ADVERTISEMENT

FIFA 2022 | ಅರ್ಜೆಂಟೀನಾ ವಿರುದ್ಧ ಗೆಲುವು; ಸೌದಿಯಲ್ಲಿ ಇಂದು ಸಾರ್ವತ್ರಿಕ ರಜೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ನವೆಂಬರ್ 2022, 7:05 IST
Last Updated 23 ನವೆಂಬರ್ 2022, 7:05 IST
ಅರ್ಜೆಂಟೀನಾ ವಿರುದ್ಧ ಗೆಲುವಿನ ಬಳಿಕ ಸೌದಿಯ ಕ್ರೀಡಾ ಸಚಿವ ರಾಜಕುಮಾರ ಅಬ್ದುಲ್ ಅಜೀಜ್‌ ಬಿನ್‌ ತುರ್ಕಿ ಅವರ ಸಂಭ್ರಮಾಚರಣೆ  (ಪಿಟಿಐ ಚಿತ್ರ)
ಅರ್ಜೆಂಟೀನಾ ವಿರುದ್ಧ ಗೆಲುವಿನ ಬಳಿಕ ಸೌದಿಯ ಕ್ರೀಡಾ ಸಚಿವ ರಾಜಕುಮಾರ ಅಬ್ದುಲ್ ಅಜೀಜ್‌ ಬಿನ್‌ ತುರ್ಕಿ ಅವರ ಸಂಭ್ರಮಾಚರಣೆ (ಪಿಟಿಐ ಚಿತ್ರ)   

ನವದೆಹಲಿ: ಫಿಫಾ ಫುಟ್‌ಬಾಲ್‌ ವಿಶ್ವಕ‍ಪ್‌ ಪಂದ್ಯಕೂಟದಲ್ಲಿ ಅರ್ಜೆಂಟೀನಾವನ್ನು ಸೌದಿ ಅರೇಬಿಯಾ ತಂಡ 2–1 ಗೋಲುಗಳಿಂದ ಮಣಿಸಿದೆ. ಈ ಐತಿಹಾಸಿಕ ಜಯವನ್ನು ಸಂಭ್ರಮಿಸಲು ಸೌದಿ ಸರ್ಕಾರ ಬುಧವಾರ ಸಾರ್ವತ್ರಿಕ ರಜೆ ಘೋಷಣೆ ಮಾಡಿದೆ.

ಬುಧವಾರ ಎಲ್ಲ ಸಾರ್ವಜನಿಕ, ಖಾಸಗಿ ಸಂಸ್ಥೆಗಳಿಗೆ ರಜೆ ಸಾರಲಾಗಿದೆ. ಶಾಲಾ ಕಾಲೇಜುಗಳಿಗೂ ರಜೆ ನೀಡಲಾಗಿದೆ.

ಸೌದಿ ದೊರೆ ಕಿಂಗ್ ಸಲ್ಮಾನ್‌ ರಜೆ ಘೋಷಣೆ ಮಾಡಿ ಮಂಗಳವಾರ ಆದೇಶ ಹೊರಡಿಸಿದ್ದಾರೆ.

ADVERTISEMENT

ಸೌದಿಯಲ್ಲಿ ಈಗ ಶಾಲೆ ಕಾಲೇಜುಗಳಲ್ಲಿ ವಾರ್ಷಿಕ ಪರೀಕ್ಷೆ ನಡೆಯುತ್ತಿದ್ದು, ಬುಧವಾರ ನಿಗದಿಯಾಗಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಸೌದಿ ರಾಜಧಾನಿ ರಿಯಾದ್‌ನಲ್ಲಿ ಗೆಲುವಿನ ಸಂಭ್ರಮ ಮುಗಿಲು ಮುಟ್ಟಿದೆ.

ಇದರ ಜತೆಗೆ ಸೌದಿಯ ಪ್ರಮುಖ ಥೀಮ್‌ ಪಾರ್ಕ್‌, ಮನೋರಂಜನಾ ತಾಣಗಳ ಪ್ರವೇಶ ಶುಲ್ಕವನ್ನು ರದ್ದು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.