ADVERTISEMENT

ಏಕದಿನ, ಟಿ–20 ಕ್ರಿಕೆಟ್‌ ಸರಣಿ: ಭಾರತಕ್ಕೆ ಬಂದಿಳಿದ ವೆಸ್ಟ್‌ ಇಂಡೀಸ್‌ ತಂಡ

ಪಿಟಿಐ
Published 2 ಫೆಬ್ರುವರಿ 2022, 8:31 IST
Last Updated 2 ಫೆಬ್ರುವರಿ 2022, 8:31 IST
ಭಾರತಕ್ಕೆ ಬಂದಿಳಿದ ವೆಸ್ಟ್‌ ಇಂಡೀಸ್‌ ತಂಡದ ಆಟಗಾರರು (ವಿಂಡೀಸ್‌ ಕ್ರಿಕೆಟ್‌ ಟ್ವಿಟರ್‌ ಚಿತ್ರ)
ಭಾರತಕ್ಕೆ ಬಂದಿಳಿದ ವೆಸ್ಟ್‌ ಇಂಡೀಸ್‌ ತಂಡದ ಆಟಗಾರರು (ವಿಂಡೀಸ್‌ ಕ್ರಿಕೆಟ್‌ ಟ್ವಿಟರ್‌ ಚಿತ್ರ)   

ಅಹಮದಾಬಾದ್: ಟೀಮ್‌ ಇಂಡಿಯಾ ವಿರುದ್ಧ ಫೆ.6ರಿಂದ ಆರಂಭವಾಗಲಿರುವ ಏಕದಿನ ಹಾಗೂ ಟಿ–20 ಸರಣಿಗಾಗಿ ವೆಸ್ಟ್‌ ಇಂಡೀಸ್‌ ತಂಡ ಇಂದು (ಬುಧವಾರ) ಭಾರತಕ್ಕೆ ಬಂದಿಳಿದಿದೆ.

ಫೆ.6ರಿಂದ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಬಳಿಕ ಕೋಲ್ಕತ್ತದ ಈಡನ್ ಗಾರ್ಡನ್ಸ್‌ನಲ್ಲಿ ಮೂರು ಪಂದ್ಯಗಳ ಟಿ–20 ಸರಣಿ ನಡೆಯಲಿದೆ.

‘ಬಾರ್ಬಡೋಸ್‌ನಿಂದ ಒಂದೆರಡು ದಿನಗಳ ಪ್ರಯಾಣದ ಬಳಿಕ ವೆಸ್ಟ್‌ ಇಂಡೀಸ್‌ ತಂಡ ಭಾರತಕ್ಕೆ ಬಂದಿಳಿದಿದೆ’ ಎಂದು ವಿಂಡೀಸ್‌ ಕ್ರಿಕೆಟ್‌ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದೆ.

ADVERTISEMENT

ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಆಟಗಾರರು ಆಗಮಿಸಿದ ಫೋಟೊ ಮತ್ತು ವಿಡಿಯೊವನ್ನು ವಿಂಡೀಸ್ ಕ್ರಿಕೆಟ್ ಹಂಚಿಕೊಂಡಿದೆ.

ಕೋವಿಡ್‌ ಹಿನ್ನೆಲೆಯಲ್ಲಿ ಏಕದಿನ ಸರಣಿಯನ್ನು ಕ್ರೀಡಾಂಗಣದಲ್ಲಿ ವೀಕ್ಷಿಸಲು ಪ್ರೇಕ್ಷಕರಿಗೆ ಅವಕಾಶ ನೀಡಿಲ್ಲ. ಆದರೆ, ಟಿ–20 ಸರಣಿ ವೀಕ್ಷಿಸಲು ಪ್ರೇಕ್ಷಕರಿಗೆ ಪಶ್ಚಿಮ ಬಂಗಾಳ ಸರ್ಕಾರ ಅನುಮತಿ ನೀಡಿದೆ.

ಫೆ. 6, 9 ಮತ್ತು 11 ರಂದು ಏಕದಿನ ಸರಣಿ ನಡೆಯಲಿದೆ. ಫೆ. 16, 18 ಮತ್ತು 20 ರಂದು ಟಿ–20 ಸರಣಿ ನಡೆಯಲಿದೆ.

ಇತ್ತೀಚೆಗಷ್ಟೇ ಮುಕ್ತಾಯಗೊಂಡ ಟಿ–20 ಸರಣಿಯಲ್ಲಿ ವೆಸ್ಟ್‌ ಇಂಡೀಸ್‌, ಇಂಗ್ಲೆಂಡ್‌ ತಂಡವನ್ನು ಸೋಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.