ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್
(ಚಿತ್ರ ಕೃಪೆ: X/@imlt20official)
ಮುಂಬೈ: ಭಾರತೀಯ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಹಾಗೂ ಯುವರಾಜ್ ಸಿಂಗ್ ನಿವೃತ್ತಿಯಾಗಿ ವರ್ಷಗಳೇ ಉರುಳಿವೆ. ಕ್ರಿಕೆಟ್ ಪ್ರೇಮಿಗಳು ಈಗಲೂ ಈ ದಿಗ್ಗಜರ ಕ್ರಿಕೆಟ್ ಮಿಸ್ ಮಾಡಿಕೊಳ್ಳುತ್ತಿದ್ದಾರೆ.
ಆದರೆ ಭಾರತೀಯ ಕ್ರಿಕೆಟ್‌ನ ಅತ್ಯಂತ ಜನಪ್ರಿಯ ಆಟಗಾರರಾದ ಸಚಿನ್ ಹಾಗೂ ಯುವಿ ಮತ್ತೆ ಭಾರತದ ಪರ ನೀಲಿ ಜೆರ್ಸಿ ಧರಿಸಿ ಕಣಕ್ಕಿಳಿಯಲಿದ್ದಾರೆ.
ಹೌದು, ಚೊಚ್ಚಲ 'ಇಂಟರ್‌ನ್ಯಾಷನಲ್ ಮಾಸ್ಟರ್ಸ್ ಲೀಗ್' ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸಚಿನ್ 'ಇಂಡಿಯಾ ಮಾಸ್ಟರ್ಸ್' ತಂಡವನ್ನು ಮುನ್ನಡೆಸುತ್ತಿದ್ದಾರೆ. ಯುವರಾಜ್ ಸಿಂಗ್ ಸೇರಿದಂತೆ ಮಾಜಿ ಆಟಗಾರರು ತಂಡದಲ್ಲಿದ್ದಾರೆ.
ನಾಳೆ (ಫೆ.22) ನಡೆಯಲಿರುವ ಇಂಟರ್‌ನ್ಯಾಷನಲ್ ಮಾಸ್ಟರ್ಸ್ ಲೀಗ್ ಉದ್ಘಾಟನಾ ಪಂದ್ಯದಲ್ಲಿ ಇಂಡಿಯಾ ಮಾಸ್ಟರ್ಸ್ ತಂಡವು ಶ್ರೀಲಂಕಾ ಮಾಸ್ಟರ್ಸ್ ತಂಡದ ಸವಾಲನ್ನು ಎದುರಿಸಲಿದೆ. ನವಿ ಮುಂಬೈಯಲ್ಲಿ ರಾತ್ರಿ 7.30ಕ್ಕೆ ಪಂದ್ಯ ಆರಂಭವಾಗಲಿದೆ.
ಒಟ್ಟು ಆರು ತಂಡಗಳು ಭಾಗವಹಿಸುವ ಟೂರ್ನಿಯ ಫೈನಲ್ ಪಂದ್ಯವು ಮಾರ್ಚ್ 16ರಂದು ರಾಯ್‌ಪುರದಲ್ಲಿ ನಡೆಯಲಿದೆ.
ಇದರೊಂದಿಗೆ ಅಭಿಮಾನಿಗಳಿಗೆ ಸಚಿನ್ ಹಾಗೂ ಯುವಿ ಆಟವನ್ನು ಮತ್ತೆ ಕಣ್ತುಂಬಿಕೊಳ್ಳುವ ಅದೃಷ್ಟ ಒಲಿಯಲಿದೆ.
ಭಾಗವಹಿಸುವ ತಂಡಗಳು:
ಇಂಡಿಯಾ ಮಾಸ್ಟರ್ಸ್,
ಶ್ರೀಲಂಕಾ ಮಾಸ್ಟರ್ಸ್,
ಇಂಗ್ಲೆಂಡ್ ಮಾಸ್ಟರ್ಸ್,
ವೆಸ್ಟ್‌ಇಂಡೀಸ್ ಮಾಸ್ಟರ್ಸ್,
ದಕ್ಷಿಣ ಆಫ್ರಿಕಾ ಮಾಸ್ಟರ್ಸ್,
ಆಸ್ಟ್ರೇಲಿಯಾ ಮಾಸ್ಟರ್ಸ್,
ದಿಗ್ಗಜರು ಭಾಗಿ...
