ADVERTISEMENT

ಹರಿಣಗಳ ದಾಳಿಗೆ ಭಾರತ ನಿರುತ್ತರ: ದಕ್ಷಿಣ ಆಫ್ರಿಕಾ ತಂಡಕ್ಕೆ 76 ರನ್‌ಗಳ ಭಾರಿ ಜಯ

ಸೂಪರ್‌ 8ರ ಹಂತ: ವೇಗಿ ಮಾರ್ಕೊ ಯಾನ್ಸೆನ್‌ಗೆ 4 ವಿಕೆಟ್‌

ಪಿಟಿಐ
Published 22 ಫೆಬ್ರುವರಿ 2026, 18:14 IST
Last Updated 22 ಫೆಬ್ರುವರಿ 2026, 18:14 IST
ಡಿವಾಲ್ಡ್‌ ಬ್ರೆವಿಸ್ ಹಾಗೂ ಡೇವಿಡ್‌ ಮಿಲ್ಲರ್‌  ಪಿಟಿಐ ಚಿತ್ರ
ಡಿವಾಲ್ಡ್‌ ಬ್ರೆವಿಸ್ ಹಾಗೂ ಡೇವಿಡ್‌ ಮಿಲ್ಲರ್‌  ಪಿಟಿಐ ಚಿತ್ರ   

ಅಹಮದಾಬಾದ್ : ಡೇವಿಡ್‌ ಮಿಲ್ಲರ್‌ ಆಕರ್ಷಕ ಅರ್ಧಶತಕ ಹೊಡೆದರು. ನಂತರ ದಕ್ಷಿಣ ಆಫ್ರಿಕಾದ ಬೌಲರ್‌ಗಳ ಶಿಸ್ತುಬದ್ಧ ದಾಳಿಯೆದುರು ಭಾರತ ತಂಡದ ಆಟ ನಡೆಯಲಿಲ್ಲ. ಹರಿಣಗಳ ಪಡೆ ಭಾನುವಾರ ನಡೆದ ಟಿ20 ವಿಶ್ವಕಪ್ ಸೂಪರ್ ಎಂಟರ ಹಂತದ ಪಂದ್ಯದಲ್ಲಿ ಆತಿಥೇಯ ತಂಡವನ್ನು 76 ರನ್‌ಗಳ ದೊಡ್ಡ ಅಂತರದಿಂದ ಸೋಲಿಸಿತು.

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬ್ಯಾಟ್‌ ಮಾಡಲು ನಿರ್ಧರಿಸಿದ ದಕ್ಷಿಣ ಆಫ್ರಿಕಾ ತಂಡ ಮಿಲ್ಲರ್ (63, 35 ಎಸೆತ) ಮತ್ತು ಯುವ ತಾರೆ ಡೆವಾಲ್ಡ್ ಬ್ರೆವಿಸ್‌ (45, 29 ಎಸೆತ) ಅವರ ನಡುವಣ 97 ರನ್‌ಗಳ (ಕೇವಲ 51 ಎಸೆತ) ನಾಲ್ಕನೇ ವಿಕೆಟ್‌ ಜೊತೆಯಾಟದಿಂದ 7 ವಿಕೆಟ್‌ಗೆ 187 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಭಾರತದ ಅಗ್ರ ಬೌಲರ್ ಜಸ್‌ಪ್ರೀತ್ ಬೂಮ್ರಾ (4–0–15–3) ಮಾತ್ರ ಪರಿಣಾಮಕಾರಿ ಎನಿಸಿದರು.

ಇದು ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾರತಕ್ಕೆ ಎದುರಾದ ಎರಡನೇ ಅತಿ ದೊಡ್ಡ (ರನ್ ಅಂತರದಲ್ಲಿ) ಸೋಲು. 2019ರಲ್ಲಿ ನ್ಯೂಜಿಲೆಂಡ್‌ ವಿರುದ್ಧ ವೆಲಿಂಗ್ಟನ್‌ನಲ್ಲಿ 80 ರನ್‌ಗಳಿಂದ ಸೋತಿದ್ದು ಅತಿ ದೊಡ್ಡ ಅಂತರದ ಸೋಲಾಗಿದೆ.

