ಬೆಂಗಳೂರು: ಚೊಚ್ಚಲ ಕಪ್ ಗೆಲ್ಲುವ ಉತ್ಸಾಹದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳಿಗೆ ಶುಭ ಕೋರಿ ನಿರ್ದೇಶಕ ಎಸ್.ಎಸ್.ರಾಜಮೌಳಿ ಭಾವನಾತ್ಮಕ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.
ನಾಳೆ(ಜೂನ್ 03) ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಫೈನಲ್‌ನಲ್ಲಿ ಉಭಯ ತಂಡಗಳು ಕಪ್‌ಗಾಗಿ ಸೆಣಸಾಡಲಿವೆ.
‘ಶ್ರೇಯಸ್ ಅಯ್ಯರ್... ಈ ವ್ಯಕ್ತಿ ದೆಹಲಿ ತಂಡಕ್ಕೆ ಕ್ಯಾಪ್ಟನ್ ಆದಾಗ ಆ ತಂಡವನ್ನು ಫೈನಲ್‌ಗೆ ಕರೆದೊಯ್ಯತ್ತಾನೆ... ಇವರ ನಾಯಕತ್ವದಲ್ಲಿ ಕೋಲ್ಕತ್ತ ಕಪ್ ಗೆದ್ದಿದೆ. 11 ವರ್ಷಗಳ ನಂತರ ಪಂಜಾಬ್ ಅನ್ನು ಫೈನಲ್‌ಗೆ ತಲುಪಿಸಿದ್ದಾರೆ. ಟ್ರೋಪಿ ಗೆಲ್ಲುವುದಕ್ಕೆ ಇವರು ಅರ್ಹರು’ ಎಂದು ಶ್ರೇಯಸ್ ಆಟದ ವೈಖರಿ ಬಗ್ಗೆ ಎಕ್ಸ್ ಪೋಸ್ಟ್‌ನಲ್ಲಿ ಪ್ರಶಂಸಿಸಿದ್ದಾರೆ.
‘ಮತ್ತೊಂದೆಡೆ, ವಿರಾಟ್ ಕೊಹ್ಲಿ... ವರ್ಷದಿಂದ ವರ್ಷಕ್ಕೆ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ... ಸಾವಿರಾರು ರನ್ ಸಿಡಿಸಿದ್ದಾರೆ... ಕೊಹ್ಲಿ ಕೂಡ ಕಪ್ ಗೆಲ್ಲಲ್ಲು ಅರ್ಹರು’ ಎಂದಿದ್ದಾರೆ.
‘ಫಲಿತಾಂಶ ಏನೇ ಆದರೂ ಅದು ನನಗೆ ನೋವನ್ನುಂಟು ಮಾಡಲಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.