
ಗಾಯಗೊಂಡ ಶ್ರೇಯಸ್ ಅಯ್ಯರ್ ಅವರನ್ನು ಪೆವಿಲಿಯನ್‌ಗೆ ಕರೆದೊಯ್ದ ನೆರವು ಸಿಬ್ಬಂದಿ
ಸಿಡ್ನಿ: ದಿನ ಕಳೆದಂತೆ ತಮ್ಮ ಆರೋಗ್ಯ ಸುಧಾರಣೆ ಕಾಣುತ್ತಿದೆ ಎಂದು ಭಾರತ ತಂಡದ ಪ್ರಮುಖ ಬ್ಯಾಟರ್ ಶ್ರೇಯಸ್ ಅಯ್ಯರ್ ಹೇಳಿದ್ದಾರೆ.
ಹೋದ ಶನಿವಾರ ನಡೆದ ಮೂರನೇ ಏಕದಿನ ಪಂದ್ಯದ ವೇಳೆ, ಅಲೆಕ್ಸ್ ಕ್ಯಾರಿ ಅವರ ಕ್ಯಾಚ್ ಪಡೆಯುವಾಗ ಅಯ್ಯರ್ ಅವರ ಪಕ್ಕೆಲುಬಿನ ಭಾಗ ನೆಲಕ್ಕೆ ಉಜ್ಜಿತ್ತು. ಗುಲ್ಮಕ್ಕೂ ಸ್ವಲ್ಪ ಗಾಯವಾಗಿತ್ತು.
‘ನಾನು ಚೇತರಿಕೆಯ ಪ್ರಕ್ರಿಯೆಯಲ್ಲಿದ್ದೇನೆ. ದಿನಗಳೆಂದಂತೆ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ’ ಎಂದು ಗಾಯಾಳಾದ ನಂತರ ಅವರು ಮೊದಲ ಬಾರಿ ‘ಎಕ್ಸ್’ನಲ್ಲಿ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಸಂದೇಶ ಹಾಕಿದ್ದಾರೆ.
‘ನನಗೆ ಸಿಗುತ್ತಿರುವ ಎಲ್ಲ ರೀತಿಯ ಹಾರೈಕೆ ಮತ್ತು ಬೆಂಬಲಗಳಿಗೆ ಕೃತಜ್ಞನಾಗಿದ್ದೇನೆ. ನಿಮ್ಮ ಮನಸ್ಸಿನಲ್ಲಿ ನೀಡಿರುವ ಸ್ಥಾನಕ್ಕೆ ಕೃತಜ್ಞತೆಗಳು’ ಎಂದೂ ಬರೆದಿದ್ದಾರೆ. ಬಿಸಿಸಿಐ ವೈದ್ಯಕೀಯ ತಂಡವು, ಸಿಡ್ನಿ ಮತ್ತು ಭಾರತದ ತಜ್ಞರೊಂದಿಗೆ ಅವರ ಆರೋಗ್ಯದ ಮೇಲೆ ಸತತವಾಗಿ ನಿಗಾ ಇಟ್ಟಿದೆ.
ಆರಂಭದಲ್ಲಿ ಅವರಿಗೆ ಮೂರು ತಿಂಗಳ ವಿಶ್ರಾಂತಿ ಅಗತ್ಯವಾಗಬಹುದೆಂಬ ನಿರೀಕ್ಷೆಯಿತ್ತು. ಈಗ ಸಂಪೂರ್ಣ ಚೇತರಿಕೆಗೆ ಹೆಚ್ಚಿನ ಸಮಯ ಹಿಡಿಯುವ ಸಾಧ್ಯತೆ ಕಾಣುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.