ADVERTISEMENT

ಭಾರತ ತಂಡ ಒಳ್ಳೆಯ ಆರಂಭವನ್ನೇ ಪಡೆಯಲಿಲ್ಲ. ಮರ್ಕರಂ ನೇತೃತ್ವದ ತಂಡ ಆತಿಥೇಯರನ್ನು 18.5 ಓವರುಗಳಲ್ಲಿ 111 ರನ್‌ಗಳಿಗೆ ಆಲೌಟ್ ಮಾಡಿತು. ವೇಗದ ಬೌಲರ್ ಮಾರ್ಕೊ ಯಾನ್ಸೆನ್ (22ಕ್ಕೆ4) ಹೆಚ್ಚಿನ ಹಾನಿ ಎಸಗಿದರು. ಭಾರತದ ಯಾವುದೇ ಆಟಗಾರ ಎದುರಾಳಿಗಳ ದಾಳಿಯನ್ನು ವಿಶ್ವಾಸದಿಂದ ಎದುರಿಸಲಿಲ್ಲ. ಸ್ಪಿನ್ನರ್‌ಗಳಾದ ಕೇಶವ ಮಹಾರಾಜ್ (24ಕ್ಕೆ3) ಮತ್ತು ಕಾರ್ಬಿನ್ ಬಾಷ್ (12ಕ್ಕೆ2) ಅವರೂ ನಿರ್ಣಾಯಕ ಘಟ್ಟದಲ್ಲಿ ವಿಕೆಟ್‌ಗಳನ್ನು ಪಡೆದರು. ಲುಂಗಿ ಎನ್‌ಗಿಡಿ ವಿಕೆಟ್‌ ಪಡೆಯದಿದ್ದರೂ 4 ಓವರುಗಳಲ್ಲಿ ಒಂದೂ ಬೌಂಡರಿ ನೀಡದೇ 15 ರನ್ ಅಷ್ಟೇ ಕೊಟ್ಟರು. ಶಿವಂ ದುಬೆ ಭಾರತದ ಪರ ಅತಿ ಹೆಚ್ಚು ರನ್ (42, 37ಎಸೆತ) ರನ್ ಗಳಿಸಿದರು.

ದಿಟ್ಟ ನಡೆಯಲ್ಲಿ, ಸಾಂದರ್ಭಿಕ ಆಫ್‌ ಸ್ಪಿನ್ನರ್ ಏಡನ್ ಮರ್ಕರಂ (5ಕ್ಕೆ1) ದಾಳಿ ಆರಂಭಿಸಿ, ಲಯದಲ್ಲಿರುವ ಆರಂಭ ಆಟಗಾರ ಇಶಾನ್ ಕಿಶನ್ ಅವರ ವಿಕೆಟ್‌ ಪಡೆದರು. ಇಶಾನ್‌ ಖಾತೆಯನ್ನೇ ತೆರೆಯಲಿಲ್ಲ. ‘ಸ್ಟಾರ್‌ ಆಟಗಾರ’ ಅಭಿಷೇಕ್ ಶರ್ಮಾ (15, 12 ಎಸೆತ) ಅವರ ಸೊನ್ನೆಯ ಸರಮಾಲೆ ಕೊನೆಗೊಂಡರೂ ಅದರಿಂದ ಹೆಚ್ಚಿನ ಲಾಭವಾಗಲಿಲ್ಲ. ಅಭಿಷೇಕ್ ಮತ್ತು ತಿಲಕ್‌ ವರ್ಮಾ ಅವರ ವಿಕೆಟ್‌ಗಳನ್ನು ಪಡೆದ ಮಾರ್ಕೊ ಯಾನ್ಸೆನ್ ಪವರ್‌ಪ್ಲೇ (26ಕ್ಕೆ3) ಅವಧಿಯಲ್ಲೇ ಬಲವಾದ ಪೆಟ್ಟು ನೀಡಿದರು. ಭಾರತ ಇದರಿಂದ ಚೇತರಿಸಲೇ ಇಲ್ಲ.

ಇದಕ್ಕೆ ಮೊದಲು, ದಕ್ಷಿಣ ಆಫ್ರಿಕಾ ತಂಡಕ್ಕೆ ಬೂಮ್ರಾ (15ಕ್ಕೆ3) ಆರಂಭದಲ್ಲಿ ಆಘಾತ ನೀಡಿದರು. ಇದರಿಂದಾಗಿ ತಂಡ 20 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಬ್ರೆವಿಸ್ ಮತ್ತು ಮಿಲ್ಲರ್ ನಾಲ್ಕನೇ ವಿಕೆಟ್‌ ಜೊತೆಯಾಟದ ಮೂಲಕ ಇನಿಂಗ್ಸ್‌ ಕಟ್ಟಿದರು. ಕೊನೆಯಲ್ಲಿ ಟ್ರಿಸ್ಟನ್ ಸ್ಟಬ್ಸ್‌ ಅವರು ಅಜೇಯ 44 ರನ್‌ (24 ಎಸೆತ) ಗಳಿಸಿ ತಂಡ ಸವಾಲಿನ ಮೊತ್ತ ಪೇರಿಸಲು ನೆರವಾದರು.

