
ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್
(ಪಿಟಿಐ ಚಿತ್ರ)
ಮುಂಬೈ: ‘ನಮ್ಮ ತಂಡದ ವಿರುದ್ಧ ಪಂದ್ಯವನ್ನು ಬಹಿಷ್ಕರಿಸುವುದಾಗಿ ಪಾಕಿಸ್ತಾನ ಘೊಷಿಸಿದ್ದರೂ, ನಾವು ಟಿ20 ವಿಶ್ವಕಪ್ ಆಡಲು ಕೊಲಂಬೊಕ್ಕೆ ಪ್ರಯಾಣಿಸುತ್ತೇವೆ’ ಎಂದು ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಗುರುವಾರ ತಿಳಿಸಿದ್ದಾರೆ.
ಭದ್ರತೆಯ ಕಳವಳ ವ್ಯಕ್ತಪಡಿಸಿ ಭಾರತದಲ್ಲಿ ಆಡಲು ನಿರಾಕರಿಸಿದ ಬಾಂಗ್ಲಾದೇಶ ತಂಡವನ್ನು ಹೊರಗಿಟ್ಟ ಐಸಿಸಿ, ಅದರ ಸ್ಟಾನದಲ್ಲಿ ಸ್ಕಾಟ್ಲೆಂಡ್ ತಂಡವನ್ನು ಸೇರ್ಪಡೆ ಮಾಡಿತ್ತು. ಇದರ ಬೆನ್ನಲ್ಲೇ ಪಾಕಿಸ್ತಾನ, ಬಾಂಗ್ಲಾ ಜೊತೆ ನಿಲ್ಲುವ ಸಂಕೇತವಾಗಿ ಭಾರತ ವಿರುದ್ಧ ಪಂದ್ಯ ಆಡುವುದಿಲ್ಲವೆಂದು ಕೂತಿದೆ.
ಪಾಕಿಸ್ತಾನ ಪಂದ್ಯವನ್ನು ಬಹಿಷ್ಕರಿಸಿರುವುದರ ಕುರಿತು ಮಾತನಾಡಿದ ಸೂರ್ಯಕುಮಾರ್ ಯಾದವ್, ‘ನಾವು ಆಡಲ್ಲ ಅಂತ ಹೇಳಿಲ್ಲ, ಅವರೇ (ಪಾಕಿಸ್ತಾನ) ಹೇಳಿದ್ದಾರೆ. ಈಗಾಗಲೇ ನಮ್ಮ ವಿಮಾನದ ಟಿಕೆಟ್ ಬುಕ್ ಆಗಿದೆ, ನಾವು ಹೋಗುತ್ತಿದ್ದೇವೆ’ ಎಂದಿದ್ದಾರೆ.
‘ಅವರ ನಿರ್ಧಾರ ನನ್ನ ನಿಯಂತ್ರಣದಲ್ಲಿಲ್ಲ ಎಂದು ನಾನು ಭಾವಿಸುತ್ತೇನೆ. ನಾನು ಅವರು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಬಹುದೆಂದು ಬಯಸುತ್ತೇನೆ, ಆದರೆ ಅವರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ನನಗೆ ತಿಳಿದಿಲ್ಲ. ಈಗಾಗಲೇ ನಾವು ನಾವು ಏಷ್ಯಾ ಕಪ್‌ನಲ್ಲಿ ಮೂರು ಬಾರಿ ಆಡಿದ್ದೇವೆ’ ಎಂದು ಸೂರ್ಯ ಹೇಳಿದರು.
‘ನಾವು ಅವರ (ಪಾಕಿಸ್ತಾನದ) ವಿರುದ್ಧ ಉತ್ತಮ ಕ್ರಿಕೆಟ್ ಆಡಿದ್ದೇವೆ. 15ರಂದು ತಟಸ್ಥ ಸ್ಥಳದಲ್ಲಿ ಪಂದ್ಯ ನಡೆಯಲಿದೆ. ಅವಕಾಶ ಸಿಕ್ಕರೆ ಆಡಬೇಕು ಎಂದು ಎಂದು ನಮಗೆ ತಿಳಿಸಲಾಗಿದೆ. ನನಗೆ ತಿಳಿದಂತೆ ಇದು ಅವರಿಗೆ (ಪಾಕಿಸ್ತಾನಿ ಆಟಗಾರರಿಗೆ) ಕಷ್ಟಕರ ಸಮಯ’ ಎಂದು ಸೂರ್ಯ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.