ವೆಸ್ಟ್‌ಇಂಡೀಸ್ ತಂಡವನ್ನು ಬ್ರಿಯಾನ್ ಲಾರಾ, ದಕ್ಷಿಣ ಆಫ್ರಿಕಾ ತಂಡವನ್ನು ಜಾಕ್ ಕಾಲಿಸ್, ಆಸ್ಟ್ರೇಲಿಯಾ ತಂಡವನ್ನು ಶೇನ್ ವಾಟ್ಸನ್, ಶ್ರೀಲಂಕಾ ತಂಡವನ್ನು ಕುಮಾರ ಸಂಗಕ್ಕಾರ ಮತ್ತು ಇಂಗ್ಲೆಂಡ್ ತಂಡವನ್ನು ಇಯಾನ್ ಮಾರ್ಗನ್ ಮುನ್ನಡೆಸುತ್ತಿದ್ದಾರೆ.
ಇಂಡಿಯಾ ಮಾಸ್ಟರ್ಸ್ ತಂಡ ಇಂತಿದೆ:
ಸಚಿನ್ ತೆಂಡೂಲ್ಕರ್ (ನಾಯಕ), ಯುವರಾಜ್ ಸಿಂಗ್, ಯೂಸುಫ್ ಪಠಾಣ್, ಇರ್ಫಾನ್ ಪಠಾಣ್, ಅಂಬಟಿ ರಾಯುಡು, ಸ್ಟುವರ್ಟ್ ಬಿನ್ನಿ, ಧವಳ್ ಕುಲಕರ್ಣಿ, ವಿನಯ್ ಕುಮಾರ್, ಶಹಬಾಜ್ ನದೀಂ, ರಾಹುಲ್ ಶರ್ಮಾ, ನಮನ್ ಓಜಾ, ಪವನ್ ನೇಗಿ, ಗುರ್‌ಕೀರಾತ್ ಸಿಂಗ್ ಮಾನ್, ಅಭಿಮನ್ಯು ಮಿಥುನ್ ಮತ್ತು ಸೌರಭ್ ತಿವಾರಿ.
ಭಾಗವಹಿಸುವ ತಂಡಗಳು, ಆಟಗಾರರ ಸಂಪೂರ್ಣ ಪಟ್ಟಿ (ಚಿತ್ರಗಳಲ್ಲಿ):
ಸಂಪೂರ್ಣ ವೇಳಾಪಟ್ಟಿ (ಚಿತ್ರಗಳಲ್ಲಿ)
ಸಚಿನ್ ಭಾರತದ ಪರ ಕೇವಲ ಒಂದು ಟಿ20 ಅಂತರರಾಷ್ಟ್ರೀಯ ಪಂದ್ಯ ಆಡಿದ್ದಾರೆ. ಮತ್ತೆ ಅವರು ಭಾರತದ ಜರ್ಸಿಯಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಯುವರಾಜ್ ಅವರು 2011ರ ವಿಶ್ವಕಪ್ ಜೊತೆಗೆ 2007ರ ಟಿ20 ವಿಶ್ವಕಪ್ ಗೆದ್ದ ತಂಡದಲ್ಲಿ ಆಡಿದ್ದರು. ಲಂಕಾ ತಂಡದಲ್ಲಿ ಕುಮಾರ ಸಂಗಕ್ಕರ, ಮಹೇಲ ಜಯವರ್ಧನ, ಚಮಿಂದ ವಾಸ್, ತಿಲಕರತ್ನೆ ದಿಲ್ಶಾನ್, ಸನತ್ ಜಯಸೂರ್ಯ ಮೊದಲಾದವರು ಆಡಲಿದ್ದಾರೆ.
ಪಂದ್ಯಗಳು ನವಿ ಮುಂಬೈ, ವಡೋದರ, ರಾಯಪುರದಲ್ಲಿ ನಡೆಯಲಿವೆ. ಸೆಮಿಫೈನಲ್ಸ್ ಮತ್ತು ಪೈನಲ್ ಪಂದ್ಯ ರಾಯಪುರದಲ್ಲಿ ನಡೆಯಲಿವೆ. ಫೈನಲ್ ಮಾ. 16ರಂದು ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.