ಈ ಹಿನ್ನಡೆಯಿಂದ ಭಾರತ ಮುಂದಿನ ಪಂದ್ಯಗಳಲ್ಲಿ ಜಿಂಬಾಬ್ವೆ ಮತ್ತು ವೆಸ್ಟ್‌ ಇಂಡೀಸ್ ವಿರುದ್ಧ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.

ಅರ್ಷದೀಪ್‌ ಸಿಂಗ್‌

ಸ್ಕೋರ್ ಕಾರ್ಡ್

ದಕ್ಷಿಣ ಆಫ್ರಿಕಾ: 7 ವಿಕೆಟ್‌ಗೆ 187 (20 ಓವರುಗಳಲ್ಲಿ)

ಮರ್ಕರಂ ಸಿ ಪಾಂಡ್ಯ ಬಿ ಅರ್ಷದೀಪ್ 4 (7ಎ)

ಡಿಕಾಕ್ ಬಿ ಬೂಮ್ರಾ 6 (7ಎ, 4x1)

ರಿಕೆಲ್ಟನ್ ಸಿ ದುಬೆ ಬಿ ಬೂಮ್ರಾ 7 (7ಎ, 6x1)

ಬ್ರೆವಿಸ್ ಸಿ ಅಭಿಷೇಕ್ ಬಿ ದುಬೆ 45 (29ಎ, 4x3, 6x3)

ಮಿಲ್ಲರ್ ಸಿ ತಿಲಕ್‌ ಬಿ ವರುಣ್ 63 (35ಎ, 4x7, 6x3)

ಸ್ಟಬ್ಸ್ ಔಟಾಗದೇ 44 (24ಎ, 4x1, 6x3)

ಯಾನ್ಸೆನ್ ಸಿ ರಿಂಕು ಸಿಂಗ್ ಬಿ ಅರ್ಷದೀಪ್ 2 (6ಎ)

ಬಾಷ್ ಸಿ ಮತ್ತು ಬಿ ಬೂಮ್ರಾ 5 (6ಎ, 4x1)

ರಬಾಡ ಔಟಾಗದೇ 0 (1ಎ)

ಇತರೆ: 11 (ಬೈ 1, ಲೆಗ್‌ಬೈ 2, ನೋಬಾಲ್ 2, ವೈಡ್‌ 6)

ವಿಕೆಟ್ ಪತನ: 1–10 (ಕ್ವಿಂಟನ್‌ ಡಿಕಾಕ್, 1.5), 2–12 (ಏಡನ್ ಮರ್ಕರಂ, 2.4), 3–20 (ರಯಾನ್ ರಿಕೆಲ್ಟನ್‌, 3.6), 4–117 (ಡೆವಾಲ್ಡ್‌ ಬ್ರೆವಿಸ್‌, 12.2), 5–152 (ಡೇವಿಡ್ ಮಿಲ್ಲರ್, 15.4), 6–158 (ಮಾರ್ಕೊ ಯಾನ್ಸೆನ್, 17.2), 7–167 (ಕಾರ್ಬಿನ್ ಬಾಷ್‌, 18.5).

ಬೌಲಿಂಗ್‌: ಅರ್ಷದೀಪ್ ಸಿಂಗ್ 4–0–28–2; ಜಸ್‌ಪ್ರೀತ್ ಬೂಮ್ರಾ 4–0–15–3; ವರುಣ್ ಚಕ್ರವರ್ತಿ 4–0–47–1; ವಾಷಿಂಗ್ಟನ್‌ ಸುಂದರ್ 2–0–17–0; ಹಾರ್ದಿಕ್ ಪಾಂಡ್ಯ 4–0–45–0; ಶಿವಂ ದುಬೆ 2–0–32–1.

