀಡಿದ್ದ ಅವರು ‘ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ’ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.