ಶಿವಮೊಗ್ಗ: 'ಈ ಸಾರಿ ಕಪ್ ನಮ್ದೇ' ಅನ್ನೋ ವ್ಯಂಗ್ಯ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಮರೆಯಾಗಿದ್ದರಿಂದ ಸಂತಸಗೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡದ ಅಭಿಮಾನಿಗಳು, ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ತಮ್ಮ ನೆಚ್ಚಿನ ತಂಡ (ಆರ್ ಸಿಬಿ) ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದನ್ನು ಕಂಡು ಮಂಗಳವಾರ ತಡರಾತ್ರಿ ಶಿವಮೊಗ್ಗದಲ್ಲಿ ಬೀದಿಗಿಳಿದು ಸಂಭ್ರಮಿಸಿದರು.
ಬೈಕ್ ಗಳಲ್ಲಿ ತಂಡ ತಂಡವಾಗಿ ರಸ್ತೆಗಿಳಿದು ಆರ್ ಸಿಬಿ ತಂಡದ ಪರ ಜಯಘೊಷ ಮಾಡುತ್ತಾ ವಿಜಯೋತ್ಸವ ಆಚರಣೆ ಮಾಡಿದರು. ಪಟಾಕಿ ಸದ್ದು ನಗರವನ್ನು ಅನುರಣಿಸಿತು. ಮೊಬೈಕ್ ಗಳ ಹಾರ್ನ್ ಸದ್ದು ಮುಗಿಲು ಮುಟ್ಟಿ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಷ್ಟ್ರೀಯ ತಂಡ ಗೆದ್ದಾಗ ನಡೆದ ಸಂಭ್ರಮಾಚರಣೆಯನ್ನು ನೆನಪಿಸಿತು.
ವಿಜಯೋತ್ಸವದ ವೇಳೆ ಅರ್ ಸಿಬಿ ತಂಡದ ಆಟಗಾರ ವಿರಾಟ್ ಕೊಹ್ಲಿ ಬೆಂಬಲಿಗರು ಗಮನ ಸೆಳೆದರು. ಕೊಯ್ಲಿ ಭಾವ ಚಿತ್ರ ಇರುವ ಟಿ ಶರ್ಟ್ ಧರಸಿ ಖುಷಿ ಪಟ್ಟರು. ಈ ಸಲ ಕಪ್ ನಮ್ದೇ ಅನ್ನೋ ಮಾತು ನಿಜವಾಗಿದ್ದು ಕಂಡು ಖುಷಿಪಟ್ಟರು. ಬಾರ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಯುವಜನರ, ಕ್ರಿಕೆಟ್ ಪ್ರಿಯರ ಜಯಘೋಷ ಟಿವಿ ಪರದೆಯ ಮುಂದೆ ಮಾರ್ದನಿಸಿತು. ಮದಿರೆಯ ಗಮ್ಮತ್ತು ಸಂಭ್ರಮಾಚರಣೆಗೆ ರಂಗು ತುಂಬಿತು.
ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆಯ ವಿನಾಯಕ ವೃತದಲ್ಲಿ ಆರ್ ಸಿ ಬಿ ಗೆಲುವಿಗೆ ಪಟಾಕಿ ಸಿಡಿಸಿ ಬೆಂಬಲಿಗರು ಸಂಭ್ರಮಿಸಿದರು.
ಹೊಸನಗರ.ತಾಲ್ಲೂಕಿನ ರಿಪ್ಪನ್ ಪೇಟೆ ವಿನಾಯಕ ವೃತದಲ್ಲಿ ಮಂಗಳವಾರ ತಡರಾತ್ರಿ ಆರ್ ಸಿ ಬಿ ಗೆಲುವಿಗೆ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.