ಭಾರತ: 18.5 ಓವರ್‌ಗಳಲ್ಲಿ 111

ಕಿಶನ್ ಸಿ ರಿಕೆಲ್ಟನ್ ಬಿ ಮರ್ಕರಂ 0 (4ಎ)

ಅಭಿಷೇಕ್ ಸಿ ಬಾಷ್‌ ಬಿ ಯಾನ್ಸೆನ್ 15 (12ಎ, 4x2, 6x1)

ತಿಲಕ್ ಸಿ ಡಿಕಾಕ್ ಬಿ ಯಾನ್ಸೆನ್ 1 (2ಎ)

ಸೂರ್ಯಕುಮಾರ್ ಸಿ ಬ್ರೆವಿಸ್‌ ಬಿ ಬಾಷ್‌ 18 (22ಎ, 4x2)

ವಾಷಿಂಗ್ಟನ್ ಸಿ ಡಿಕಾಕ್‌ ಬಿ ಬಾಷ್‌ 11 (11ಎ, 6x1)

ದುಬೆ ಸಿ ಎನ್‌ಗಿಡಿ ಬಿ ಯಾನ್ಸೆನ್‌ 42 (37ಎ, 4x1, 6x3)

ಪಾಂಡ್ಯ ಸಿ ಸ್ಟಬ್ಸ್‌ ಬಿ ಮಹಾರಾಜ್ 18 (17ಎ, 6x1)

ರಿಂಕು ಸಿ ಸ್ಟಬ್ಸ್‌ ಬಿ ಮಹಾರಾಜ್‌ 0 (2ಎ)

ಅರ್ಷದೀಪ್‌ ಸಿ ಸ್ಟಬ್ಸ್‌ ಬಿ ಮಹಾರಾಜ್‌ 1 (2ಎ)

ವರುಣ್‌ ಚಕ್ರವರ್ತಿ ಔಟಾಗದೇ 0 (3ಎ)

ಬೂಮ್ರಾ ಸಿ ಮರ್ಕರಂ ಬಿ ಯಾನ್ಸೆನ್‌ 0 (1ಎ)

ಇತರೆ: 5 (ಲೆಗ್‌ಬೈ 1, ವೈಡ್‌ 4)

ವಿಕೆಟ್ ಪತನ: 1-0 (ಇಶಾನ್ ಕಿಶನ್, 0.4), 2-5 (ತಿಲಕ್ ವರ್ಮಾ, 1.1), 3-26 (ಅಭಿಷೇಕ್ ಶರ್ಮಾ, 4.3), 4-43 (ವಾಷಿಂಗ್ಟನ್ ಸುಂದರ್, 7.2), 5-51 (ಸೂರ್ಯಕುಮಾರ್ ಯಾದವ್, 9.1), 6-86 (ಹಾರ್ದಿಕ್ ಪಾಂಡ್ಯ, 14.1), 7-86 (ರಿಂಕು ಸಿಂಗ್, 14.3), 8-88 (ಅರ್ಷದೀಪ್ ಸಿಂಗ್, 14.6), 9-111 (ಶಿವಂ ದುಬೆ, 18.4), 10-111 (ಜಸ್‌ಪ್ರೀತ್ ಬೂಮ್ರಾ, 18.5)

ಬೌಲಿಂಗ್‌: ಏಡನ್ ಮರ್ಕರಂ 1–0–5–1; ಮಾರ್ಕೊ ಯಾನ್ಸೆನ್ 3.5–0–22–4; ಕಗಿಸೊ ರಬಾಡ 4–0–32–0; ಲುಂಗಿ ಗಿಡಿ 4–0–15–0; ಕೇಶವ ಮಹಾರಾಜ್ 3–0–24–3, ಕಾರ್ಬಿನ್‌ ಬಾಷ್‌ 3–0–12–2

ಪಂದ್ಯದ ಆಟಗಾರ: ಡೇವಿಡ್‌ ಮಿಲ್ಲರ್‌


33 ವಿಕೆಟ್‌
ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಪರ ಅತಿ ಹೆಚ್ಚು ವಿಕೆಟ್‌ ಗಳಿಸಿದ ಬೌಲರ್‌ ಎಂಬ ಗೌರವಕ್ಕೆ ಜಸ್‌ಪ್ರೀತ್ ಬೂಮ್ರಾ (33) ಪಾತ್ರರಾದರು. ಅರ್ಷದೀಪ್‌ ಸಿಂಗ್‌ ಹಾಗೂ ಆರ್‌. ಅಶ್ವಿನ್‌ ಅವರು ತಲಾ 32 ವಿಕೆಟ್‌ ಗಳಿಸಿದ್ದಾರೆ

ಫಲಿತಾಂಶ: ದಕ್ಷಿಣ ಆಫ್ರಿಕಾಕ್ಕೆ 76 ರನ್‌ಗಳ ಜಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.