ADVERTISEMENT

ಕಾಡಿದ ಬೆಳಕು: ಆಸ್ಟ್ರೇಲಿಯಾ ಇಲೆವನ್‌ಗೆ ಸರಣಿ ಜಯ

ನ್ಯೂಜಿಲೆಂಡ್ ಇಲೆವನ್ ಎದುರಿನ ಅಭ್ಯಾಸ ಪಂದ್ಯ; ಯಂಗ್‌ ಸ್ಫೋಟಕ ಶತಕ ವ್ಯರ್ಥ

​ಪ್ರಜಾವಾಣಿ ವಾರ್ತೆ
Published 10 ಮೇ 2019, 18:58 IST
Last Updated 10 ಮೇ 2019, 18:58 IST
ಅಮೋಘ ಬ್ಯಾಟಿಂಗ್‌ ಪ್ರದರ್ಶಿಸಿದ ಸ್ಟೀವ್‌ ಸ್ಮಿತ್‌ –ಎಎಫ್‌ಪಿ ಚಿತ್ರ
ಅಮೋಘ ಬ್ಯಾಟಿಂಗ್‌ ಪ್ರದರ್ಶಿಸಿದ ಸ್ಟೀವ್‌ ಸ್ಮಿತ್‌ –ಎಎಫ್‌ಪಿ ಚಿತ್ರ   

ಬ್ರಿಸ್ಬೇನ್‌: ಸ್ಟೀವ್ ಸ್ಮಿತ್ ಮತ್ತೊಮ್ಮೆ ಮಿಂಚಿನ ಬ್ಯಾಟಿಂಗ್ ಮಾಡಿದರು. ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಪ್ರೇಕ್ಷಕರನ್ನು ರಂಜಿಸಿದರು. ಇವರಿಬ್ಬರ ಉತ್ತಮ ಆಟದ ನೆರವಿನಿಂದ ಆಸ್ಟ್ರೇಲಿಯಾ ಇಲೆವನ್‌ ತಂಡ ಗೆಲುವಿನ ನಗೆ ಬೀರಿತು.

ನ್ಯೂಜಿಲೆಂಡ್‌ ಇಲೆವನ್‌ ಎದುರಿನ ಕೊನೆಯ ಅಭ್ಯಾಸ ಪಂದ್ಯದಲ್ಲಿ ಆತಿಥೇಯರು ಡಕ್ವರ್ಥ್‌ ಲೂಯಿಸ್‌ ನಿಯಮದಡಿ ಐದು ವಿಕೆಟ್‌ಗಳಿಂದ ಗೆದ್ದಿತು. ಈಮೂಲಕ ಸರಣಿಯನ್ನು 2–1ರಿಂದ ತನ್ನದಾಗಿಸಿಕೊಂಡಿತು.

ಮಂದ ಬೆಳಕು ಕಾಡಿದ ಪಂದ್ಯದಲ್ಲಿ ಸ್ಟೀವ್‌ ಸ್ಮಿತ್‌ (ಅಜೇಯ 91; 108 ಎಸೆತ, 10 ಬೌಂಡರಿ) ಹಾಗೂ ಗ್ಲೆನ್‌ ಮ್ಯಾಕ್ಸ್‌ವೆಲ್‌ (70; 48 ಎ, 3 ಸಿ, 6 ಬೌಂ) ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ADVERTISEMENT

ಮೊದಲು ಬ್ಯಾಟಿಂಗ್‌ ಮಾಡಿದ ನ್ಯೂಜಿಲೆಂಡ್‌ ಇಲೆವನ್‌ 50 ಓವರ್‌ಗಳಲ್ಲಿ ಒಂಬತ್ತು ವಿಕೆಟ್‌ಗಳಿಗೆ 286 ರನ್‌ ಗಳಿಸಿತು. ಉತ್ತರವಾಗಿ ಆಸ್ಟ್ರೇಲಿಯಾ 44 ಓವರ್‌ಗಳಲ್ಲಿ ಐದು ವಿಕೆಟ್‌ಗೆ 248 ರನ್‌ ಗಳಿಸಿತು. ಈ ಸಂದರ್ಭದಲ್ಲಿ ಬೆಳಕಿನ ಅಭಾವ ಕಾಡಿತು. ಹೀಗಾಗಿ ಡಕ್ವರ್ಥ್ ಲೂಯಿಸ್ ನಿಯಮದಡಿ ಆತಿಥೇಯರನ್ನು ವಿಜಯಿ ತಂಡ ಎಂದು ಘೋಷಿಸಲಾಯಿತು.

ನ್ಯೂಜಿಲೆಂಡ್‌‍ಪರ ವಿಲ್‌ ಯಂಗ್‌ ಮತ್ತೆ ಶತಕ ಸಿಡಿಸಿ ಮಿಂಚಿದರು. ಪ್ಯಾಟ್‌ ಕಮಿನ್ಸ್‌ ಹಾಗೂ ಮಿಷೆಲ್‌ ಸ್ಟಾರ್ಕ್‌ ಒಳಗೊಂಡ ವೇಗದ ದಾಳಿಗೆ ದಿಟ್ಟ ಉತ್ತರ ನೀಡಿದ ಅವರು 111 (108 ಎ, 3 ಸಿ, 13 ಬೌಂ) ರನ್‌ ಗಳಿಸಿದರು. ಆರಂಭಿಕ ಆಟಗಾರ ಜಾರ್ಜ್‌ ವರ್ಕರ್‌ (59) ಯಂಗ್‌ಗೆ ಉತ್ತಮ ಸಹಕಾರ ನೀಡಿದರು.

ಸಂಕ್ಷಿಪ್ತ ಸ್ಕೋರ್‌
ನ್ಯೂಜಿಲೆಂಡ್:
50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 286
ವಿಲ್‌ ಯಂಗ್‌ 111, ಜಾರ್ಜ್‌ ವರ್ಕರ್‌ 59; ಪ್ಯಾಟ್‌ ಕಮಿನ್ಸ್‌ 32ಕ್ಕೆ4

ಆಸ್ಟ್ರೇಲಿಯಾ: 44 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 248
ಸ್ಟೀವ್‌ ಸ್ಮಿತ್‌ ಅಜೇಯ 91, ಗ್ಲೆನ್‌ ಮ್ಯಾಕ್ಸ್‌ವೆಲ್‌ 70

ಫಲಿತಾಂಶ: ಆಸ್ಟ್ರೇಲಿಯಾಗೆ ಐದು ವಿಕೆಟ್‌ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.